ಬೀದರ್: ಶಾಲಾ ಶಿಕ್ಷಣ ಇಲಾಖೆ 9ನೇ ಪಾಸಾದ ವಿದ್ಯಾರ್ಥಿಗಳಿಗೆ ಮೇ 1 ರಿಂದ ನಡೆಸಲು ಉದ್ದೇಶಿಸಿರುವ ವಿಶೇಷ ತರಗತಿಗಳನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಆಗ್ರಹಿಸಿದೆ.
ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ಹೆಚ್ಚುವರಿ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ದೊಡ್ಡೆ ಅವರಿಗೆ ಸಲ್ಲಿಸಿದರು.
ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ಹೆಚ್ಚುವರಿ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ದೊಡ್ಡೆ ಅವರಿಗೆ ಸಲ್ಲಿಸಿದರು.
ಈಗಾಗಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೆಚ್ಚುವರಿ ತರಗತಿ, ಕಲಿಕಾಸರೆ, ಮರು ಸಿಂಚನ ಮತ್ತಿತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹೀಗಾಗಿ 9ನೇ ಪಾಸಾದವರಿಗೆ ವಿಶೇಷ ತರಗತಿ ನಡೆಸಬೇಕು ಎಂಬುದು ಅವೈಜ್ಞಾನಿಕ. ಇದಕ್ಕೆ ಶಿಕ್ಷಕ ಸಮುದಾಯದ ವಿರೋಧ ಇದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಬಿಸಿಲು ಇದೆ. ಆರೋಗ್ಯ ಸಚಿವರೇ ಮಧ್ಯಾಹ್ನ ಮನೆಯಿಂದ ಹೊರ ಬರದಂತೆ ಜನರಿಗೆ ಸಲಹೆ ನೀಡಿದ್ದಾರೆ. ಬಿಸಿಲಲ್ಲಿ ಶಾಲೆಗೆ ತೆರಳುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ಆಧರಿಸಿ ಮಕ್ಕಳಿಗೆ ವರ್ಷದ 220 ದಿನಗಳ ಶಾಲಾ ಅವಧಿ ನಿಗದಿಪಡಿಸಲಾಗಿದೆ. ಶಾಲಾ ದಿನಗಳನ್ನು ಹೆಚ್ಚಿಸುವುದು ಇದರ ಉಲ್ಲಂಘನೆಯಾಗಲಿದೆ ಎಂದು ತಿಳಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಬಾಪೂರೆ, ಕಾರ್ಯದರ್ಶಿ ಗಣೇಶ ಬಿರಾದಾರ, ಸಹ ಕಾರ್ಯದರ್ಶಿ ತಾಜೊದ್ದಿನ್, ಸಂತೋಷಕುಮಾರ ಚಲುವಾ, ಸುಧಾರಾಣಿ, ಸಿದ್ದಮ್ಮ, ಶಾಬುದ್ದೀನ್, ಸಂಜೀವ್ ಸೂರ್ಯವಂಶಿ, ವೆಂಕಟರಾವ್ ಡೊಂಬಾಳೆ, ದಿನೇಶ್ ತಾಂದಳೆ, ಆನಂದ ದೀನೆ, ಕ್ಲೈಮೆಟ್, ಯಾದುಲ್ಲಾ ಬೇಗ್, ಬಾಬರ್ ಮತ್ತಿತರರು ಇದ್ದರು.
——————-
——————-