ಅ. 6 ರಂದು ಮಹರ್ಷಿ ವಾಲ್ಮೀಕಿರವರ ಮೂರ್ತಿ ಅನಾವರಣ ಕಾರ್ಯಕ್ರಮ
ಬೀದರ್: ತಾಲೂಕಿನ ಕೋಳಾರ್ (ಕೆ) ಗ್ರಾಮದಲ್ಲಿ ಅ. 6 ರಂದು ಸೋಮವಾರ ಸಾಯಂಕಾಲ 5 ಗಂಟೆಗೆ ಮಹರ್ಷಿ ವಾಲ್ಮೀಕಿರವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮ ನಡೆಯಲಿದೆ.
ಹಳ್ಳಿಖೇಡ್ (ಕೆ) ವಾಡಿ ಮಹರ್ಷಿ ವಾಲ್ಮೀಕಿ ಆಶ್ರಮದ ಪೂಜ್ಯರಾದ ಶ್ರೀ ದತ್ತಾತ್ರೇಯ ಗುರುಜಿ ಹಾಗೂ ಶ್ರೀ ವಾಲ್ಮೀಕಿ ಮಹಾರಾಜ, ಜೈ ಭಾರತ ಮಾತಾ ಸೇವಾ ಸಮಿತಿಯ ಸಂಸ್ಥಾಪಕರಾದ ಪೂಜ್ಯ ಶ್ರೀ ನಿರಗುಡಿ ಹವಾ ಮಲ್ಲಿನಾಥ ಮಹಾರಾಜ, ಮಾತಾ ಮಾಣೀಕೇಶ್ವರಿ ಆಶ್ರಮದ ಪೂಜ್ಯರಾದ ಶ್ರೀ ಶಾಂತಿಬಾಬಾ, ಅಲಿಯಂಬರ್ ವೀರನಾಥ ಮಂದಿರದ ಪೂಜ್ಯರಾದ ಶ್ರೀ ಬಾಬುರಾವ್ ಮುತ್ಯಾ ಇವರುಗಳು ದಿವ್ಯ ಸಾನಿಧ್ಯ ವಹಿಸುವರು.

ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಶೈಲೇಂದ್ರ ಕೆ. ಬೆಳ್ದಾಳೆ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಸಾಗರ ಈಶ್ವರ್ ಖಂಡ್ರೆ, ಮಾಜಿ ಸಚಿವ ಬಂಡೆಪ್ಪಾ ಖಾಸೆಂಪೂರ್, ಮಾಜಿ ಶಾಸಕ ಅಶೋಕ ಖೇಣಿ, ಕರ್ನಾಟಕ ಮಿನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷೆ ಶ್ರೀಮತಿ ಮಾಲಾ ಬಿ.ನಾರಾಯಣರಾವ್, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷರಾದ ಅಮೃತರಾವ್ ಚಿಮಕೋಡೆ, ಟೋಕರೆ ಕೋಳಿ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್, ಕೋಳಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ ಶರಗಾರ್, ಪ್ರಮುಖರಾದ ಚಂದ್ರಾಸಿAಗ್ ಜೀ, ಮಲ್ಲಿಕಾರ್ಜುನ್ ಬಿರಾದಾರ್, ಸುನೀಲ ಬಾವಿಕಟ್ಟಿ, ಮಲ್ಲಿಕಾರ್ಜುನ್ ಶಂಭು, ಸುನೀಲ ಖಾಸೆಂಪೂರ್, ಮಹೇಶ ಪಾಲಂ, ಡಾ. ವಿಜಯಕುಮಾರ ಕೋಟೆ, ಸತೀಷ ಕುಲಕರ್ಣಿ, ಶ್ರೀಮತಿ ಪಾರ್ವತಿ ವಿ. ಸೋನಾರೆ, ಮಾಣೀಕ ನೇಳಗಿ, ಸತ್ಯಪ್ರಕಾಶ ಹಳ್ಳಿಖೇಡಕರ್, ಶನ್ಮೂಖಪ್ಪಾ ಶೇಕಾಪೂರ್, ಮಾರುತಿ ಚಾಂಬೋಳ್, ಪೀರಪ್ಪಾ ಯರನಳ್ಳಿ, ಸುರೇಶ ಶಂಭು, ಓಂಕಾರ್ ಔಂಟಿ ಸೇರಿದಂತೆ ಅನೇಕ ಮುಖಂಡರುಗಳು ಅತಿಥಿಗಳಾಗಿ ಆಗಮಿಸುವರು.ಆದ್ದರಿಂದ ಸಮಾಜ ಬಾಂಧವರು, ಮಹರ್ಷಿ ವಾಲ್ಮೀಕಿರವರ ಭಕ್ತಾದಿಗಳು, ಮುಖಂಡುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಶ್ರೀ ವಾಲ್ಮೀಕಿ ಸೇವಾ ಸಮಿತಿಯ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
———————–
