ಸಾಧನೆಗೆ ಶಿಕ್ಷಣ ಸಾಧನವಾಗಿಸಿಕೊಳ್ಳಿ – ಸ್ವಾತ್ಮಾನಂದ ಸ್ವಾಮೀಜಿ
ಬೀದರ್: ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಗೆ ಶಿಕ್ಷಣವನ್ನು ಸಾಧನವಾಗಿಸಿಕೊಳ್ಳಬೇಕು ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸ್ವಾತ್ಮಾನಂದ ಸ್ವಾಮೀಜಿ ಹೇಳಿದರು.
ನಗರದ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರ ನಡೆದ ಬಿ.ಎ. ಹಾಗೂ ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಧನೆ ಇಲ್ಲದ ಜೀವನಕ್ಕೆ ಮೌಲ್ಯ ಇಲ್ಲ ಎಂದು ತಿಳಿಸಿದರು.
ಒಳ್ಳೆಯವರ ಸಹವಾಸ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಮಾತನಾಡಿ, ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಆರ್.ವಿ. ಗಂಗಶೆಟ್ಟಿ ಮಾತನಾಡಿ, ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಳ್ಳಬೇಕು. ಕಠಿಣ ಪರಿಶ್ರಮದ ಮೂಲಕ ಅದನ್ನು ಸಾಧಿಸಬೇಕು ಎಂದು ಹೇಳಿದರು.
ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ, ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ, ಉಪನ್ಯಾಸಕ ಸೂರ್ಯಕಾಂತ ಐನಾಪುರೆ ಮಾತನಾಡಿದರು. ವಿದ್ಯಾರ್ಥಿನಿಯರಾದ ದೀಪಿಕಾ, ಧನಲಕ್ಷ್ಮಿ, ಭವಾನಿ, ಶಿವಾನಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಈಶ್ವರ ರೆಡ್ಡಿ, ರಾಜಶೇಖರ ಸಜ್ಜನ್, ಬಸವರಾಜ ಬಿರಾದಾರ, ಮಂಗಲಾ ಲಕ್ಕಶೆಟ್ಟಿ, ರಾಜಮ್ಮ ನೇಳಗೆ, ವಿಜಯಲಕ್ಷ್ಮಿ ಶೆಟಕಾರ್, ಸಪ್ನಾ ಸ್ವಾಮಿ, ಅರ್ಚನಾ ಹಲಬುರ್ಗೆ, ಶ್ವೇತಾ ಯದಲಾಪುರೆ, ಆಕಾಶ್ ಜಮಾದಾರ್ ಶೋಭಾ ಇದ್ದರು. ಉಪನ್ಯಾಸಕಿ ರಾಖಿ ಕಾಡಗೆ ಸ್ವಾಗತಿಸಿದರು. ಶಾಂತಮ್ಮ, ಸುಖೇಸಿನಿ ನಿರೂಪಿಸಿದರು. ಅಂಜಲಿ ವಂದಿಸಿದರು.