Friday, May 23, 2025
Homeಶಿಕ್ಷಣಸೃಷ್ಟಿಯ ಈ ಜಗದಲ್ಲಿ ಶಿಕ್ಷಣಕ್ಕೆ ತುಂಬಾನೇ ಮಹತ್ವವಿದೆ-ಉಸ್ತುವಾರಿ ಕಾರ್ಯದರ್ಶಿ ಡಿ.ರಣದೀಪ್

ಸೃಷ್ಟಿಯ ಈ ಜಗದಲ್ಲಿ ಶಿಕ್ಷಣಕ್ಕೆ ತುಂಬಾನೇ ಮಹತ್ವವಿದೆ-ಉಸ್ತುವಾರಿ ಕಾರ್ಯದರ್ಶಿ ಡಿ.ರಣದೀಪ್

ಸೃಷ್ಟಿಯ ಈ ಜಗದಲ್ಲಿ ಶಿಕ್ಷಣಕ್ಕೆ ತುಂಬಾನೇ
ಮಹತ್ವವಿದೆ-ಉಸ್ತುವಾರಿ ಕಾರ್ಯದರ್ಶಿ ಡಿ.ರಣದೀಪ್
ಬೀದರ್ : ಸೃಷ್ಟಿಯ ಈ ಜಗದಲ್ಲಿ ಶಿಕ್ಷಣಕ್ಕೆ ತುಂಬಾನೇ ಮಹತ್ವವಿದ್ದು, ಇದು ಜೀವನದಲ್ಲಿನ ಅಂಧಕಾರವನ್ನು ದೂರ ಮಾಡಿ ಕತ್ತಲೆಯ ಬದುಕಿಗೆ ಬೆಳಕನ್ನು ನೀಡಿ ಭವಿಷ್ಯವನ್ನು ನಿರ್ಮಾಣ ಮಾಡುತ್ತದೆ ಎಂದು ಬೆಂಗಳೂರು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳಾದ ಡಿ.ರಣದೀಪ್ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ ಬೀದರ ಹಾಗೂ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿμÁ್ಠನ ಕೋರ ವಿಜ್ಞಾನ ಚಟುವಟಿಕೆ ಕೇಂದ್ರದ ವತಿಯಿಂದ 7ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಮಕ್ಕಳಿಗೆ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಮಾತನಾಡಿ, ಮಕ್ಕಳಿಗೆ ಪಠ್ಯ ವಿಷಯಗಳನ್ನು ಹೊರತುಪಡಿಸಿ ರಜಾ ಅವಧಿಯಲ್ಲಿ ಇತರೆ ವಿಷಯಗಳಾದ ಚಿತ್ರಕಲೆ, ಪೇಂಟಿಂಗ್ಸ್, ನೃತ್ಯ ಕಲೆ, ರಾಕೆಟ್ ಅವಿಷ್ಕಾರ, ಹಿಂದುಸ್ತಾನಿ ಸಂಗೀತ, ಕೊಳಲು ವಾದ್ಯ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿದ್ದ 130 ಮಕ್ಕಳಿಗೆ ಪ್ರೇರೆಪಿಸಿದರು.
ಈ ಸಂದರ್ಭದಲ್ಲಿ ಬೀದರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಲೀಂ ಪಾಷಾ, ಎಸ್‍ಎಸ್‍ಕೆ.ಯ ಜಿಲ್ಲಾ ಉಪಯೋಜನಾ ಅಧಿಕಾರಿಗಳಾದ ಸಂಗ್ರಾಮಪ್ಪ, ಆರ್.ಎಂ.ಎಸ್.ಎ.ದ ಜಿಲ್ಲಾ ಉಪಯೋಜನಾ ಅಧಿಕಾರಿಗಳಾದ ಗೋಪಾಲ ಪಿ., ಗುಂಡಪ್ಪ ಹುಡುಗೆ, ವಿಷಯ ಪರಿವೀಕ್ಷಕರಾದ ಫುರ್ಖಾನ್ ಪಾಷಾ, ಅಗಸ್ತ್ಯ ವಿಜ್ಞಾನ ಕೇಂದ್ರ ಬೀದರನ ಮುಖ್ಯಸ್ಥರಾದ ಬಾಬುರಾವ್ ಎನ್.ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು.
*****
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3