ಬೀದರ್: ಐಟಿಐ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ
ಬೀದರ್ : ಬೀದರ ಜಿಲ್ಲೆಯ ಸರಕಾರಿ/ಅನುದಾನಿತ ಐಟಿಐ ಗಳ ವಿವಿಧ ವೃತ್ತಿಗಳಗೆ 2025-26ನೇ ಶೈಕ್ಷಣಿಕ ಸಾಲಿನ ಪ್ರವೇಶಕಾಗಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಅಹ್ವಾನಿಸಿದ್ದು, ಮೆರಿಟ ಕಮ್ ರಿಜರ್ವೇಶನ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು, ಹತ್ತನೇ ಪಾಸಾದ, 14 ವರ್ಷ ಮೇಲ್ಪಟ್ಟ ಹಾಗೂ ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ / 8ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಬೆಸುಗೆಗಾರ ವೃತ್ತ್ತಿಗೆ (ವೆಲ್ಡರ್ ಟ್ರೇಡ್) ವಿದ್ಯಾರ್ಥಿಗಳು ದಿನಾಂಕ 09-05-2025 ರಿಂದ 28-05-2025ರ ವರೆಗೆ ಅರ್ಜಿಯನ್ನು ಆನ್‌ಲೈನ್ ವೆಬ್‌ಸೈಟ http://cite.karnataka.gov.in ನಲ್ಲಿ ಸಲ್ಲಿಸಬಹುದು ಅಥವಾ ಸಮೀಪದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ Help Desk ಗಳಲ್ಲಿ ಮಾಹಿತಿ ಪಡೆದು ಅಲ್ಲಿಯೆ ಅರ್ಜಿ ಹಾಕಬಹುದು ಅಥವಾ ಯಾವುದೇ ಸೈಬರ್ ಕಫೆನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬೀದರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬೀದರ (9901097655), (7259854729), ಹುಮನಾಬಾದ (9449041472), ಔರಾದ (9740314795), ಬಸವಕಲ್ಯಾಣ (9945834467), ಭಾಲ್ಕಿ (9110412264) ಹಾಗೂ ಕಮಲನಗರ (9448349888) ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
————–
————–