Friday, January 16, 2026
HomeUncategorizedಧರೆ ಜನರಿಗೆ ಸನ್ಮಾರ್ಗ ತೋರಿದ ಮಹರ್ಷಿ ವಾಲ್ಮೀಕಿ

ಧರೆ ಜನರಿಗೆ ಸನ್ಮಾರ್ಗ ತೋರಿದ ಮಹರ್ಷಿ ವಾಲ್ಮೀಕಿ

ಧರೆ ಜನರಿಗೆ ಸನ್ಮಾರ್ಗ ತೋರಿದ ಮಹರ್ಷಿ ವಾಲ್ಮೀಕಿ

ಅನೇಕ ಸಂತರು, ಮಹಾತ್ಮರು, ಋಷಿಮುನಿಗಳು ಈ ಧರಣಿಯಲ್ಲಿ ಜನ್ಮ ತಾಳಿ ಲೋಕ ಕಲ್ಯಾಣಕ್ಕಾಗಿ ತಮ್ಮದೇ ಕೊಡುಗೆ ನೀಡಿ ಶಾಶ್ವತವಾಗಿ ಜನ ಮಾನಸದಲ್ಲಿ ಉಳಿದಿದ್ದಾರೆ. ಅಂತಹ ಮಹಾನ ಋಷಿಗಳಲ್ಲಿ ಮಹರ್ಷಿ ವಾಲ್ಮೀಕಿ ಮುನಿಗಳು ಜಗತ್ತಿನ ಮೊಟ್ಟ ಮೊದಲ ಮಹಾಕಾವ್ಯ *ರಾಮಾಯಣ* ನೀಡುವ ಮೂಲಕ ಜಗಜನರ ಹೃದಯದಲ್ಲಿ ಅರಿವಿನ ಬೆಳಕನು ಮೂಡಿಸುತ ಸನ್ಮಾರ್ಗ ತೋರಿದ್ದಾರೆ.

ಇತಿಹಾಸಕಾರರ ಅಭಿಪ್ರಾಯದಂತೆ ಕ್ರಿ.ಪೂ.೫೦೦ ಕ್ಕೂ ಪೂರ್ವದಲ್ಲಿಯೆ ಉತ್ತರ ಭಾರತದಲ್ಲಿ ಹರಿಯುವ ಸರಯು ನದಿಯ ಪಕ್ಕದಲ್ಲಿ ಬೇಟೆಗಾರರನಾದ ಪ್ರಚೇತಸನನ ಮಗನಾಗಿ ಜನ್ಮತಾಳಿದ ಮಹರ್ಷಿ ವಾಲ್ಮೀಕಿಯವರ ಮೊದಲ ಹೆಸರು ರತ್ನಾಕರ.

ಮಹಾತೇಜಸ್ವಿಯಾದ ರತ್ನಾಕರ ಅಪಾರ ತಪವಗೈದರು ಎಷ್ಟೊಂದು ತಪಸ್ಸು ಮಾಡಿದರೆಂದರೆ ಅವರ ಮೈತುಂಬ ಹುತ್ತ ಬೆಳೆದು ಹುತ್ತಿನಲ್ಲಿಯೇ ಅವರು ಮುಳುಗಿಹೋಗಿದ್ದರು.ದಿವ್ಯ ಜ್ಞಾನವನ್ನು ಪಡೆದು ರತ್ನಾಕರ ಹುತ್ತಿನಿಂದ ಹೊರಬಂದ ಕಾರಣ ಅವರು ವಾಲ್ಮೀಕಿ ನಾಮದಿಂದ ಧರೆಯವರ ಮನೆಮನಗಳಲ್ಲಿ ಅಚ್ಚೊತ್ತಿದ್ದಾರೆ. ಸಂಸ್ಕೃತದಲ್ಲಿ ವಾಲ್ಮೀಕ ಅಂದರೆ *ಹುತ್ತು*
ಮಹಾಜ್ಞಾನಿಯಾದ ಮಹರ್ಷಿ ವಾಲ್ಲೀಕಿಯವರು ಒಂದು ಸಲ ತನ್ನ ಶಿಷ್ಯ ಭರದ್ವಾಜನೊಂದಿಗೆ ತಮಸಾ ನದಿ ದಡದ ಪಕ್ಕದಿಂದ ಹೋಗುತ್ತಿರುವಾಗ ಅಲ್ಲಿ ಹರಿಯುತ್ತಿರುವ ಶುಭ್ರ ಜಲ ಹೂವು ಹಸಿರಿನಿಂದ ಕಂಗೊಳಿಸುತ್ತಿರುವ ಪರಿಸರ ಋಷಿಗಳ ಮನವನು ಸೆಳೆಯಿತು.

ಆನಂದಿತರಾದ ಮುನಿಗಳು ತಮ್ಮ ಶಿಷ್ಯ ಭರದ್ವಾಜನಿಗೆ ಸಂಧ್ಯಾವಂದನೆಗೆ ಸಿದ್ಧತೆ ಮಾಡಲು ತಿಳಿಸಿ ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತಿದ್ದರು ಅನತಿ ದೂರದಲ್ಲಿ ಎರಡು ಕ್ರೌಂಚ್ ಪಕ್ಷಿಗಳು ಮಿಲನದಲ್ಲಿ ಲೀನವಾಗಿ ಅಪರಿಮಿತ ಸುಖ ಪಡೆಯುತ್ತಿದ್ದವು ಅದೇ ಕ್ಷಣದಲ್ಲಿ ಎಲ್ಲಿಂದಲೊ ಬಂದ ಬಾಣ ಕ್ರೌಂಚ್ ಪಕ್ಷಿಗೆ ತಗುಲಿತು ವಿಲವಿಲ ಒದ್ದಾಡುತಿದ್ದ ಪಕ್ಷಿಯನ್ನು ಕಂಡ ವಾಲ್ಮೀಕಿಯವರ ಕರಳು ಕಿವುಚಿದಂತಾಗಿ ಬಾಯಿಂದ ಎಲೈ ಬೇಟೆಗಾರನೆ ಮಿಲದಲ್ಲಿ ತಲ್ಲೀನವಾದ ಕ್ರೌಂಚ್ ಪಕ್ಷಿಯನ್ನು ಕೊಂದಿರುವ ನೀನು ಶೀಘ್ರದಲ್ಲಿಯೆ ಸಾಯುವಿ ಎಂದ ಮಾತು ಛಂದೋಬದ್ದವಾದ ಶ್ಲೋಕದ ರೂಪದಲ್ಲಿ ಹೊರಹೊಮ್ಮಿ ರಾಮಾಯಣದ ರಚನೆಗೆ ಮುನ್ನುಡಿ ಬರೆಯಿತು.

ಈ ತೆರದಲಿ ಮೊದಲ ಶ್ಲೋಕದೊಂದಿಗೆ ಆರಂಭಿಸಿ ೨೪೦೦೦ ಶ್ಲೋಕಗಳೊಂದಿಗೆ ೪೦೦೦೦೦ ಕ್ಕೂ ಮಿಗಿಲಾದ ಪದಪುಂಜಗಳಿಂದ ಏಳು ಕಾಂಡಗಳಲ್ಲಿ ವಿಂಗಡಿಸಿ ರಾಮಾಯಣದ ಹಲವಾರು ಪಾತ್ರಗಳಾದ ದಶರಥ, ಕೌಶಲ್ಯಾ, ಸುಮಿತ್ರೆ, ಕೈಕೆಯಿ, ರಾಮ, ಲಕ್ಷ್ಮಣ, ಭರತ, ಶತ್ರುಘ್ನ, ಸೀತೆ, ಹನುಮಂತ, ರಾವಣ, ವಿಭೀಷಣ, ಉರ್ಮಿಳೆ, ಮಂಡೋಧರಿ, ಲವ-ಕುಶ ಶ್ರಾವಣಕುಮಾರ, ಮಂಥರೆ, ಸೂರ್ಪನಖಿ, ಶಬರಿ ಮೊದಲಾದ ಪಾತ್ರಗಳ ಮುಖಾಂತರ ಮಹರ್ಷಿ ವಾಲ್ಮೀಕಿಯವರು ಸಮಾಜದಲ್ಲಿ ಜನರು ಯಾವ ತೆರದಲ್ಲಿ ಬದುಕು ಕಟ್ಟಿಕೊಂಡರೆ ಒಳಿತೆನ್ನುವುದನ್ನು ತ್ರೇತಾಯುಗದಲ್ಲಿ ತಾವು ರಚಿಸಿದ ರಾಮಾಯಣದ ಮೂಲಕ ಜಗತ್ತಿಗೆ ಅರುಹಿದ್ದಾರೆ.

ರಾಮರಾಜ್ಯ ಹೇಗಿರಬೇಕು? ಒಳಿತು ಕೆಡಕುಗಳಿಂದಾಗುವ ಪರಿಣಾಮಗಳು ಸಹ ಕಾವ್ಯದ ಮೂಲಕ ಉಣಬಡಿಸಿದ್ದಾರೆ.
ರಾಮಾಯಣದ ಮೂಲಕ ಸುಂದರ ಬದುಕು ಹೇಗೆ ಕಟ್ಟಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟ ಶ್ರೇಷ್ಠ ಮುನಿ ಮಹರ್ಷಿ ವಾಲ್ಮೀಕಿಯವರ ಜಯಂತಿ ಇಂದು ಆಚರಿಸುತ್ತಿರುವ ತಮಗೆಲ್ಲರಿಗೂ ಶುಭವಾಗಲಿ.

ಮಾಣಿಕ ನೇಳಗಿ ತಾಳಮಡಗಿ,
ಸಾಹಿತಿಗಳು, ಬೀದರ್

—————-

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3