ಬೀದರ್ : ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಬಾಲ್ಯ ದಿಂದಲೇ ಸಂಗೀತ ಕ್ಷೇತ್ರದಲ್ಲಿ ತನದೆ ಆದಂತ ಕೊಡುಗೆ ನೀಡುತ್ತಿರುವ ಬೀದರ ತಾಲ್ಲೂಕಿನ ಚಾಂಬೋಳ ಗ್ರಾಮದ ನಿವಾಸಿಯಾದ ಮಾರುತಿ ತಂದೆ ನರಸಿಂಗ ಕೊಳಿ ಅವರಿಗೆ ಇಂದು ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಮಂಡಲ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಈಶ್ವರ್ ಸಿಂಗ ಠಾಕೂರ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದೀಪಕ ಗಾದಗೆ ಹಳೆಂಬುರ, ನಿಕಟಪೂರ್ವ ಮಂಡಲ ಅಧ್ಯಕ್ಷರಾದ ರಾಜೇಂದ್ರ ಪೂಜಾರಿ, ಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ರಾಜಶೇಖರ ನಾಗಮೂರ್ತಿ, ಮಂಡಲದ ಉಪಾಧ್ಯಕ್ಷರಾದ ಸಂತೋಷ ಕಾಳೆ, ಮಾಳೆಗಾವ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಸಂದೀಪ ಪ್ರಸರ್ಗೆ, ಬಿಜೆಪಿ ದಲಿತ ನಾಯಕರಾದ ಮಾಣಿಕರಾವ ಕಟ್ಟಿಮನಿ ಹಾಳೆಂಬುರ, ಎಸ್. ಟಿ. ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ವೆಂಕಟ ಚಿದ್ರಿ ಉಪಸ್ಥಿತರಿದ್ದರು.
—————-