Saturday, May 24, 2025
Homeಬೀದರ್ಕಲ್ಯಾಣ ಕರ್ನಾಟಕದ ಜನರ ಭಕ್ತಿ ಅಭಿಮಾನ ಬಹಳ ದೊಡ್ಡದು: ರಂಭಾಪುರಿ ಜಗದ್ಗುರುಗಳು

ಕಲ್ಯಾಣ ಕರ್ನಾಟಕದ ಜನರ ಭಕ್ತಿ ಅಭಿಮಾನ ಬಹಳ ದೊಡ್ಡದು: ರಂಭಾಪುರಿ ಜಗದ್ಗುರುಗಳು

ಬೀದರ್ :  ಕಲ್ಯಾಣ ಕರ್ನಾಟಕ ಭಾಗದ ಜನರ ಭಕ್ತಿ, ಶೃದ್ಧೆ ಮತ್ತು ಅಭಿಮಾನ ಬಹಳ ದೊಡ್ಡದು. ಅದು ಬಣ್ಣಿಸಲಸಾಧ್ಯವಾದುದು ಎಂದು ಪೂಜ್ಯ ಶ್ರೀ ರಂಭಾಪುರಿ ಜಗದ್ಗುರುಗಳು ನುಡಿದರು. ನಗರದ ಬೇಟಿ ವೃತ್ತದ ಹತ್ತಿರ ಇರುವ ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿಯವರ ಗೃಹದಲ್ಲಿ ಶನಿವಾರ ಪೂಜೆಯನ್ನು ನೆರವೇರಿಸಿ, ಭಕ್ತರಿಗೆ ದರ್ಶನ ನೀಡಿದ ಬಳಿಕ ಆಶೀರ್ವಚನ ನೀಡುತ್ತ ಮಾತನಾಡಿದರು.

ಇಂದು ಜನರಲ್ಲಿ ಗುರುಪರಂಪರೆ ಹಾಗೂ ಧರ್ಮದ ಬಗ್ಗೆ ಕಳಕಳಿ ಎಷ್ಟಿರಬೇಕೋ ಅಷ್ಟು ಇಲ್ಲದ ಕಾರಣ ಧರ್ಮ ಸೊರಗುತ್ತಿದೆ ಎಂಬ ಭಾವ ಜನರಲ್ಲಿ ಮೂಡುತ್ತಿದೆ. ಆದರೂ ಕೂಡಾ ಜಗದ್ಗುರುಗಳು ನಿರಾಶಾವಾದಿಯಾಗದೆ ಆಶಾವಾದಿಗಳಾಗಿ ಮನುಕುಲದ ಒಳಿತಿಗಾಗಿ ಕೆಲಸ ಮಾಡುತ್ತಿದ್ದೇವೆ. ಶ್ರೀಪೀಠದ ಭಕ್ತರು ನಾವು ಎಲ್ಲೇ ಹೋದರೂ ಜಾತ್ಯಾತೀತವಾಗಿ ನಮ್ಮೊಂದಿಗೆ ಚರ್ಚಿಸುತ್ತಾರೆ. ಇಂದಿನ ಕಾಲದಲ್ಲಿ ಅವರವರ ಧರ್ಮಕ್ಕೆ ಹಾಗೂ ಜಾತಿಗೆ ಜಯವಾಗಲಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಮಾವನ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ವಿಶಾಲ ಸಂದೇಶ ನೀಡಿದ ಏಕೈಕ ಧರ್ಮಪೀಠ ಅದು ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಪೀಠ ಎಂದು ಹೆಮ್ಮೆಯಿಂದ ಹೇಳಬೇಕಾಗುತ್ತದೆ.


ನಮ್ಮ ಪೀಠವು ಮಾನವ ಧರ್ಮದ ಹಿರಿಮೆಯನ್ನು ನಾಡಿನಾದ್ಯಂತ ಪ್ರಚಾರ ಪ್ರಸಾರ ಮಾಡಿದೆ. ಅವರವರ ಧರ್ಮ ಅವರಿಗೆ ಶ್ರೇಷ್ಠ ಎನಿಸಿದರೂ ಕೂಡಾ ಪರಧರ್ಮ ಸಹಿಷ್ಣುತಾಭಾವ ಎಲ್ಲರಲ್ಲೂ ಬರಬೇಕೆಂದು ಜಗದ್ಗುರುಗಳು ಸಂದೇಶ ನೀಡಿದರು.

ವೀರಶೈವ ಧರ್ಮವು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಧರ್ಮವಾಗಿದ್ದು, ಆದರೆ ಕೆಲವು ಜನರು ಈ ಧರ್ಮವನ್ನು ವಿಂಗಡಣೆ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ ಇವನಮ್ಮವ ಇವನಮ್ಮವ ಎಂಬ ಬಸವೇಶ್ವರರ ಸಂದೇಶ ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಈ ಸದುದ್ದೇಶದಿಂದಲೇ ಕೊಳಾರ ಕೆ ಪರಿಸರದಲ್ಲಿ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮ ಸ್ಥಾಪಿಸಲಾಗಿದೆ.

ಅಲ್ಲಿ ನಿರ್ಮಾಣವಾಗುತ್ತಿರುವ ಗುರುಭವನ ಹಾಗೂ ಮಂದಿರದ ನಿರ್ಮಾಣ ಕಾರ್ಯ ಪರಿಶೀಲನೆ ಮಾಡಲಾಗಿದೆ. ಶೀಘ್ರವೇ ಲೋಕಾರ್ಪಣೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಜನಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರವೀಂದ್ರ ಸ್ವಾಮಿಯವರ ಕ್ರಿಯಾಕರ್ತೃತ್ವ ಶಕ್ತಿ ಬಹಳ ದೊಡ್ಡದು. ಬಡವ ಶ್ರೀಮಂತ ಎನ್ನುವ ಭೇದಭಾವವಿಲ್ಲದೆ ನೊಂದವರ ಧ್ವನಿಯಾಗಿ, ಬಡವರ ಬಂಧುವಾಗಿ ರವಿಸ್ವಾಮಿಯವರು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಜನಮನ್ನಣೆ ಪಡೆದುಕೊಂಡಿದ್ದಾರೆ ಎಂದು ಜಗದ್ಗುರುಗಳು ಶ್ಲಾಘಿಸಿದರು.


ಮುಂದೊಂದು ದಿನ ರಾಜಕೀಯದಲ್ಲಿ ರವಿಸ್ವಾಮಿಯವರಿಗೆ ಉಜ್ವಲ ಭವಿಷ್ಯವಿದೆ ಎನ್ನುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಸ್ವಾಮಿಯವರು ಮಾಡಿರುವ ಜನಹಿತಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳೇ ಮುಂದೆ ಅವರಿಗೆ ಶ್ರೀರಕ್ಷೆಯಾಗಿ ಮುಂದೆ ರಾಜಕೀಯ ಜೀವನದಲ್ಲಿ ಭದ್ರಬುನಾದಿ ಹಾಕಿಕೊಡಲಿದೆ ಎಂದು ಶುಭ ಹಾರೈಸಿದರು. ಬರುವ ಅಕ್ಟೋಬರ್ ತಿಂಗಳಲ್ಲಿ ಬಸವಕಲ್ಯಾಣದಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ ಬಹಳ ಅದ್ಧೂರಿಯಾಗಿ ಜರುಗಲಿದೆ. ಈಗಾಗಲೇ ಈ ದಸರಾ ಮಹೋತ್ಸವದ ಸ್ವಾಗತ ಸಮಿತಿ ರಚಿಸಲಾಗಿದೆ. ಉಪಸಮಿತಿಯವರಿಗೆ ಜವಾಬ್ದಾರಿಗಳನ್ನು ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ಹಿಂದಿನ 33 ದಸರಾ ಮಹೋತ್ಸವಗಳು ಯಶಸ್ವಿಯಾಗಿ ಸಂಭ್ರಮದಿAದ ನಡೆದಿವೆ. ಇದೀಗ ಬಸವಕಲ್ಯಾಣದಲ್ಲಿ ನಡೆಯುವ ದಸರಾ ಮಹೋತ್ಸವ ಹಿಂದಿನ ಎಲ್ಲಾ ದಸರಾ ಮಹೋತ್ಸವವನ್ನು ಮೀರಿ ಜರುಗಲಿದೆ ಎಂದು ಹೇಳಿದರು. ಈ ದಸರಾ ಮಹೋತ್ಸವದಿಂದ ಜಿಲ್ಲೆಯಲ್ಲಿ ಹೊಸ ವಾತಾವರಣ ನಿರ್ಮಾಣವಾಗಲಿದೆ ಎಂದು ಆಶಾಭಾವವನ್ನು ಜಗದ್ಗುರುಗಳು ನುಡಿದರು. ಜೊತೆಗೆ ಹೊಸ ವರ್ಷದ ಯುಗಾದಿ ಹಬ್ಬವು ನಾಡಿನ ಜನತೆಗೆ ಹೊಸ ಹರುಷ ತಂದುಕೊಡಲಿ ಎಂದು ಶುಭ ಹಾರೈಸಿದರು.

ಇದೇ ವೇಳೆ ರವೀಂದ್ರ ಸ್ವಾಮಿಯವರ ಮನೆಯಲ್ಲಿ ಜಗದ್ಗುರುಗಳ ಪೂಜೆ ಹಾಗೂ ಧರ್ಮಸಭೆ ಜರುಗಿತು. ಕಲ್ಲಯ್ಯ ಸ್ವಾಮಿ ದಂಪತಿಗಳು, ರವೀಂದ್ರ ಸ್ವಾಮಿ, ಅರುಣಾ ರವೀಂದ್ರ ಸ್ವಾಮಿ, ಶಿವಾನಂದ ಸ್ವಾಮಿ, ಬ್ರಹ್ಮಾನಂದ ಸ್ವಾಮಿ ಸೇರಿದಂತೆ ಬಂಧು-ಬಳಗದವರು ಹಾಗೂ ಹಿತೈಷಿಗಳು ಸ್ನೇಹಿತರು ಉಪಸ್ಥಿತರಿದ್ದರು.
————–

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3