ಕರ್ನಾಟಕ ರಾಜ್ಯ ಅನನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ನೂತನ ಪದಾಧಿಕಾರಿಗಳ ನೇಮಕ.
ಬೀದರ್ : ಜಿಲ್ಲಾ ಮಟ್ಟದ ಹೊಸ ಕಾರ್ಯಕಾರಿ ಮಂಡಳಿಯ ಆಯ್ಕೆ, 2025ನೇ ಸಾಲಿನಲ್ಲಿ ಈ ಮುಂಚೆ ಜಿಲ್ಲಾ ಅಧ್ಯಕ್ಷರಾದ ಸಂಗಶೆಟ್ಟಿ ಹಲಬರ್ಗೆಯವರು ವಯೋನಿವೃತ್ತಿ ಹೊಂದಿರುವ ಪ್ರಯುಕ್ತ ಸದರಿಯವರ ಸಮ್ಮುಖದಲ್ಲಿ ಬೀದರ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಿ, ಅಂತಿಮವಾಗಿ ಸರ್ವಾನುಮತದಿಂದ ಮುಂದಿನ ಹೊಸ ಅಧ್ಯಕ್ಷರನ್ನಾಗಿ ಸುಧೀರ ರಾಗಾ ಮತ್ತು ಬೀದರ ಜಿಲ್ಲಾ ಮಟ್ಟದ ಗೌರವ ಅಧ್ಯಕ್ಷರಾಗಿ ಸಂಗ್ರಾಮ ವಿ. ಚಾಮ, ಪ್ರಧಾನ ಕಾರ್ಯದರ್ಶಿಯಾಗಿ ರಾಮದಾಸ ಜಾಧವ ಉಪಾಧ್ಯಕ್ಷರಾಗಿ ಶಿವರಾಜ ಸೋಲಪೂರೆ ಮತ್ತು ಕೋಶಾಧ್ಯಕ್ಷರಾಗಿ ಪವನ ಜೋಶಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೀದರ ತಾಲೂಕಾಧ್ಯಕ್ಷರಾದ ಶ್ರೀನಿವಾಸ ಬರೂರಕರ್, ಪ್ರಧಾನ ಕಾರ್ಯದರ್ಶಿ ಮುಖ್ತಾರ ಮಿಯಾ, ಅಶೋಕ ತೆಲಂಗೆ, ಬಸವರಾಜ ಬಿರಾದಾರ, ಯುಸುಫ್ ಖಾನ್, ವಿಜಯಕುಮಾರ ಸಿಂಧೆ, ಸುಭಾಷ ರಾಠೋಡ, ಕೃಷ್ಣಾ ಕುಲಕರ್ಣಿ, ಉದಯಕುಮಾರ ಹುಲಸೂರೆ, ಅನಂತ ಕುಲಕರ್ಣಿ ಇನ್ನೀತರರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
