ಶಾಹೀನ್ ನಗರದಲ್ಲಿ ಪಾಸ್‍ಪೋರ್ಟ್ ಮೇಳ
ಬೀದರ್: ಅಂಚೆ ಇಲಾಖೆ ಹಾಗೂ ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ವತಿಯಿಂದ ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ನಗರದ ಅಬ್ದುರ್ ರಹಮಾನ್ ಮಲ್ಟಿಪರ್ಪೋಸ್ ಹಾಲ್‍ನಲ್ಲಿ ಆ. 30 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ಪಾಸ್‍ಪೋರ್ಟ್ ಮೇಳ ನಡೆಯಲಿದೆ.
ಪಾಸ್‍ಪೋರ್ಟ್‍ಗೆ ಮಧ್ಯವರ್ತಿಗಳಿಂದ ಆಗುವ ತೊಂದರೆ ತಪ್ಪಿಸುವುದು ಹಾಗೂ ಸುಲಭವಾಗಿ ಪಾಸ್‍ಪೋರ್ಟ್ ಪಡೆಯಲು ಜನರಿಗೆ ನೆರವಾಗುವುದು ಮೇಳ ಆಯೋಜನೆಯ ಉದ್ದೇಶವಾಗಿದೆ ಎಂದು ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ನಡೆದ ಮೇಳದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಬೀದರ್ ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟೆ ತಿಳಿಸಿದರು.

ಮೇಳದಲ್ಲಿ ಪಾಸ್‍ಪೋರ್ಟ್‍ಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುವುದು. ಸರಿಯಾದ ದಾಖಲೆ ಇರುವ ಪಾಸ್‍ಪೋರ್ಟ್ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗುವುದು ಎಂದು ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು.
ಮೇಳದಲ್ಲಿ ಪಾಸ್‍ಪೋರ್ಟ್‍ಗೆ ಅವಶ್ಯಕವಾಗಿರುವ ದಾಖಲೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಸಹ ಕೊಡಲಾಗುವುದು ಎಂದು ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ತಿಳಿಸಿದರು.
ಸಭೆಯಲ್ಲಿ ಸ್ವಯಂ ಸೇವಕರಿಗೆ ಮೇಳದ ಸಮಗ್ರ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಸ್ವಯಂ ಸೇವಕರಿಗೆ ಮೇಳದ ಸಮಗ್ರ ಮಾಹಿತಿ ನೀಡಲಾಯಿತು.
