Friday, May 23, 2025
Homeಸಾಂಸ್ಕೃತಿಕಚಾಂಗಲೇರಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಕಾರ್ಯಕ್ರಮ

ಚಾಂಗಲೇರಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಕಾರ್ಯಕ್ರಮ

ಬೀದರ್ : ಕಲಿಕೋತ್ಸವ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಿವೆಯಾಗಿವೆ ಎಂದು ಚಾಂಗಲೇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಗಣಪತಿ ತಿಳಿಸಿದರು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಚಾಂಗಲೇರಾ ಮತ್ತು ಗ್ರಾಮ ಪಂಚಾಯತ್ ಚಾಂಗಲೇರಾ ಇವರ ಸಂಯುಕ್ತಾಶ್ರಯದಲ್ಲಿ ಚಾಂಗಲೇರಾ ಶಾಲೆಯಲ್ಲಿ ಆಯೋಜಿಸಿದ ಶಾಲಾ ವಾರ್ಷಿಕೋತ್ಸವ, ಕಲಿಕೋತ್ಸವ, ಇಕೋಕ್ಲಬ್ ಉದ್ಘಾಟನೆ ಹಾಗೂ 8ನೇ ತರಗತಿಯ ಮಕ್ಕಳಿಗೆ ಬಿಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಪ್ರತಿಭೆ ಹಾಗೂ ಕಲಿಕಾ ಸಾಮರ್ಥ್ಯವನ್ನು ಅನಾವರಣಗೊಳಿಸಿ ಶಿಕ್ಷಕರು ಇಂದು ನಾವು ಕಣ್ಣಾರೆ ನೋಡುವಂತೆ ಮಾಡಿದ್ದಾರೆ. ನಮ್ಮ ಶಾಲೆಯ ಮಕ್ಕಳ ಕಲಿಕೆಯನ್ನು ಮತ್ತು ಅವರ ಪ್ರತಿಭೆಯನ್ನು ನೋಡಿ ಸಂತೋಷವಾಗಿದೆ ಎಂದು ಶ್ಲಾಘಿಸಿದರು.


ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ ವಾಲಿ ಮಾತನಾಡಿ ಮಕ್ಕಳು ಮಾಡಿದ ವಿವಿಧ ಮಾದರಿಗಳನ್ನು ನೋಡಿ ಅವರ ಕ್ರಿಯಾಶೀಲತೆ, ದೇಶಭಕ್ತಿ ನೋಡಿ ಹೆಮ್ಮೆ ಎನಿಸಿದೆ ಎಂದರು. ಇನ್ನೂ ಹೆಚ್ಚಿನ ಜ್ಞಾನವೃದ್ಧಿ ಮಾಡಿಕೊಂಡು ಗ್ರಾಮಕ್ಕೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.
ವೇದಿಕೆ ಮೇಲೆ ಗ್ರಾ.ಪಂ. ಸದಸ್ಯರಾದ ಅಶೋಕ, ಶ್ರೀಮತಿ ಯಶೋಧಾ, ಕಂಟೆಪ್ಪಾ ಚಾಂಗಲೇರಾ, ಸೊಸೈಟಿ ಅಧ್ಯಕ್ಷರಾದ ಪರಮೇಶ್ವರ ಸ್ವಾಮಿ, ಎಪಿಎಂಸಿ ಸದಸ್ಯ ದೇವಿಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಶೇಖರ ಉಪ್ಪಿನ್, ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ ಜಮಾದಾರ, ಖಜಾಂಚಿ ರಮೇಶ ಕ್ಯಾತಾ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಪ್ರೇಮಿಲಾಬಾಯಿ ರೆಡ್ಡಿ, ನಿರ್ದೇಶಕ ಮೋಜೆಷ್, ಸಿಆರ್‌ಪಿ ಶಿವಕುಮಾರ ರಾಠೋಡ್, ಮಲ್ಲಯ್ಯ ಸ್ವಾಮಿ, ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಮಾರುತಿ ಜಟಗೊಂಡ, ನಿರ್ದೇಶಕರಾದ ಶ್ರೀಮತಿ ಕಸ್ತೂರಿ ಉಪಸ್ಥಿತರಿದ್ದರು.


ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಧರ್ಮಪ್ರಕಾಶ ವಹಿಸಿದ್ದರು. ಚಾಂಗಲೇರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ವಿವಿಧ ಸರಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ರವೀಂದ್ರ ಫಾರೆಲ್, ವಿಜಯಕುಮಾರ, ಜ್ಯೋತಿ, ರಾಜಶೇಖರ ಮಳ್ಳಿ, ಶಿವಕುಮಾರ ಸಾಲಿ, ನಾರಾಯಣ ಮಡಿವಾಳ, ಸಾವಿತ್ರಿಬಾಯಿ, ಸುಧಾರಾಣಿ ಶರ್ಮಾ, ನಿರಂಜನ್, ಶಿವಕುಮಾರ ತೊಂಟೆ, ಗೌತಮ್ ರಾಹುಲ್, ಪ್ರಕಾಶ ರಾಹುಲ್, ಶಿವರಾಜ್, ಸುಜಾತಾ, ರಮೇಶ ರೆಡ್ಡಿ, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕಿ ಜೈಶ್ರೀ ಸ್ವಾಗತ ಗೀತೆ ಹಾಡಿದರೆ ರಾಜಪ್ಪ ಸಾಗರ್ ಸ್ವಾಗತಿಸಿದರು. ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರೆ ಮುಖ್ಯಗುರುಗಳು ವರದಿ ವಾಚನ ಮಾಡಿದರು. ಎಂ.ಎಸ್.ಮನೋಹರ ನಿರೂಪಿಸಿದರೆ ಶಿವಕುಮಾರ ಹೂಗಾರ್ ವಂದಿಸಿದರು. ಶಿಕ್ಷಕರಾದ ಮಸ್ತಾನ್, ಶಿಕ್ಷಕಿಯರಾದ ಗಾಯತ್ರಿ, ಪ್ರತಿಭಾ, ಭುವನೇಶ್ವರಿ, ರೇಣುಕಾ, ಕು.ಕವಿತಾ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿಗಳು ಪಾಲಕರು ಉಪಸ್ಥಿತರಿದ್ದರು.

—————-

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3