ಇಂದು ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಸಿಕಿಂದ್ರಾಬಾದ್ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಅರುಣಕುಮಾರ್ ಜೈನ್ ಅವರಿಗೆ ಉಮೇಶ್ ಮುದ್ನಾಳ ಅವರ ನೇತೃತ್ವದಲ್ಲಿ ಇಂದು ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು,ರೈಲ್ವೆ ಇಲಾಖೆಗೆ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಹಾಗೂ ಯಾದಗಿರಿ,ರಾಯಚೂರು, ಬೀದರ್, ಕೊಪ್ಪಳ ಜಿಲ್ಲೆಯಿಂದ ಹೆಚ್ಚು ಆದಾಯ ಬರುತ್ತದೆ.ಈ ಭಾಗದಿಂದ ಅತಿ ಹೆಚ್ಚು ಪ್ರಯಾಣಿಕರು ಸಂಚಾರ ಮಾಡುತ್ತಾರೆ.ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಆರಂಭ ಮಾಡಿದರೆ ಅನುಕೂಲವಾಗಲಿದೆ. ಗುಂತಕಲ್ ಸಿಕಿಂದ್ರಾಬಾದ್,ಸೊಲ್ಲಾಪುರ ವಿಭಾಗದಿಂದ ಮ ತೆಲುಗು ಹಾಗೂ ಮರಾಠಿ ಮಾತೃಭಾಷೆಯ ಮಾತನಾಡಲು ಸಮಸ್ಯೆಯಾಗಲಿದೆ. ಸಾರ್ವಜನಿಕರಿಗೆ ಮಾತೃ ಭಾಷೆ ಸಮಸ್ಯೆಯಾಗಲಿದೆ.ಕಲಬುರಗಿ ವಿಭಾಗೀಯ ಕೇಂದ್ರದ ನಿಯಂತ್ರಣ ಕೇಂದ್ರ ಆರಂಭ ಮಾಡುವದರಿಂದ ಈ ಭಾಗದ ರೈಲ್ವೆ ನಿಲ್ದಾಣಗಳ ಮೇಲೆ ತ್ವರಿತಗತಿಯಾಗಿ ನಿಗಾವಹಿಸಬಹುದಾಗಿದೆ.ಕಚೇರಿ ಕೆಲಸಕ್ಕೆ ತೆರಳುವ ಸಾರ್ವಜನಿಕರಿಗೆ ಹಾಗೂ ರೈಲ್ವೆ ಸಿಬ್ಬಂದಿ ವರ್ಗದವರಿಗೆ ಅನುಕೂಲವಾಗಲಿದೆ .ಈ ಭಾಗದ ರೈಲ್ವೆ ನಿಲ್ದಾಣಗಳು ಅಭಿವೃದ್ಧಿ ಹೊಂದಲು ಸಾಧ್ಯವೆಂದರು.ಸಾರ್ವಜನಿಕ ಸಮಸ್ಯೆಗಳಿಗೆ ಬೇಗ ಪರಿಹಾರ ಕಲ್ಪಿಸಬಹುದಾಗಿದೆ.

ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ 12 ಎಕ್ಸ್‌ಪ್ರೆಸ್ ರೈಲ್ವೆ ಗಾಡಿಗಳು ನಿಲುಗಡೆ ಆಗಬೇಕು. ಕೊವೀಡ್ ಸಂದರ್ಭದಲ್ಲಿ ರದ್ದಾಗಿರುವ ಇಂಟರ್ ಸೀಟಿ ರೈಲ್ವೆ ಗಾಡಿ ಮರು ಆರಂಭ ಮಾಡಬೇಕು .ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಹೈಟೆಕ್ ಸೌಲಭ್ಯ ಕಲ್ಪಿಸಿ ಮಾದರಿ ರೈಲ್ವೆ ನಿಲ್ದಾಣ ಮಾಡುವಂತೆ ಈ ವೇಳೆ ಮತ್ತೊಂದು ಮನವಿ ಪತ್ರದ ಮೂಲಕ ಉಮೇಶ್ ಮುದ್ನಾಳ ಒತ್ತಾಯ ಮಾಡಿದರು.
ಈ ವೇಳೆ ಪ್ರಭು ಕೋಡಾಲ್,ರಾಜು ಜಾಧವ್,ಲೊಕೇಶ್ ಭೀಮನ ಹಳ್ಳಿ, ಆನಂದ ಭೀಮನಹಳ್ಳಿ,ವಿಜಯಕುಮಾರ್ ಚವ್ಹಾಣ, ಪಿಡ್ಡಪ್ಪ ನಾಯಕ ಗೊಂದೇನೂರು,ಶರಣು ಅಂಗಡಿ,ಶೇಖಪ್ಪ ಗೊಂದೇನೂರ, ತಿಪ್ಪಣ್ಣ ಕಲದಾಳ,ನಿಂಗಪ್ಪ ಮೋಸಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.