ಬೀದರ್ : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಸಮಾರಂಭದಲ್ಲಿ ಕರ್ನಾಟಕ ಬಂಜಾರಾ ಭಾಷೆ ಮತ್ತು ಸಂಸ್ಕೃತಿ ಅಕಾಡೆಮಿ ಪ್ರಶಸ್ತಿಯನ್ನು ಬೀದರನ ಬಂಜಾರಾ ಹಿರಿಯ ಕಲಾವಿದೆ ಆಶಾ ರಾಠೋಡ್ ಅವರಿಗೆ ಅಕಾಡೆಮಿ ಅಧ್ಯಕ್ಷ ಎ.ಆರ್.ಗೋವಿಂದಸ್ವಾಮಿ ಪ್ರದಾನ ಮಾಡಿದರು.
ಆಶಾ ರಾಠೋಡ್ ಅವರಿಗೆ ಪ್ರಶಸ್ತಿ ಒಲಿದು ಬಂದ ಕಾರಣ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ರಾಷ್ಟಿಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ, ಪ್ರಮುಖರಾದ ಪ್ರೊ.ಎಸ್.ಬಿ.ಬಿರಾದಾರ, ಶಂಕ್ರೆಪ್ಪಾ ಹೊನ್ನಾ, ನಿಜಲಿಂಗಪ್ಪ ತಗಾರೆ, ಡಾ. ನೀಲಗಂಗಾ ಹೆಬ್ಬಾಳೆ, ಮಲ್ಲಮ್ಮ ಸಂತಾಜಿ, ಡಾ.ಸಂಜೀವಕುಮಾರ ಜುಮ್ಮಾ, ಡಾ.ಸುನಿತಾ ಕೂಡ್ಲಿಕರ್, ಮಹಾರುದ್ರ ಡಾಕುಳಗೆ, ಶಿವಶರಣಪ್ಪ ಗಣೇಶಪುರ, ಎಸ್.ಬಿ.ಕುಚಬಾಳ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.