ಬುಧವಾರ ಬೆಂಗಳೂರಿನಲ್ಲಿ ನಡೆದ ವಿಧಾನ ಸಭೆ ಅಧಿವೇಶನದಲ್ಲಿ ೨೦೨೪-೨೫ನೇ ಸಾಲಿನ ಬಜೆಟ್ ಮೇಲೆ ಮಾತನಾಡಿದ ಅವರು ಬಜೆಟ್ ನಲ್ಲಿ ಸರ್ಕಾರದ ಲೋಪದೋಷಗಳ ಮೇಲೆ ಅಂಕಿಅAಶಗಳ ಸಮೇತ ಬೆಳಕು ಚೆಲ್ಲಿದರು.
ಈ ಬಜೆಟ್ ಕೆಲವೆ ಜಿಲ್ಲೆಗಳಿಗೆ ಸೀಮಿತವಾಗಿದೆ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಆಗಬೇಕಿವೆ. ಹಲವಾರು ಹೊಸ ಯೋಜನೆ ಮೂಲಕ ಸಮಗ್ರ ವಿಕಾಸಕ್ಕೆ ಉತ್ತೇಜನ ನೀಡಬೇಕಿತ್ತು. ಆದರೆ ಏನೇನೂ ಸಿಕ್ಕಿಲ್ಲ. ಜಿಲ್ಲೆಯ ಪಾಲಿಗೆ ವಿಶೇಷವಾಗಿ ಸಂಪೂರ್ಣ ಹಳ್ಳಿಗಳಿಂದ ಕೂಡಿದ ಹಾಗೂ ಅಭಿವೃದ್ಧಿಯಲ್ಲಿ ಅತೀ ಹಿಂದುಳಿದ ನನ್ನ ಮತ ಕ್ಷೇತ್ರ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಪಾಲಿಗೆ ಈ ಬಜೆಟ್ ಕಹಿ ನೀಡಿದೆ.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ೫೨ ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ ಹೀಗಾಗಿ ಎಲ್ಲಾ ಇಲಾಖೆಯ ಸಚಿವರ ಬಳಿ ನಾವು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಮನವಿ ಮಾಡಿದರೆ ಎಲ್ಲಾ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡುತಿದ್ದಾರೆ ಇದು ಸತ್ಯ ಸಂಗತಿ ಬಿಜೆಪಿ ಶಾಸಕ ಮಿತ್ರರು ಅಷ್ಟೇ ಅಲ್ಲ ಕಾಂಗ್ರೆಸ್ ಶಾಸಕರು ಸಹ ಅನುದಾನ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಹೀಗಾಗಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ ಎಂದು ಹೇಳಿದರು.
ಹೋಮಿಯೋಪತಿಕ್ ಹಾಗೂ ಆಯುರ್ವೇದ ಇಲಾಖೆ ವೈದ್ಯಕೀಯ ವಿಧ್ಯಾರ್ಥಿಗಳಿಗೆ ಪ್ರತಿಯೊಂದು ಸಿಎಚ್ ಸಿ ಯಲ್ಲಿ ಉದ್ಯೋಗ ನೀಡಿ.
ಹೋಮಿಯೋಪತಿಕ್ ವೈದ್ಯಕೀಯ ಶಿಕ್ಷಣದಲ್ಲಿ ಪ್ರತಿ ವರ್ಷ ಒಂದು ಸಾವಿರ ಐದುನೂರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕೆಲಸವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾg.ೆ ನಾನು ಹೋಮಿಯೋಪತಿಕ್ ಶಿಕ್ಷಣ ಪಡೆದು ಕೆಲಸ ಇಲ್ಲದೆ ಅಲೆದಾಡಿದ್ದೇನೆ ವಿದ್ಯಾರ್ಥಿಗಳ ಸಮಸ್ಯೆ ನಾನು ಬಹಳ ಆಳದಿಂದ ಅರಿತಿದ್ದೇನೆ ಮುಂದಿನ ಬಜೆಟ್ ನಲ್ಲಿ ಪ್ರತಿ ಪಿಎಚ್‌ಸಿ ಯಲ್ಲಿ ಹೋಮಿಯೋಪತಿಕ್ ಹಾಗೂ ಆಯುಷ್ ವೈದ್ಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕೊಲ್ಕತ್ತಾ ಖಾಸಗಿ ಕಂಪನಿಯಿಂದ ಸರಬರಾಜು ಮಾಡಿರುವ ಔಷಧಿಯಿಂದ ಬಾಣಂತಿಯರ ಸಾವಾಗಿದೆ ಇದರಲ್ಲಿ ಬಾಣಂತಿಯರ ಸಾವು ತಡೆಯುವಲ್ಲಿ ಆರೋಗ್ಯ ಸಚಿವರು ಫೇಲಾಗಿದ್ದಾರೆ ಈ ವಿಷಯದಲ್ಲಿ ಗಂಭೀರವಾಗಿ ಪರಿಗಣಿಸಲಿಲ್ಲ ಮುಂದಿನ ದಿನಗಳಲ್ಲಿ ಮುಂದಾಗುವ ಅನಾಹುತ ತಡೆಯಬೇಕು ಎಂರ‍್ಲು ಕೆಕೆಆರ್ ಡಿಬಿ ಅನುದಾನದ ಕಲ್ಯಾಣ ಪತ ಯೋಜನೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೆ ೧೧ಕೋಟಿ ಅನುದಾನ ನೀಡಿದ್ದಾರೆ ಅದೇ ಕಾಂಗ್ರೆಸ್ ಶಾಸಕರಿಗೆ ೩೪ ಕೋಟಿ ಅನುದಾನ ನೀಡಲಾಗಿದೆ ಇದು ಯಾವ ನ್ಯಾಯ ಅಧ್ಯಕ್ಷರೆ ಎಂದು ಅಳಲು ತೋಡಿಕೊಂಡರು.

ಕೆಕೆಆರ್ ಡಿಬಿ ಅನುದಾನದಲ್ಲಿ ಗೋವಿಂದರಾಜು ಕಮಿಟಿಯಿಂದ ಎಲ್ಲಾ ಕ್ಷೇತ್ರಕ್ಕೆ ನ್ಯಾಯ ಸಿಕ್ಕಿದೆ ಆದರೆ ಬೀದರ್ ದಕ್ಷಿಣ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಈ ಕುರಿತು ಹಿಂದುಳಿದ ಪ್ರದೇಶ ಪರಿಶೀಲನೆ ನಡೆಸಿ ನ್ಯಾಯ ಒದಗಿಸುವ ವಾಗ್ದಾನ ನೀಡಬೇಕು.ನನ್ನ ಮತ ಕ್ಷೇತ್ರ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಮೈನಾರಿಟಿ ವಧು ವರರಿಗೆ ಮದುವೆಗೆ ೫೦ ಸಾವಿರ ನೀಡಿದ್ದಾರೆ ಅದೇ ರೀತಿ ಎಲ್ಲಾ ಸಮಾಜದಲ್ಲಿರುವ ಬಡಜನರ ಮದುವೆಗೆ ೫೦ ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದರು. ಮನ್ನಾಏಖೇಳ್ಳಿ ಗ್ರಾಮದಲ್ಲಿ ಡಿಪ್ಲೊಮಾ ಕಾಲೇಜು ಹಾಗೂ ಅಗ್ನಿ ಶಾಮಕ ಠಾಣೆಗಾಗಿ ಪ್ರಸ್ತಾಪಿಸಿದೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
—————-