ಬೀದರ್: ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ ಇವರ ವತಿಯಿಂದ ಮಾ. 29 ರಂದು ಬೆಳಿಗ್ಗೆ 10.00 ಗಂಟೆಗೆ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಹತ್ತಿರದಲ್ಲಿರುವ ಮಹಾಲಕ್ಷ್ಮೀ ಸಭಾಂಗಣದಲ್ಲಿ ಯುಗಾದಿ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಹಾಗೂ ಹಾಸ್ಯ ಅಲ್ಲದೆ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಎಸ್. ಎಮ್. ಜನವಾಡಕರ್ , ಶ್ರೀಮತಿ ಪುಣ್ಯವತಿ ವಿಸಾಜಿ, ಡಾ. ಜಗದೇವಿ ತಿಬಶೆಟ್ಟಿ, ಡಾ. ರಘುಶಂಖ ಭಾತಂಬ್ರಾ, ವಿಜಯಕುಮಾ ಸೋನಾರೆ, ಡಾ. ಸಂಜೀವ ಕುಮಾರ ಅತಿವಾಳೆ, ಶಂಭುಲಿಂಗ ವಾಲ್ದೊಡ್ಡಿ , ವೀರಶೆಟ್ಟಿ ಪಾಟೀಲ್ ಬಸವಕಲ್ಯಾಣ,ವಿಶ್ವನಾಥ್ ಮುಕ್ತಾ , ವೀರಭದ್ರಪ್ಪ ಉಪ್ಪಿನ್ ಸೇರಿದಂತೆ ಹಲವು ಗಣ್ಯರು ಆಗಮಿಸುತ್ತಲಿದ್ದಾರೆ. ಶ್ರೀಮತಿ ರೇಖಾ ಸೌದಿ ಅವರಿಗೆ “ಗಾಯಕಿ ಲತಾ ಮಂಗೇಶ್ಕರ್ ಪ್ರಶಸ್ತಿ” ಮತ್ತು ಶ್ರೀ ಸಂಗಮೇಶ ಬಿರಾದಾರ ಅವರಿಗೆ ಸಮಾಜ ಚೂಡಾಮಣಿ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಜೊತೆಗೆ ಕವಿಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಜಿ. ದೇಶಪಾಂಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—————