ಬೀದರ್ : ಇದು ಹೇಳಿ ಕೇಳಿ ಬೇಸಿಗೆ ಕಾಲ ಮಾರ್ಚ ತಿಂಗಳಲ್ಲಿ ಈ ರೀತಿಯಾದ ಬೆಂಕಿ ಬಿಸುಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಇನ್ನೂ ಏಪ್ರಿಲ್ ಮೇ ತಿಂಗಳಿನಲ್ಲಿ ಇದೆ ಬಿಸುಲಿನ ತಾಪಮಾನ ಯಾವ ಹಂತಕ್ಕೆ ತಲುಪಬಹುದೆಂದು ಊಹಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನಿರಡಕೆ ಆಗುವುದು, ನೀರು ಕುಡಿದರೆ ಸಾಕು ಒಂದು ತರಹ ಊಟ ಮಾಡಿದ ಭಾವನೆಯಾಗುವುದು ಸಹಜ ಅಲ್ಲವೇ?
ಮನುಷ್ಯ ತಾನು ಇರುವ ಓಣಿ, ಪ್ರದೇಶದಲ್ಲಿ ಸಕಾಲಕ್ಕೆ ನೀರು ದೊರಕದೆ ಹೋದರೆ ಪ್ರತಿಭಟನೆ ಹಾದಿ ಹಿಡಿದು ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ಅವನು ಎಲ್ಲಿಯಾದರು ಹೋಗಿ ನೀರು ಕುಡಿಯಬಹುದು. ಆದರೆ ಪ್ರಾಣಿ ಪಕ್ಷಿಗಳ ಪರಿಸ್ಥಿತಿ ಹೇಗೆ? ಬಿಸುಲಿನ ತಾಪಮಾನಕ್ಕೆ ಚಿಕ್ಕ ಪುಟ್ಟ ನದಿ ಹಳ್ಳ ಕೊಳ್ಳಗಳು ಬತ್ತಿ ಬಾಡಿ ಹೋಗುತ್ತಿವೆ, ಪಶು ಪಕ್ಷಿಗಳಿಗೆ ಕುಡಿಯುದಕ್ಕೆ ನೀರಿಲ್ಲದಂತೆಯಾಗುತ್ತದೆ. ಅರಣ್ಯ ಪ್ರದೇಶದಲ್ಲಿ, ಉದ್ಯಾನವನಗಳಲ್ಲಿ ಸರ್ಕಾರ ಮತ್ತೆ ಸಂಘ-ಸಂಸ್ಥೆಗಳು ಜತೆಗೂಡಿ ಪಶು ಪಕ್ಷಿಗಳಿಗೆ ನೀರಿನ ದಾಹ ನೀಗಿಸಲು ಅಲ್ಲಲ್ಲಿ ನೀರಿನ ತೊಟ್ಟಿ ನಿರ್ಮಿಸಿ, ವಾರಕ್ಕೆ ಎರಡು ಮೂರು ದಿನಗಳ ಕಾಲ ಟ್ಯಾಂಕರ್ ಮೂಲಕ ನೀರಿನ ತೊಟ್ಟಿಗೆ ಹಾಕಿ ಪಶು ಪಕ್ಷಿಗಳಿಗೆ ಆಸರೆಯಾಗಬೇಕಿದೆ. ಅರಣ್ಯ ಪ್ರದೇಶದಲ್ಲಿ ಅನೇಕ ಪ್ರಭೇದದ ಪ್ರಾಣಿಗಳು ವಾಸವಾಗಿವೆ. ಪರಿಸರ ವನ್ಯ ಜೀವಿಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಇಂದಿನಿಂದಲೇ ಅರಣ್ಯ ಪ್ರದೇಶದಲ್ಲಿ ಹಾಗೂ ತಮ್ಮ ಮನೆಯ ಸುತ್ತಮುತ್ತಲಿನ ದಟ್ಟವಾದ ಕಾಡು ಗಿಡಮರಗಳು ಕಂಡು ಬಂದರೆ ಮಣ್ಣಿನಿಂದ ಮಾಡಿದ ನೀರಿನ ತೊಟ್ಟಿಗಳನ್ನಿಟ್ಟು ಮೂಕ ಪ್ರಾಣಿ ಪಕ್ಷಿಗಳ ಜೀವಕ್ಕೆ ರಕ್ಷ ಕವಚವಾಗಬೇಕಾಗಿದೆ.
– (ಚಂದ್ರಕಾಂತ ಹಳ್ಳಿಖೇಡಕರ್)
————-