400 ಮಕ್ಕಳಿಗೆ ಬುಕ್ಸ್ ವಿತರಿಸಿದ ಶಿಕ್ಷಣ ಪ್ರೇಮಿ: ಉಮೇಶ್ ಮುದ್ನಾಳ್ ಹರ್ಷ
ಯಾದಗಿರಿ : ತಾಲೂಕಿನ ಅರಕೇರಾ. ಕೆ ಗ್ರಾಮದಲ್ಲಿರುವ ಕಲಿಕಾ ಕೇಂದ್ರದಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಶಿಕ್ಷಣ ಪ್ರೇಮಿ ಹಣಮಂತ ಗುಜರಾತ್ ಎಂಬುವವರು ೪೦೦ಕ್ಕೂ ಅಧಿಕ ನೋಟ್ ಬುಕ್ ಹಾಗೂ ಪೆನ್ ವಿತರಿಸುವ ಮೂಲಕ ಶಿಕ್ಷಣ ಪ್ರೇಮ ಮೆರೆದಿದ್ದಾರೆ. ಇದಕ್ಕೂ ಮೊದಲು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ನೇತೃತ್ವದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ಕಲ್ ನಲ್ಲಿರುವ ಅಂಬೇಡ್ಕರ್ , ಸಂಗೊಳ್ಳಿ ರಾಯಣ್ಣ ಹಾಗೂ ಅಂಬಿಗರ ಚೌಡಯ್ಯನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ರು. ಬಳಿಕ ಕಾಲ್ನಡಿಗೆಯಲ್ಲಿ ಬಾಜಾ ಭಜಂತ್ರಿ ಮೂಲಕ ಆಂಜನೇಯನ ದೇವಸ್ಥಾನಕ್ಕೆ ಹೋದರು. ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ನೋಟ್ ಬುಕ್ ವಿತರಿಸಿದ್ದರು. ಅದಾದ ಬಳಿಕ ಕಲಿಕಾ ಕೇಂದ್ರದ ಮಕ್ಕಳು ಸೇರಿದಂತೆ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಮಾಡಿದ್ದರು. ನಂತರ ಕಲಿಕಾ ಕೇಂದ್ರದಲ್ಲಿ ಉಚಿತ ಶಿಕ್ಷಣ ಕೊಡುವ ಭೂಮಿಕಾ, ಭೀಮಬಾಯ್ ಎಂಬ ಶಿಕ್ಷಕಿಯರಿಗೆ ಸನ್ಮಾನ ಗೌರವಿಸಿದರು.

ಈ ಸಂದರ್ಭದಲ್ಲಿ ಈರಣ್ಣ ದೊಡ್ಡಮನಿ, ದೇವಿಂದ್ರಪ್ಪ ಕುಂಬಾರ, ಸೂಗಪ್ಪ,ಸಿದ್ರಾಮಪ್ಪ, ಲಕ್ಷ್ಮಣ, ಹಣಮಂತಪ್ಪ, ಮಸಣ್ಣ,ಮಲ್ಲೇಶ್, ಶರಣಪ್ಪ, ಶಂಕರ್, ಜಗದೀಶ್, ಮಹೇಶ್ ಸೇರಿ ಗ್ರಾಮದ ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಲ್ಲು ಸ್ವಾಗತಿಸಿದರು. ಲಕ್ಷ್ಮಣ ನಿರೂಪಣೆ ಮಾಡಿದರು. ಕಾಶಪ್ಪ ವರದಿ ಮಾಡಿದ್ದರು.
