ದತ್ತಾತ್ರೇಯರಡ್ಡಿ ರಾಜ್ಯಾಧ್ಯಕ್ಷರವರಿಂದ, ಕೋಲಿ ಸಮಾಜದ ಸದಸ್ಯತ್ವ ಅಭಿಯಾಕ್ಕೆ ಚಾಲನೆ ಉಮೇಶ ಕೆ. ಮುದ್ನಾಳ
ಯಾದಗೀರಿ : ಕೋಲಿ ಸಮಾಜದ ಸದಸ್ಯತ್ವ ಅಭಿಯಾನ ದಿನಾಂಕ 03-08-2025 ರಂದು ಕಲಬುರ್ಗಿಯಲ್ಲಿ ಅಖಿಲ ಭಾರತೀಯ ಕೋಲಿ ಸಮಾಜದ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಆಗಸ್ಟ್ 3, 2025 (ಭಾನುವಾರ) ರಂದು ಕಲಬುರ್ಗಿ ನಗರದ ಐವನ್ ಶಾಹಿ ಅತಿಥಿ ಗೃಹ ಸಭಾಭವನದಲ್ಲಿ ಕೋಲಿ ಸಮಾಜದ ಸದಸ್ಯತ್ವ ಅಭಿಯಾನ ಹಾಗೂ ರಾಜ್ಯ ಕಾರ್ಯಕಾರಿ ಸಭೆಯನ್ನು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷರಾದ ದತ್ತಾತ್ರೆರಡ್ಡಿ ರವರ ನೇತೃತ್ವದಲ್ಲಿ ನಡೆಯಲಿದೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ರವರು ಪತ್ರಿಕೆ ಹೇಳಿಕೆ ನೀಡಿದ್ದಾರೆ.
ಈ ರಾಷ್ಟ್ರೀಯ ಸಂಘಟನೆಯು ಭಾರತದೆಲ್ಲೆಡೆ ಪ್ರಭಾವವಿಟ್ಟು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ ಕೋಲಿ, ಕಬ್ಬಲಿಗ, ಕೋಯಾ, ಟೋಕ್ರಿ ಕೋಲಿ, ಡೋರ್ ಕೋಲಿ, ಬೆಸ್ತ, ಸುಣಗಾರ,ಬಾರಕೆರ,ಮಿನಗಾರ ಮೊಗವೀರ, ಅಂಬಿಗ, ಗಂಗಾಮತ ಸೇರಿದಂತೆ ಸುಮಾರು 36 ಪಂಗಡಗಳನ್ನು ಒಳಗೊಂಡ ಸಮುದಾಯ ಆಗಿರುತ್ತದೆ ಎಂದರು
ಈ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳ ನಾಯಕರ ರಾಷ್ಟ್ರಮಟ್ಟದ ನಾಯಕರೊಂದಿಗೆ ಸಂಪರ್ಕ ಕಲ್ಪಿಸುವ ಹಾಗೂ ರಾಜ್ಯದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ಪ್ರಯತ್ನ ಈ ಸಂಘಟನೆ ಮಾಡುತ್ತಿದೆ. ಆದಕಾರಣ ಸಮಾಜ ಬಂಧುಗಳು ಈ ಸಂಘಟನೆಯ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ ತಿಳಿಸಿದರು
ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಹಿಮಾಚಲ ಪ್ರದೇಶದ ಶಿಮ್ಲಾ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಶ್ರೀ ವೀರೇಂದ್ರ ಕಶ್ಯಪ್ ಅವರು ರಾಷ್ಟ್ರೀಯ ಅದ್ಯಕ್ಷರಾಗಿ ನೇತೃತ್ವ ವಹಿಸಿಕೊಂಡಿದ್ದು, ದೇಶದಾದ್ಯಂತ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ದತ್ತಾತ್ರೇಯ ರೆಡ್ಡಿ ಮುದಿರಾಜ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸದಸ್ಯತ್ವ ಅಬಿಯಾನ ಕಾರ್ಯಕ್ರಮಕ್ಕೆ ಸಮಾಜದ ಪೂಜ್ಯರು/ ಹಿರಿಯರು/ ಚುನಾಯಿತ ಪ್ರತಿನಿದಿಗಳು/ಸಂಘಟನೆಯ ಪದಾದಿಕಾರಿಳು ಭಾಗವಹಿಸಲಿದ್ದಾರೆ ತಿಳಿಸಿದ್ದಾರೆ
ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು, ಯುವ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸಮಾಜದ ಬಂಧುಗಳು, ರಾಜಕೀಯ ಮುಖಂಡರು, ಪ್ರಗತಿಪರ ಚಿಂತಕರು, ಹೋರಾಟಗಾರರು ಹಾಗೂ ಯುವ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದಸ್ಯತ್ವ ಪಡೆಯಲು ಮುಂದಾಗಬೇಕೆಂದು ಸಮಾಜದ ಭಾಂದವರಲ್ಲಿ ಉಮೇಶ ಕೆ. ಮುದ್ನಾಳ ಮನವಿ ಮಾಡಿಕೊಂಡಿದ್ದಾರೆ
ಭಾಕ್ಸ್ :
ಕಾರ್ಯಕ್ರಮದ ವೇಳಾಪಟ್ಟಿ: ಬೆಳಿಗ್ಗೆ 10:30 ರಿಂದ 1:30 ರಾಜ್ಯಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನಂತರ ಮಧ್ಯಾಹ್ನ 2:30 ರಿಂದ 4:00 – ರಾಜ್ಯ ಕಾರ್ಯಕಾರಿ ಸಭೆ ಮತ್ತು ಚರ್ಚೆ ನಡೆಯಲಿದೆ ಎಂದು ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.
