ಬೀದರ್ : ಪೂಜ್ಯ ಚೆನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ನೀಲಾಂಬಿಕ ಮಹಿಳಾ ಸಾಂಸ್ಕೃತಿಕ ಅಭಿವೃದ್ಧಿ ಸಂಘ ಚಿಟ್ಟವಾಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ರವಿವಾರ ಬೆಳಿಗ್ಗೆ ಜಾನಪದ ಸಂಗೀತೋತ್ಸವ ಹಾಗೂ ಪುಸ್ತಕ ಬಿಡುಗಡೆ ಕವಿಗೋಷ್ಠಿ ಅದ್ದೂರಿಯಾಗಿ ನಡೆಯಿತು .
ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಹಾಗೂ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು .ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಆಡು ಭಾಷೆಯಲ್ಲಿರುವ ಇಂಥ ವಚನಗಳು ಜನರಿಗೆ ಮನಮುಟ್ಟುತ್ತವೆ ,ಬಸವ ಯುಗ ದಲ್ಲಿ ಪ್ರತಿ ಮನೆ ಮನೆಯಲ್ಲಿ ವಚನಕಾರರಿದ್ದರು, ಹೀಗೆ ಹೆಚ್ಚಿನ ರೀತಿಯಲ್ಲಿ ವಚನಕಾರರು ಹೊರಹೊಮ್ಮಲಿ ಎಂದು ಹಾರೈಸಿದರು.

ಮಾನವ ಉದ್ಯಾನ ಸೇವಾ ಸಮಿತಿಯ ಪೂಜ್ಯ ಶ್ರೀ ವಿನಾಯಕ ಮಹಾತ್ಮಾಜಿಯವರು ಮುಕ್ತಿ ಮಾರ್ಗ ಮುಟ್ಟಲು ನಾವು ಸನಾತನ ಬಸವ ಧರ್ಮದ ಹಾದಿಯನ್ನು ಹಿಡಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶ್ರೀಮತಿ ಸುವರ್ಣ ಬಸವರಾಜ್ ಧನೂರು ವಹಿಸಿದ್ದರು ಕನ್ನಡ ಮತ್ತು ಸಂಸ್ಕೃತಿಯ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದರಾಮ ಸಿಂದೆ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದ ಮತ್ತು ಜನಪದರಿಗೆ ಹಲವಾರು ಸೌಲಭ್ಯಗಳನ್ನು ಮಾಡಿಕೊಟ್ಟಿದೆ ಎಂದರು.
ಶ್ರೀಮತಿ ಸಿದ್ದಮ್ಮ ಎಸ್ ಬಸವಣ್ಣವರ ರಚಿಸಿದ ಆಧುನಿಕ ವಚನಗಳ ಸಂಕಲನ ‘ವಚನ ದೀವಿಗೆ’ ಕೃತಿಯು ಕನ್ನಡ ಸಾಹಿತ್ಯ ಪರಿಷತ್ನ ಬೀದರ್ ನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಬಿಡುಗಡೆಗೊಳಿಸಿದರು. ಹಾಗೂ ಧ್ವನಿಸುರುಳಿಯನ್ನು ಬೀದರ್ ನ ಬಸವದಳ ಅಧ್ಯಕ್ಷರಾದ ಸೋಮನಾಥ ಪಾಟೀಲ್ ಬಿಡುಗಡೆಗೊಳಿಸಿದರು .
ಹಿರಿಯ ಸಾಹಿತಿಗಳಾದ ಡಾ. ರಾಮಚಂದ್ರ ಗಣಪುರ್ ವಚನ ದೀವಿಗೆ ಕೃತಿಯಲ್ಲಿನ ವಚನಗಳು ಒಂದಕ್ಕಿಂತ ಒಂದು ಅರ್ಥಪೂರ್ಣವಾಗಿವ. 12ನೇ ಶತಮಾನ ವಚನಕಾರರ ಪ್ರಭಾವ ಕೃತಿಯಡತಿಯ ಮೇಲೆ ಬಿದ್ದಿದೆ .ಇಲ್ಲಿನ ವಚನಗಳು ನೇರ ನಡೆ ,ನೇರ ನುಡಿ ,ಶುದ್ದ ಕಾಯಕದ ರೂಪದಲ್ಲಿದೆ ಎಂದು ಪುಸ್ತಕ ವಿಮರ್ಶಕಾರರಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ವಂದೇ ಮಾತರಂ ಶಾಲೆಯ ಅಧ್ಯಕ್ಷರಾದ ಶಿವರಾಜ್ ಪಾಟೀಲ್, ಸಮಾಜ ಸೇವಕರಾದ ಬಿಎಸ್ ಕುದುರೆ,ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ವಿಜಯಕುಮಾರ್ ಸೋನಾರೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವ್ ಕುಮಾರ್ ಅತಿವಾಳೆ, ಎಪಿಎಂಸಿ ಮಾಜಿ ಅಧ್ಯಕ್ಷರಾದ ವಿಜಯಕುಮಾರ ಆನಂದೇ, ದಿ ಗ್ರೇಟ್ ಅಂಡ್ ಸೀಡ್ಸ್ ಮರ್ಚೆಂಟ್ಸ್ ಗಾಂಧಿ ಗಂಜನ ಸದಸ್ಯರಾದ ರಾಜಕುಮಾರ್ ಬಸವಣ್ಣವರ, ಚಿಟ್ಟಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಮೇಶ್ ಬಿರಾದಾರ್, ಸಂಗ್ರಾಮ್ ಬಸವಣ್ಣವರ ಇನ್ನಿತರರು ಉಪಸ್ಥಿತರಿದ್ದರು .ಇದೇ ಸಂದರ್ಭದಲ್ಲಿ ವಿಶೇಷವಾಗಿ ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ಕರ್ನಾಟಕ ಲೇಖಕಿಯರ ಸಂಘ ಬೀದರ್ ಅಧ್ಯಕ್ಷರಾದ ಶ್ರೀಮತಿ ಭಾರತಿ ವಸ್ತ್ರ ವಹಿಸಿದ್ದರು .ಮುಖ್ಯ ಅತಿಥಿಗಳಾಗಿ ಶ್ರೀಮತಿಯ ರೇಖಾ ಸೌದಿ ,ಶ್ರೀಮತಿ ಸುನಿತಾ ಡಾಡಿಗೆ, ರಮೇಶ್ ಬಿರಾದಾರ್, ಎಸ್ ಮನೋಹರ್ , ಸಂತೋಷ್ ಜೋಳದಾಪಕೆ ,ಶ್ರೀಮತಿ ರಾಣಿ ಸತ್ಯಮೂರ್ತಿ, ರಾಜಕುಮಾರ ಮಣಿಗೇರಿ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಹಾಸ್ಯ ಕಾರ್ಯಕ್ರಮಗಳು ಜರುಗಿದವು. ಹಾಗೂ ಹತ್ತನೇ ಮತ್ತು 12ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ನುಪೂರ್ ನೃತ್ಯ ಅಕಾಡೆಮಿ ,ನಾಟ್ಯ ಶ್ರೀ ನೃತ್ಯಲಯ ಹಾಗೂ ಅರುಣೋದಯ ಶಾಲಾ ಮಕ್ಕಳಿಂದ ವಚನ ಗಾಯನ ನೃತ್ಯ ಕಾರ್ಯಕ್ರಮ ನಡೆಯಿತು .ಕಾರ್ಯಕ್ರಮಕ್ಕೆ ನೀಲಾಂಬಿಕ ಮಹಿಳಾ ಸಾಂಸ್ಕೃತಿಕ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀಮತಿ ಸಿದ್ದಮ್ಮ ಎಸ್ ಬಸವಣ್ಣವರ ಸ್ವಾಗತಿಸಿದರು .ಶ್ರೀಮತಿ ಪಾರ್ವತಿ ವಂದಿಸಿದರು. ಬಸವರಾಜ್ ಮೂಲಗೆ ಹಾಗೂ ಶ್ರೀ ಪ್ರೇಮ್ ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು.
——————