ಬೀದರ್: 1927 ರ ಮಾರ್ಚ್ 20 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚೌಡಾರ್ ಕೆರೆಯ ನೀರು ಕುಡಿಯಲು ಉಪಯೋಗಿಸುವ ಕುರಿತು ದೊಡ್ಡ ಸತ್ಯಾಗ್ರಹ ಮಾಡಿದ್ದರು. ಈ ಇತಿಹಾಸವನ್ನು ಸ್ಮರಿಸಲು ಹಾಗೂ ಸಾಮಾಜಿಕ ಸಬಲೀಕರಣ ಮಾಡಲು ಇದೇ ತಿಂಗಳ 26 ರಂದು ಸಾಯಂಕಾಲ 5 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ ಎಂದು ಆಲ್ ಇಂಡಿಯಾ ಪ್ಯಾಂಥರ್ ಸೇನಾ ಗೌರವಾಧ್ಯಕ್ಷರಾದ ದೇವೇಂದ್ರಕುಮಾರ ಸೋನಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಾ. ಬಾಬಾ ಸಾಹೇಬ್ ಅವರ ಅವಿರತ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸುವ ದಿನ ಇದಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಆಗಮಿಸುತ್ತಿದ್ದಾರೆ. ಸಮಾಜದಲ್ಲಿರುವ ಮೌಢ್ಯಾಚರಣೆ, ಅಸಮಾನತೆ ಹೋಗಲಾಡಿಸಲು ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸೇನೆಯ ಅಧ್ಯಕ್ಷರಾದ ಭರತನಾಗ್ ಕಾಂಬಳೆ ಮಾತನಾಡಿ, ಚೌಡಾರ್ ಕೆರೆ ಸತ್ಯಾಗ್ರಹ ದಿನದ ಸ್ಮರಣೆಗಾಗಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಪೂಜ್ಯ ಸಿದ್ಧಬಸವದೇವರು ಯಮಕನಕರಡಿ ಆಗಮಿಸುತ್ತಿದ್ದಾರೆ. ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮರಿ ಮೊಮ್ಮಗರಾದ ರಾಜರತನ ಅಂಬೇಡ್ಕರ್ ಅವರು ಈಗಾಗಲೇ ರಿಜರ್ವೆಶನ್ ಮಾಡಿಕೊಂಡಿದ್ದಾರೆ. ಅವರು ಜಿಲ್ಲೆಗೆ ಆಗಮಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.
ಇದೇ ವೇಳೆ ಪ್ರಮುಖರಾದ ಪ್ರದೀಪ್ ಜಂಜೀರೆ, ದೇವರಾಜ್ ಆರ್ಯ, ಕೃಷ್ಣ ನಾಟೇಕಾರ್, ಸಂಗಪ್ಪಾ ಚಿದ್ರಿ, ತುಕಾರಾಮ ಕರಾಟೆ, ಸಂತೋಷ ಕಾಂಬಳೆ, ಸುಜೀತ್ ಬಡಿಗೇರ್, ಯಲ್ಲೇಶ್ ಮಲ್ಕಾಪುರ, ಆನಂದ ಖಾಶೆಂಪೂರ್, ಸೂರ್ಯಕಾಂತ, ಓಂಪ್ರಕಾಶ್ ಕಾಂಬಳೆ, ರಾಜರತನ ಶಿಂಧೆ, ಸುರೇಶ ಮೋರೆ, ಭಾಗ್ಯಶಾಲ್ ಕಾಂಬಳೆ ಸೇರಿದಂತೆ ಹಲªರು ಪತ್ರಿಕಾ ಗೋಷ್ಟಿಯಲ್ಲಿದ್ದರು.
————–