ಬೀದರ್ : ಗಡಿ ಜಿಲ್ಲೆಯಲ್ಲಿ ದಿನ ದಿನಕ್ಕೆ ಬಿಸಿಲಿನ ಝಲ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಪರಿತಪ್ಪಿಸುವಂತಾಗಿದೆ.ಈ ಬಿರುಬಿಸಿಲಿಗೆ ಬಸವಳಿದ ಜನತೆಯ ದಾಹ ನೀಗಿಸಲು ಬೀದರ್ ನ ರೋಟರಿ ಸಿಲ್ವರ್ ಸ್ಟಾರ್ ತಂಡವು ಹೈಡ್ರೇಟಿಂಗ್ ಹೋಪ್ ಎಂಬ ಘೋಷವಾಕ್ಯದಡಿ ನಗರದ ವಿವಿಧೆಡೆ ಅರವಟ್ಟಿಗೆ ಸ್ಥಾಪಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ.
ನಗರ ಪ್ರದೇಶದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಿಂದ ನಾನಾ ಕೆಲಸಗಳಿಗೆ ಬೀದರ್ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅರವಟ್ಟಿಗೆ ಸ್ಥಾಪಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರ ಪ್ರದೇಶದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಿಂದ ನಾನಾ ಕೆಲಸಗಳಿಗೆ ಬೀದರ್ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅರವಟ್ಟಿಗೆ ಸ್ಥಾಪಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರದ ಪ್ರಮುಖ ಸ್ಥಳಗಳಾದ ಬ್ರಿಮ್ಸ್ ಆಸ್ಪತ್ರೆ, ಮೋಹನ್ ಮಾರ್ಕೆಟ್, ಗುಂಪಾ, ಶಿವನಗರ, ಕೇಂದ್ರ ಬಸ್ ನಿಲ್ದಾಣ, ಗುದ್ದಗೆ ಆಸ್ಪತ್ರೆ, ಮೈಲೂರ್ ಕ್ರಾಸ್, ಗಾಂಧಿ ಗಂಜ್, ಹಾರೂಗೇರಿ ಕಮಾನ್ ಹೀಗೆ ಒಟ್ಟು 10 ಸ್ಥಳಗಳಲ್ಲಿ ಅರವಟ್ಟಿಗೆಗಳನ್ನು ನಿರ್ಮಿಸಲಾಗಿದೆ.
ನಿನ್ನೆ ಬೀದರ್ ನ ಬ್ರಿಮ್ಸ್ ಆಸ್ಪತ್ರೆಯ ಮುಂಭಾಗ ಅಳವಡಿಸಿರುವ ಅರವಟ್ಟಿಗೆಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಿಮ್ಸ್ ಆಸ್ಪತ್ರೆಯ ವೈದ್ಯ ಮಹೇಶ್ ಪಾಟೀಲ್, ರೋಟರಿ ಸಿಲ್ವರ್ ಸ್ಟಾರ್ಸ್ ನ ಈ ಕಾರ್ಯದಿಂದ ಬೇಸಿಗೆಯಲ್ಲಿ ನಮ್ಮ ಆಸ್ಪತ್ರೆಗೆ ಬಂದಂತವರಿಗೆ ತುಂಬಾ ಉಪಯೋಗವಾಗಲಿದೆ ಈ ತಂಡದ ಕಾರ್ಯ ಹೀಗೆ ಮುಂದುವರಿಯಲಿ ಅಂತ ಶುಭ ಹಾರೈಸಿದ್ದರು.

ರೋಟರಿ ಕ್ಲಬ್ ಸಿಲ್ವರ್ ಸ್ಟಾರ್ ಅಧ್ಯಕ್ಷ ಪುನೀತ್ ಸಿಂಗ್ ಮಾತನಾಡಿ, ನಮ್ಮ ತಂಡದ ವತಿಯಿಂದ ನಗರದ ಜನದಟ್ಟಣೆ ಇರುವ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.ಬೇಸಿಗೆಯಲ್ಲಿ ನೀರಿನ ವ್ಯವಸ್ಥೆ ಅತ್ಯವಶ್ಯವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಸಿಲ್ವರ್ ಸ್ಟಾರ್ ನ ಕಾರ್ಯದರ್ಶಿ ಪೂಜಾ ಜಾರ್ಜ್, ಬೇಸಿಗೆ ಸಮಯದಲ್ಲಿ ಸಾರ್ವಜನಿಕರಿಗೆ ನೀರಿನ ಅವಶ್ಯಕತೆ ಇರುತ್ತದೆ ಆದ್ದರಿಂದ ಜನರಿಗೆ ಅನುಕಾಲವಾಗಲೆಂದು ಸದ್ಯ ಬೀದರ್ ನಗರದ 10,15 ಕಡೆ ಮಣ್ಣಿನ ಮಡಿಕೆಗಳನ್ನು ಅಳವಡಿಸಿದ್ದೇವೆ ಮುಂದೆ ಇನ್ನು 8,10 ಸ್ಥಳಗಳನ್ನು ಗುರುತಿಸಿ ಅಲ್ಲಿಯೂ ಸಹ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಕ್ಲಬ್ ಉಪಾಧ್ಯಕ್ಷ ಅದೀಶ್ ಆರ್ ವಾಲಿ ಮಾತಾನಾಡಿ ರೋಟರಿ ಕ್ಲಬ್ ಸಿಲ್ವರ್ ಸ್ಟಾರ್ ವತಿಯಿಂದ ಹೈಡ್ರೇಟಿಂಗ್ ಹೋಪ್ ಎಂಬ ಒಂದು ವಿನೂತನ ಕಾರ್ಯಕ್ರಮದ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಏಪ್ರಿಲ್, ಮೇ ನಲ್ಲಿ ಹೆಚ್ಚಿನ ಬಿಸಿಲಿರುವ ಕಾರಣ 10,15 ಕಡೆಗಳಲ್ಲಿ ಅರವಟ್ಟಿಗೆಗಳನ್ನ ನಿರ್ಮಾಣ ಮಾಡುತ್ತಿದ್ದೇವೆ. ಎಲ್ಲ ಅರವಟ್ಟಿಗೆಗಳ ಜವಾಬ್ದಾರಿಯನ್ನ ನಮ್ಮ ರೋಟರಿ ಸಿಲ್ವರ್ ಸ್ಟಾರ್ ನ ಸದಸ್ಯರಿಗೆ ನೀಡಲಾಗಿದೆ : ಆದೀಶ್ ಆರ್ ವಾಲಿ,ಉಪಾಧ್ಯಕ್ಷರು
ಈ ವೇಳೆ ರೋಟರಿ ಕ್ಲಬ್ ಸಿಲ್ವರ್ ಸ್ಟಾರ್ ನ ಸರ್ಜೆಂಟ್ ಎಟ್ ಆರ್ಮ್ಸ್ ಡಾ.ಸಂಗಮೇಶ ವಡಗಾವೇ, ನಿರ್ದೇಶಕರಾದ ಮಂಜುನಾಥ ಹೂಗಾರ, ಪೂಜಾ ಕೊಂಡಿ, ಕೀರ್ತಿ ವಾಲೆ ಹಾಗೂ ಸದಸ್ಯರಾದ ಆನಂದ ಕೊಟ್ಟರಕೆ, ಸಾಗರ ಬುಟ್ಟೆ, ಶ್ರೀನಾಥ ನಾಗುರೆ, ಪ್ರಸನ್ನ ಸಿಂಧೋಲ್, ಅಂಬಿ ಸಾನ್ವಿ,ಮಂಜುನಾಥ ಖೂಬಾ,ಅಂಬರೀಶ್ ಅಂಬಿಸಾಗೆ ಹಾಗೂ ರೋಟರಿ ಸಿಲ್ವರ್ ಸ್ಟಾರ್ ನ ಸದಸ್ಯರು ಉಪಸ್ಥಿತರಿದ್ದರು.
—————-