Saturday, May 24, 2025
Homeಬೀದರ್ಬೀದರ್ : ಅಂತರ ಜಾತಿ ವಿವಾಹ, ದಂಪತಿಗಳಿಗೆ ಸನ್ಮಾನ

ಬೀದರ್ : ಅಂತರ ಜಾತಿ ವಿವಾಹ, ದಂಪತಿಗಳಿಗೆ ಸನ್ಮಾನ

ಬೀದರ್: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಮಿತಿ ವತಿಯಿಂದ ಮಾ. 28 ರಂದು ನಗರದ ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಸಭಾಂಗಣದಲ್ಲಿ ಮಹಾಡ್ ಚೌಡರ ಕೆರೆ ಪ್ರವೇಶ ವಿಜಯೋತ್ಸವ ನಿಮಿತ್ಯ ಸಮಸಮಾಜ ನಿರ್ಮಾಣದ ಕುರಿತು ವಿಚಾರಣ ಸಂಕಿರಣ ಹಾಗೂ ಪ್ರ-ಪ್ರಥಮ ಬಾರಿಗೆ ಬೀದರ ಜಿಲ್ಲೆಯಲ್ಲಿ ಅಂತರ ಜಾತಿ ವಿವಾಹ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿದ್ಯ ಪೂಜ್ಯ ಭಂತೆ ಧಮ್ಮಾನಂದ ಮಹಾಥೇರೋ ಮತ್ತು ಉದ್ಘಾಟಕರಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಸ್ಥಾಪಕರಾದ ಶ್ರೀ ಪರಶುರಾಮ ನಿಲನಾಯಕ ಅವರು ಕಾರ್ಯಕ್ರಮ ಕುರಿತು ಪ್ರತಿವರ್ಷ ತಾವೆಲ್ಲರೂ ಸಮಸಮಾಜ ನಿರ್ಮಾಣಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ತೋರಿಸಿದ ಮಾರ್ಗದಲ್ಲಿ ಸಾಗಲು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ಕಾರ್ಯಕ್ರಮಕ್ಕೆ ಮಹಾರಾಷ್ಟçದಿಂದ ಮಹಾಡ ಪಟ್ಟಣದ ಪ್ರೊ. ವಿಶಾಲ ಖಾಂಭೆ ದಂಪತಿಗಳು ಆಗಮಿಸಿ ಚೌಡಾರ ಕೆರೆಯಿಂದ ನೀರು ತಂದು ಅರಳಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮತ್ತು ಬಾಬಾ ಸಾಹೇಬ್ ಅಂಬೇಡ್ಕರ ರವರ ಚೌಡರ್ ಕೆರೆಯ ಕುರಿತು ಮಾಡಿದ ಸತ್ಯಾಗೃಹ ಮತ್ತು ನೀರು ಕುಡಿಯುವ ನಡೆಸಿದ ಹೋರಾಟದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನೀಲ ಸಂಗಮ, ಜಿಲ್ಲಾ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಇವರು ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ವಿನಯಕುಮಾರ ಮಾಳಗೆ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರು ಬೆಂಗಳೂರು, ಪ್ರಶಾಂತ ದೊಡ್ಡಿ, ಸಿ.ಎಂ.ಸಿ. ಸ್ಥಾಯಿ ಸಮಿತಿ ಅಧ್ಯಕ್ಷರು ಬೀದರ, ತಮ್ಮಣ್ಣ, ಸಹಾಯಕ ನಿರ್ದೇಶಕರು, ತಾಲೂಕಾ ಪಂಚಾಯತ ಹುಮನಾಬಾದ, ಎಂ.ಎ. ಜಬ್ಬಾರ್, ಸಂಸ್ಥಾಪಕ ಅಧ್ಯಕ್ಷರು ಕಾಂಬ್ರೀಜ್ ಸ್ಕೂಲ್ ಬೀದರ, ಶಶಿಕಾಂತ ಪೊಲೀಸ್ ಪಾಟೀಲ ಚೌಳಿ, ಗೌತಮ ಚಿಂತಲಗೇರಾ, ಹಿರಿಯ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಬೀದರ, ಅಮೃತರಾವ ಚಿಮಕೋಡೆ, ಜಿಲ್ಲಾಧ್ಯಕ್ಷರು ಗ್ಯಾರಂಟಿ ಯೋಜನೆ, ಸಂಜೀವಕುಮಾರ ಮೆಟಿ, ಶಿಕ್ಷಣ ಸಂಯೋಜಕರು ಬೀದರ, ಸೂರ್ಯಕಾಂತ ಸಾಧುರೆ, ನಾಮನಿರ್ದೇಶಕರು, ಸಿ.ಎಂ.ಸಿ. ಬೀದರ ಇವರು ಭಾಗವಹಿಸಿದ್ದರು.
ಅತಿಥಿಗಳಾಗಿ ಗೋವಿಂದ ಪೂಜಾರಿ, ಸಚಿನ ಕೌಠಾ, ಕೃಷ್ಣಾ ಹೊಸಮನಿ, ಚಂದ್ರಕಾಂತ ಶಾಹಬಾದಕರ್, ಪಾಂಡುರಂಗ ಬೆಲ್ದಾರ್, ಸುರೇಶ ಕಾಳೆ, ಸಿದ್ಧಾರ್ಥ ಭಾವಿಕಟ್ಟಿ, ಸಿದ್ರಾಮ ಶಿಂಧೆ, ರಾಜು ಸಾಗರ, ಸುಧಾಕರ ಶೇರಿಕಾರ, ಬಬ್ರುವಾಹನ, ಧನರಾಜ, ಸಂಜೀವಕುಮಾರ ಡಾಕುಳಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಆಯೋಜಕರಾದ ಕಿಶನ ವಾಘಮಾರೆ ಭಾಲ್ಕಿ, ಶಿವಕುಮಾರ ಶಿಂಧೆ ಚಂದನಹಳ್ಳಿ, ತುಕಾರಾಮ ಮೇತ್ರೆ, ಪುಟ್ಟರಾಜ್ ದೀನೆ, ಅಂಕುಶ ಡಾಂಗೆ, ಸುಧಾಕರ ಸಂಗಮ, ಅಡ್ವಾನಿ ನಾಯಕ, ಶಿವರಾಜ ಮಹೇಶಗೊಂಡ ಉಪಸ್ಥಿತರಿದ್ದರು. ಸುನೀಲ ಸಂಗಮ ರವರು ಸ್ವಾಗತ ಕೋರಿದರೆ, ನಿರೂಪಣೆಯನ್ನು ಅಂಬಾದಾಸ ಗಾಯಕವಾಡ್ ವಂದನಾರ್ಪಣೆ ಅಂಬಾದಾಸ ಸೋನಿ ಮಾಡಿದರು.
—————
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3