ಯಾದಗಿರಿ : ಯಾದಗಿರಿಯ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ವಿನೂತನವಾಗಿ ರಮಜಾನ್ ಹಬ್ಬ ಆಚರಿಸಿದ್ದಾರೆ. ರಮಜಾನ್ ಹಬ್ಬದ ಪ್ರಯುಕ್ತ ಮುಸಲ್ಮಾನ ಬಾಂಧವರಿಗೆ ತಮ್ಮ ಕಚೇರಿಯಲ್ಲಿ ಕಲ್ಲಂಗಡಿ ಹಂಚಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಎರಡೂವರೆ ಕ್ವಿಂಟಾಲ್ ಕಲ್ಲಂಗಡಿ ಖರೀದಿಸಿ, ತಮ್ಮ ಕಚೇರಿಯಲ್ಲೇ ಕಟ್ ಮಾಡುವ ಮೂಲಕ ಮುಸಲ್ಮಾನರ ಹಬ್ಬದಲ್ಲಿ ಸಂಭ್ರಮಿಸಿದ್ದಾರೆ. ಯಾವುದೊಂದೆ ಸಮಾಜಕ್ಕೆ ಸೀಮಿತವಾಗದೆ ಸಾಮಾಜಿಕ ಕಾರ್ಯ ಮಾಡುತ್ತಿರುವ ಹೋರಾಟಗಾರ ಉಮೇಶ್ ಮುದ್ನಾಳ್ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೇ ವೇಳೆ ಮಾತನಾಡಿರುವ ಅಖಿಲ ಭಾರತೀಯ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಅವರು ಹಿಂದೂ, ಮುಸ್ಲಿಂ ಎಂಬ ಭೇದ ಭಾವ ಮಾಡದೇ ನಾವೆಲ್ಲರೂ ಒಂದು ಎಂದು ಸಹಬಾಳ್ವೆಯಿಂದ ಬದುಕಬೇಕು. ಹಿಂದೂ, ಮುಸ್ಲಿಂ ಎಲ್ಲರೂ ಜೊತೆಗೂಡಿ ಹಬ್ಬ ಆಚರಿಸಿದ್ದರೆ ಹಬ್ಬಕ್ಕೂ ಮೆರಗು ಬರುತ್ತೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ರಿಯಾಜ್ ಅಹಮ್ಮದ್
ಬಶೀರ್,ಬಾಬ ಪಟೇಲ್,M.D.ರಫೀಕ್, ಮಹೇಶ್ ಹಿಪ್ಪರಗಿ
ಪಾಷ,ಶರಣು ಜೋತ,ಸಾಬಯ್ಯ ಗುತ್ತೆದಾರ್,ಮಹೆಬೂಬ್,ಮಹೆಬೂಬಸಾಬ್,