ನಮ್ಮನ್ನು ಪಾಲನೆ ಪೋಷಣೆ ಮಾಡಿ ದೊಡ್ಡವರನ್ನಾಗಿ ಈ ಸಮಾಜದಲ್ಲಿ ತಲೆ ಎತ್ತಿ ತಿರುಗುವಂತೆ ಮಾಡಿರುವುದು ನಮ್ಮ ನಿಜ ದೇವರು ತಂದೆ ತಾಯಿ ಅಲ್ಲವೇ? ನಾವು ಚಿಕ್ಕವರಿದ್ದಾಗ ಕೆಲವೊಂದು ಬಾಲ್ಯದ ನೆನಪುಗಳು ನೆನಪಿಗೆ ಬರುತ್ತವೆ ನಾವು ಮಾಡುವ ತುಂಟಾಟತನವನ್ನು ತಂದೆ ತನ್ನ ಮಕ್ಕಳಿಗೆ ಹೆಗಲ ಮೇಲೆತ್ತಿಕೊಂಡು ಅಲ್ಲಿ ಗುಬ್ಬಿ ನೋಡು ಅಲ್ಲಿ ಆಕಾಶ ನೋಡು ಪುಟ್ಟ ಅಂತಾ ತಂದೆ ಮಕ್ಕಳಿಗೆ ಸಮಾಧಾನ ಪಡಿಸಿ ಸಂತೈಸುವ ಪರಿ ಏಷ್ಟು ಅಪರೂಪ ಕ್ಷಣಗಳು ನಮಗೆ ನೆನಪಿಗೆ ಬರುತ್ತವೆ, ನಿಜಕ್ಕೂ ತಂದೆ ತನ್ನ ಕಣ್ಣಿಗೆ ಕಾಣದ ವಸ್ತು ತನ್ನ ಮಗನಿಗೆ ಕಾಣಲಿ ಅಂದರೆ ನಾ ಕಂಡ ಕೆಲವೊಂದು ಆಶೆ ಅಕ್ಷಾಂಶಯ ಗುರಿಯನ್ನು ಈಡೇರಿಸಲಿ, ನನ್ನ ಮಗ ಅತ್ಯುನ್ನತ ಹುದ್ದೆಗೆ ಸೇರಲಿ ನನ್ನ ಮನೆತನದ ಕೀರ್ತಿ ಹೆಚ್ಚಿಸಲಿ, ಎಲ್ಲ ರೀತಿಯಲ್ಲೂ ನನಗಿಂದ ಹೆಚ್ಚಿನ ಎತ್ತರ ಬೆಳೆಯಲಿ ಎಂದು ತಂದೆ ಆಶೆ ಪಡುವುದು.
ಮಕ್ಕಳು ತಂದೆ ಮನೆಗೆ ಬಂದ ತಕ್ಷಣವೇ ಓಡೋಡಿ ಬಂದು ಅಪ್ಪನ ಹೆಗಲೇನೇರಿ ಖುಷಿ ಪಡುವುದು, ಹಳ್ಳಿಯಲ್ಲಿ ಮಕ್ಕಳು ತನ್ನ ತಂದೆಗೆ ನನಗೆ ಉಪ್ಪಿನಚಿಲಾ ಮಾಡು ಅಂತಾ ಖುಷಿಯಿಂದಲೇ ಹಠವನ್ನು ತೆಗೆವುತ್ತಾರೆ, ಆಗ ಅಪ್ಪ ಮಕ್ಕಳಿಗೆ ಬೆನ್ನ ಮೇಲೆತ್ತಿಕೊಂಡು ಉಪ್ಪಿನ ಚಿಲಾ ಉಪ್ಪಿನ ಚಿಲಾ ಅಂತಾ ಮಕ್ಕಳಿಗೆ ಹೇಳಿ ನಗುನಗುತ್ತಾ ಖುಷಿ ಪಡಿಸಿ ಮನೋರಂಜನೆ ಆಟದಲ್ಲಿ ತೊಡಗಿಸಿ ಮಕ್ಕಳಿಗೆ ಸಂತೈಸುತ್ತಿದ್ದರು.
ಮಕ್ಕಳು ಎಷ್ಟೇ ದೊಡ್ಡವರಾದರು, ಸಣ್ಣವರಾದರು, ತನಗೆ ಬೇಕು ಬೇಡಿಕೆಯನಿದ್ದರು ಏನೇ ವಸ್ತು, ಹಣ, ಬೇಕಾದರೂ ಮೊದಲು ಕೇಳುವುದು ಅಮ್ಮನಿಗೆ ಮಾತ್ರ. ಮಕ್ಕಳು ಅಮ್ಮನಿಗೆ ಹೇಳುತ್ತಾರೆ. ಅಮ್ಮ ನನಗೆ ಆ ವಸ್ತು ಬೇಕು ಈ ವಸ್ತು ಬೇಕು ಅಂತಾ ಹಠ ಮಾಡಿ ಈ ಮಾತನ್ನು ನೀನು ಅಪ್ಪನಿಗೆ ಹೇಳು ಅಂತಾ ತಿಳಿಸುತ್ತಾರೆ, ಬಹುತೇಕ ಮಕ್ಕಳು ಅವರೇ ನೇರವಾಗಿ ಅಪ್ಪನಿಗೆ ಏನೇ ಬೇಕಾದರೂ ಕೇಳುದಿಲ್ಲ ಅಮ್ಮನ ಮೂಲಕ ಅಪ್ಪನಿಗೆ ತಿಳಿಸಿ ವಸ್ತು ಹಣ ತೆಗೆದುಕೊಳ್ಳುತ್ತಾರೆ, ಏನೇ ಇದ್ದರೂ ಮಕ್ಕಳು ಅಮ್ಮನ ಜೊತೆ ಮುಕ್ತ ಮನಸ್ಸಿನಿಂದ ವಿಷಯ ಹಂಚಿಕೊಳ್ಳುತ್ತಾರೆ.
ತಾಯಿ ನಮ್ಮನ್ನು ಒಂಬತ್ತು ತಿಂಗಳ ಕಾಲ ತನ್ನ ಒಡಲಲ್ಲಿ ಇಟ್ಟುಕೊಂಡು ಪಾಲನೆ ಪೋಷಣೆ ಮಾಡಿ ಹೆತ್ತು ಹೊತ್ತು ಮಡಿಲಲ್ಲಿ ಜೋಪಾನ ಮಾಡಿದ ತಾಯಿಯ ಋಣ ತೀರಿಸಲು ಅಸಾಧ್ಯವಾದ ಮಾತು.
ಮಕ್ಕಳು ಚಿಕ್ಕವರಿದ್ದಾಗ ಮಗು ತನ್ನ ತೊದಲು ನುಡಿಯನ್ನು ತಾಯಿಯನ್ನು ನೋಡಿ ಅನುಕರಣೆ ಮಾಡಿ ಅವಳ ಪದ ಬಳಕೆಯ ಮೇಲೆ ಚಿತ್ತವನಿಟ್ಟು ಮಾತುಗಳನ್ನು ಗ್ರಹಿಸಿ ಕಲಿಯುವ ತವಕದಲ್ಲಿರುತ್ತದೆ ಆ ಮಗುವಿನ ತೊದಲು ನುಡಿಗೆ ತಾಯಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾಳೆ, ಗೊತ್ತಾ? ತಾಯಿಯೂ ಕೂಡ ಮಗುವಿನ ತೊದಲು ನುಡಿಗೆ ಮಗುವಾಗಿ ಪ್ರತಿಕ್ರಿಯೆಸುವ ಪರಿ ನೋಡುವವರಿಗೆ ಆ ಕ್ಷಣ ಅದೆಷ್ಟು ಅಪರೂಪ ಅಲ್ಲವೇ…!
ಹೀಗೆ ಮಕ್ಕಳಿಗೆ ಅಮ್ಮ ಅಂದರೆ ಒಂದು ತರಹ ಸಹಪಾಠಿಗಳ ಗೆಳೆತನ ಅವರಿಗೆ ಅಷ್ಟೊಂದು ಭಯ ಕಾಣುದಿಲ್ಲ ಅವಳ ಜೊತೆ ತುಂಬಾ ವಿನಯ ಮನೋಭಾವದಿಂದ ಬೆರೆದು ಬೆಳೆಯುತ್ತಾರೆ , ತಾಯಿ ತನ್ನ ಮಕ್ಕಳಿಗೆ ಚಿಕ್ಕವರಿದ್ದಾಗ ದಿನ ನಿತ್ಯ ಜೀವನದಲ್ಲಿ ಮಹತ್ವದ ಸಂದೇಶವನ್ನು ತನ್ನ ಲಾಲಿ ಹಾಡಿನ ಮೂಲಕ ನಮ್ಮನ್ನು ಸಮಾಜದಲ್ಲಿ ಸಮರ್ಥನಾಗಿಸಲು ಶ್ರಮಪಡುವಳು ಅದು ಕೇವಲ ತಾಯಿಯಿಂದ ಮಾತ್ರ, ಸಾಧ್ಯ ಅದಕ್ಕೆ ಅನ್ನುವುದು ಹೆತ್ತ ಕರುಳಿನ ಕುಡಿ ಎಲ್ಲಕ್ಕಿಂತ ಮಿಗಿಲು ಅಂತಾ……!
– ಚಂದ್ರಕಾಂತ ಹಳ್ಳಿಖೇಡಕರ್
——————