ಬೀದರ್: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರಾತಿಗಾಗಿ ಯಾರೂ ಮಧ್ಯವರ್ತಿಗಳಿಗೆ ಹಣ ಕೊಡಬಾರದು ಎಂದು ಬೀದರ್ ತಾಲ್ಲೂಕಿನ ಮರಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಡಾ. ಈಶ್ವರಮ್ಮ ಬಿ. ಓಂಕಾರೆ ತಿಳಿಸಿದ್ದಾರೆ.
ಯೋಜನೆಯಡಿ ಮನೆ ಹಂಚಿಕೆಗೆ ವಸತಿ ರಹಿತರ ಸಮೀಕ್ಷೆ ನಡೆದಿದೆ. ನಿಯಮಾನುಸಾರ ಅರ್ಹ ಫಲಾನುಭವಿಗಳ ಆಯ್ಕೆ ನಡೆಯಲಿದೆ ಎಂದು ಹೇಳಿದ್ದಾರೆ.
ಇ-ಖಾತಾಗೆ ರೂ. 1,100 ಶುಲ್ಕ: ಪಂಚಾಯಿತಿಯಲ್ಲಿ ಇ-ಖಾತಾಗೆ ರೂ. 1,100 ಶುಲ್ಕ ಮಾತ್ರ ಇದೆ. ಹೆಚ್ಚುವರಿಯಾಗಿ ಯಾರಿಗೂ ಹಣ ಕೊಡುವ ಅವಶ್ಯಕತೆ ಇಲ್ಲ. ಆಸ್ತಿ ಮಾಲೀಕರು ಸಂಬಂಧಿಸಿದ ದಾಖಲೆ ಹಾಗೂ ನಿಗದಿತ ಶುಲ್ಕ ಪಾವತಿಸಿ ಪಂಚಾಯಿತಿಯಲ್ಲಿ ತಮ್ಮ ಆಸ್ತಿಯ ಇ- ಖಾತಾ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
——————