ಬೀದರ್: ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ಮಹಾತ್ಮ ಬೊಮ್ಮಗೊಂಡೇಶ್ವರ ಉತ್ಸವ ನಿಮಿತ್ತ ನಗರದಲ್ಲಿ ಭಾನುವಾರ ಅಲಂಕೃತ ರಥದಲ್ಲಿ ಬೊಮ್ಮಗೊಂಡೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಬೊಮ್ಮಗೊಂಡೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‍ಸಿಂಗ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಗುದಗೆ ಆಸ್ಪತ್ರೆ ಕ್ರಾಸ್, ರೋಟರಿ ಕನ್ನಡಾಂಬೆ ವೃತ್ತದ ಮೂಲಕ ಹಾಯ್ದು ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು.
ಪುಷ್ಪಗಳಿಂದ ಶೃಂಗರಿಸಿದ್ದ ರಥದಲ್ಲಿ ಬೊಮ್ಮಗೊಂಡೇಶ್ವರ ಬೃಹತ್ ಭಾವಚಿತ್ರ ಇಡಲಾಗಿತ್ತು. ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಬ್ಯಾಂಡ್, ಕೋಲಾಟ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು.
ಬೊಮ್ಮಗೊಂಡೇಶ್ವರ ವೇಷಧಾರಿಗಳು ನೋಡುಗರ ಗಮನ ಸೆಳೆದರು. ಮೆರವಣಿಗೆಯಲ್ಲಿ ಪಾಲ್ಗೊಂಡವರು ತಲೆ ಮೇಲೆ ಹಳದಿ ಟೊಪ್ಪಿಗೆ ಹಾಗೂ ಕೊರಳಲ್ಲಿ ಶಲ್ಯ ಧರಿಸಿದ್ದರು. ಗಣ್ಯರು, ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮೆರವಣಿಗೆ ಉದ್ದಕ್ಕೂ ಮಹಾತ್ಮ ಬೊಮ್ಮಗೊಂಡೇಶ್ವರರಿಗೆ ಜಯವಾಗಲಿ ಎಂಬ ಘೋಷಣೆ ಮೊಳಗಿದವು. ಭಂಡಾರ ಹಾರಿಸಲಾಯಿತು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ನೇತೃತ್ವ ವಹಿಸಿದ್ದರು.
ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ಬಿಡಿಎ ಮಾಜಿ ಅಧ್ಯಕ್ಷ ಮುರಳಿಧರ ಎಕಲಾಕರ್, ಮುಖಂಡರಾದ ಬಾಬುರಾವ್ ಮಲ್ಕಾಪುರ, ಮಲ್ಲಿಕಾರ್ಜುನ ಬಿರಾದಾರ(ಪರಿಹಾರ), ಮಾಳಪ್ಪ ಅಡಸಾರೆ, ಎಂ.ಎಸ್. ಕಟಗಿ, ದೇವಪ್ಪ ಚಾಂಬೋಳೆ, ಸುಭಾಷ್ ನಾಗೂರೆ, ಪಿ.ಎಸ್. ಇಟಕಂಪಳ್ಳಿ, ಕಲ್ಲಪ್ಪ ರಾಯಗೊಂಡ, ಮಲ್ಲಿಕಾರ್ಜುನ ಮುರ್ಕೆ, ಉದಯಕುಮಾರ ಬ್ಯಾಲಹಳ್ಳಿ, ಎಂ.ಪಿ. ವೈಜಿನಾಥ, ಸುನೀಲ್ ಚಿಲ್ಲರ್ಗಿ, ಗೋವಿಂದ ದುರ್ಗೆ, ಶಿವಕುಮಾರ ಹಾಲಹಿಪ್ಪರ್ಗಾ, ಲೋಕೇಶ ಮರ್ಜಾಪುರ, ಕಲ್ಲಪ್ಪ ಯರನಳ್ಳಿ, ಕಾಮಶೆಟ್ಟಿ ಘೋಡಂಪಳ್ಳಿ ಮತ್ತಿತರರು ಭಾಗವಹಿಸಿದ್ದರು. ಜಿಲ್ಲೆಯ ವಿವಿಧೆಡೆಯ ಗೊಂಡ ಸಮುದಾಯದ ಪ್ರತಿನಿಧಿಗಳು ಹಾಗೂ ಬೊಮ್ಮಗೊಂಡೇಶ್ವರ ಅನುಯಾಯಿಗಳು ಪಾಲ್ಗೊಂಡಿದ್ದರು.
————
————