ಬೀದರ್: ಬೇಸಿಗೆಯ ಆರಂಭದ ದಿನಗಳಲ್ಲಿಯೇ ಹೆಚ್ಚುತ್ತಿರುವ ತಾಪಮಾನದಿಂದಾಗಿ, ಪಕ್ಷಿ ಸಂಕುಲವು ಕುಡಿಯಲು ನೀರು ಸಿಗದೇ ಸಾವನ್ನಪ್ಪುತ್ತಿರುವುದರಿಂದ ಗುಬ್ಬಚ್ಚಿಗಳು, ಪಕ್ಷಿಗಳು, ಪಾರಿವಾಳಗಳು ಹಾಗೂ ಇತರ ಸಾಮಾನ್ಯ ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿ ಅವುಗಳ ಸಂತತಿಯನ್ನು ಉಳಿಸಿಕೊಳ್ಳಬೇಕೆಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನರವರು ಜನತೆಗೆ ಕರೆ ನೀಡಿದರು.
ಅವರು ಇಂದು “ವಿಶ್ವ ಗುಬ್ಬಚ್ಚಿ ದಿನಾಚರಣೆಯ ಅಂಗವಾಗಿ ಬರೀದಶಾಹಿ ಉದ್ಯಾನದಲ್ಲಿ ಹಕ್ಕೀ – ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಪಕ್ಷಿಗಳು ಪರಿಸರವನ್ನು ಸಮತೋಲನ ಗೊಳಿಸುತ್ತವೆ. ಮನೆ, ಕಚೇರಿ, ಸಾರ್ವಜನಿಕ ಸ್ಥಳಗಳು, ರಸ್ತೆಗಳ ಬದಿ, ಉದ್ಯಾನಗಳು ಮುಂತಾದ ಸ್ಥಳಗಳಲ್ಲಿ ಸಾಧ್ಯ ವಾದಷ್ಟು ಪಕ್ಷಿಗಳಿಗೆ ಕುಡಿಯುವ ನೀರು ಸಿಗುವಂತಹ ವ್ಯವಸ್ಥೆ ಮಾಡಿ ಮೂಕ ಪಕ್ಷಿಗಳ ಸಂತತಿ ನಾಶವಾಗದಂತೆ ನೋಡಿಕೊಳ್ಳ ಬೇಕೆಂದು ಆಗ್ರಹಿಸಿದರು.

ಕಳೆದ ಏಳು ವರ್ಷಗಳಿಂದ, ಸರ್ಕಾರ ದಿಂದ/ಸಂಘ ಸಂಸ್ಥೆಗಳಿಂದ ಯಾವುದೇ ಸಹಾಯವಿಲ್ಲದೆ, ನಿರಂತರವಾಗಿ ಬೇಸಿಗೆಯಲ್ಲಿ ಬೀದರ ನಗರದ ವಿವಿಧ ಭಾಗಗಳಲ್ಲಿ, ಪಶು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ನುಡಿದರು.
2011 ರಲ್ಲಿ ಭಾರತೀಯ ಸಂರಕ್ಷಣಾವಾದಿ ಮೊಹಮ್ಮದ್ ದಿಲಾವರ್ ರವರು ನೇಚರ್ ಫಾರೇವರ್ ಸೊಸೈಟಿಯನ್ನು ಆರಂಭಿಸಿ, ಪಕ್ಷಿಗಳ ಕಾಳಜಿಯನ್ನು ಮಾಡುತ್ತಿದ್ದಾರೆ. ಹಿರಿಯ ಯೋಗ ಮೇಲ್ವಿಚಾರಕ ಗಂಗಪ್ಪ ಸಾವಳೇಯವರು ಮಾತನಾಡಿ, ನಿರಂತರವಾಗಿ ಪಕ್ಷಿಗಳ ಕಾಳಜಿಯನ್ನು ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯ ನಿಜಲಿಂಗಪ್ಪ ತಗಾರೆಯವರು ಮಾತನಾಡಿದರು. ವೀರಶೆಟ್ಟಿ, ಅಶೋಕ , ಸಂಜೀವಕುಮಾರ ಶೀಲ ವಂತ, ಈಶ್ವರ್ ಕನೇರಿ, ಕಿರಣ, ರಾಚಯ್ಯ ಸ್ವಾಮಿ ಮುಂತಾದವರು ಹಾಜರಿದ್ದರು.
—————