ಭಾಲ್ಕಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ* (Karnataka Working Journalists Voice) ಸಂಘಟನೆಯ ಭಾಲ್ಕಿ ತಾಲೂಕು ಅಧ್ಯಕ್ಷರಾಗಿ ಸಂತೋಷ್ ಎನ್. ನಾಟೇಕರ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ಸಂತೋಷ್ ನಾಟೇಕರ ಅವರು “ಬೆಂಗಳೂರು ಬೇಟೆ” ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಭಾಲ್ಕಿ ತಾಲೂಕಿನ ಪತ್ರಕರ್ತರನ್ನು ಸಂಘಟಿಸುವ ಜವಾಬ್ದಾರಿಯನ್ನು ಅವರ ಮೇಲೆ ವಹಿಸಲಾಗಿದೆ. ಪತ್ರಕರ್ತರ ಹಕ್ಕುಗಳನ್ನು ರಕ್ಷಿಸುವ ಮತ್ತು ಎದುರಾಗುವ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದೊಂದಿಗೆ ಈ ನೇಮಕ ನಡೆದಿದೆ ಎಂದು ಬಂಗ್ಲೆ ಮಲ್ಲಿಕಾರ್ಜುನ ಅವರು ಸಹಿ ಮಾಡಿದ ನೆಮಕಾತಿ ಪತ್ರದಲ್ಲಿ ತಿಳಿಸಿದ್ದಾರೆ.
—————