ಬೀದರ್ : ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ : ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ, ಸ್ಥಳ ವೀಕ್ಷಣೆ ಮಾಡಿದರು.
ಹುಮನಾಬಾದ ತಾಲೂಕಿನ ಹಳ್ಳಿಖೇಡ ಬಿ, ಸಿಂದಬAದಗಿ , ಭಾಲ್ಕಿ ತಾಲೂಕಿನ ಗೋಧಿ ಹಿಪ್ಪರಗಾ, ಕಾರಂಜಾ ಜಲಾಶಯ ಗಳಿಗೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದರು. ಕಾರಂಜಾ ಜಲಾಶಯದ ನೀರಿನ ಮಟ್ಟ ವೀಕ್ಷಣೆ ಮತ್ತು ಸಿಂದಬಂದಗಿ ಗ್ರಾಮದ ಪ್ರಾಥಮಿಕ ಶಾಲೆಗೆ ನೀರು ನುಗ್ಗಿರುವುದರಿಂದ ಭೇಟಿ ನೀಡಿ, ತಕ್ಷಣ ನೀರು ಹೊರ ಹಾಕಲು ವ್ಯವಸ್ಥೆ ಮಾಡುವಂತೆ ಗ್ರಾಮದ ಪಿಡಿಒ ಗೆ ಸೂಚಿಸಿದರು.

ಹಳ್ಳಿಖೇಡ ಬಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ತುರ್ತು ಚಿಕಿತ್ಸಾ ಘಟಕ ಮತ್ತು ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಗೋಧಿ ಹಿಪ್ಪರಗಾ ಗ್ರಾಮದ ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿದರು.
ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು., ಹಳ್ಳ, ಕೆರೆಗಳನ್ನು ದಾಟದಂತೆ ಹಾಗೂ ಜಾನುವಾರುಗಳನ್ನು ಹಳ್ಳದ ತಟಕ್ಕೆ ಬಿಡದಂತೆ ಗ್ರಾಮಸ್ಥರಿಗೆ ತಿಳಿಸಿದರು.
