ತೋಟಗಾರಿಕೆ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ
ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಅವಶ್ಯಕ
ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಅವಶ್ಯಕ
ಬೀದರ್: ಉತ್ತಮ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯಕ ಎಂದು ತೋಟಗಾರಿಕೆ ಕಾಲೇಜು ಡೀನ್ ಡಾ. ಎಸ್.ವಿ. ಪಾಟೀಲ ಹೇಳಿದರು.
ನಗರದ ತೋಟಗಾರಿಕೆ ಕಾಲೇಜಿನಲ್ಲಿ ಮೇರಾ ಯುವ ಭಾರತ್ ಹಾಗೂ ತೋಟಗಾರಿಕೆ ಕಾಲೇಜು ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ಮನುಷ್ಯನನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುತ್ತವೆ ಎಂದು ತಿಳಿಸಿದರು.
ಯುವಜನರು ಆರೋಗ್ಯ ಕಾಯ್ದುಕೊಳ್ಳಲು ಆದಷ್ಟು ಜಂಕ್ ಫುಡ್‍ಗಳಿಂದ ದೂರವಿರಬೇಕು. ಸಿರಿಧಾನ್ಯ ಪದಾರ್ಥಗಳನ್ನು ಎಂದು ತಿಳಿಸಿದರು.
ದೈಹಿಕ ಶಿಕ್ಷಕ ಡಾ. ರಮೇಶ ನಾಯ್ಕ್ ಅವರು, ಹಾಕಿ ಮಾಂತ್ರಿಕ ಧ್ಯಾನಚಂದ್ ಅವರ ಕುರಿತು ಮಾತನಾಡಿದರು.
ರಾಜ್ಯಮಟ್ಟದ ಆಟಗಾರ್ತಿ ನಿಮ್ಮಸ್ವಾತಿ ಅವರನ್ನು ಸನ್ಮಾನಿಸಲಾಯಿತು.
ಗುರುನಾನಕ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಅಧಿಕಾರಿ ಗೌರಮ್ಮ ಮಠಪತಿ, ಮೇರಾ ಯುವ ಭಾರತ್‍ನ ಸೋಮನಾಥ ಪೂಜಾರಿ ಇದ್ದರು.
ವಾಲಿಬಾಲ್, ಬ್ಯಾಡ್ಮಿಂಟನ್ ಪಂದ್ಯಗಳು ನಡೆದವು.
