2.00 ಕೋಟಿ ರೂ.ವೆಚ್ಚದ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭೂಮಿಪೂಜೆ
—-
ಹೊನ್ನಿಕೇರಿ ಭಕ್ತರಿಗೆ ಸುಸಜ್ಜಿತ ಯಾತ್ರಿ ನಿವಾಸ
ಬೀದರ್: ತಾಲೂಕಿನ ಸುಕ್ಷೇತ್ರ ಹೊನ್ನಿಕೇರಿ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರ ಸೌಕರ್ಯಕ್ಕಾಗಿ ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸುಸಜ್ಜಿತ ಯಾತ್ರಿ ನಿವಾಸಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಐತಿಹಾಸಿಕ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆದಿರುವ ಹೊನ್ನಿಕೇರಿ ಶ್ರೀ ಸಿದ್ದೇಶ್ವರ ಕ್ಷೇತ್ರಕ್ಕೆ ಕರ್ನಾಟಕವಲ್ಲದೆ ನೆರೆಯ ಮಹಾರಾಷ್ಟ್ರ, ತೆಲಂಗಾಣದಿಂದಲೂ ಅಪಾರ ಭಕ್ತಾದಿಗಳು ಆಗಮಿಸುತ್ತಾರೆ. ಶ್ರಾವಣಮಾಸ ತಿಂಗಳಪೂರ್ತಿ ಹಾಗೂ ಪ್ರತಿ ಸೋಮವಾರ, ಹುಣ್ಣಿಮೆ, ಅಮವಾಸ್ಯೆ ದಿನ ಭಕ್ತಸಮೂಹವೇ ಹರಿದುಬರುತ್ತದೆ. ಆದರೆ ಇಲ್ಲಿ ಉತ್ತಮ ವಸತಿ, ಶೌಚಾಲಯ, ಸ್ನಾನಗೃಹ, ಭೋಜನ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯಿಂದ ಭಕ್ತಾದಿಗಳಿಗೆ ಅನಾನುಕೂಲತೆ ಕಾಡುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಸೌಲಭ್ಯಗಳುಳ್ಳ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ವಿವಿಧೆಡೆಯಿಂದ ಬರುವ ಭಕ್ತರಿಗೆ ಯಾತ್ರಿ ನಿವಾಸದಲ್ಲಿ ಸುಸಜ್ಜಿತ ಕೊಠಡಿಗಳಿರಲಿವೆ. ಗಣ್ಯರಿಗೆ ವಿಐಪಿ ಕೋಣೆ, ಸಭಾಂಗಣ, ಕಲ್ಯಾಣ ಮಂಟಪ, ಊಟ, ಶುದ್ಧ ನೀರಿನ ವ್ಯವಸ್ಥೆ ಇರಲಿದೆ. ಮಹಿಳಾ ಭಕ್ತಾದಿಗಳಿಗೆ ಈ ಯಾತ್ರಿ ನಿವಾಸ ಸಾಕಷ್ಟು ಅನುಕೂಲ ಕಲ್ಪಿಸಲಿದೆ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಬರುವ ದಿನಗಳಲ್ಲಿ ಇನ್ನಷ್ಟು ಯೋಜನೆ ಕಾರ್ಯಗತಗೊಳಿಸುವೆ ಎಂದು ಭರವಸೆ ನೀಡಿದರು.
ಪವಿತ್ರ ಕುಂಡದಿAದ ಮಂದಿರಕ್ಕೆ ಬರುವ ಮಾರ್ಗದಲ್ಲಿ ಉತ್ತಮ ಟೈಲ್ಸ್ ಹಾಕಿ ಅಭಿವೃದ್ಧಿಪಡಿಸುವುದು ಸೇರಿದಂತೆ ಇತರೆ ಕಾಮಗಾರಿಗಾಗಿ ಮಂದಿರದ ೨೮ ಲಕ್ಷ ರೂ.ಹಣ ಒದಗಿಸಿದ್ದು, ಶೀಘ್ರ ಈ ಕಾಮಗಾರಿ ಆರಂಭವಾಗಲಿವೆ. ಶೀಘ್ರದಲ್ಲಿ ಸಂಬAಧಿತ ಅಧಿಕಾರಿಗಳು, ಸ್ಥಳೀಯ ಪ್ರಮುಖರೊಂದಿಗೆ ಇಲ್ಲಿ ಸಭೆ ನಡೆಸಿ ಮುಂದಿನ ಕೆಲಸಕಾರ್ಯಗಳ ಕುರಿತು ಚರ್ಚಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತಾಧಿಕಾರಿ ಅನಂತರಾವ ಕುಲಕರ್ಣಿ, ಮುಖಂಡರಾದ ಹಣಮಂತರಾವ ಮೈಲಾರೆ, ಭೀಮರಾಮ ಪಾಟೀಲ್, ಸುರೇಶ ಮಾಸೆಟ್ಟಿ, ಮಹೇಶ ಮೈಲಾರೆ, ಶಿವಕುಮಾರ ಕೋಳಾರೆ, ಸಂಜುಕುಮಾರ ಮಾಸೆಟ್ಟಿ, ಸಂತೋಷ ಸೋರಳ್ಳಿ, ಸಂಜು ರೆಡ್ಡಿ, ಬಸವರಾಜ ಸಿಂದಬAದಗಿ, ಬಸವರಾಜ ಪಟೋದಿ, ಸಂತೋಷ ರೆಡ್ಡಿ, ಕಾಶಿನಾಥ ಸೋರಳ್ಳಿ, ರೇವಣಪ್ಪ ಕೋಳಾರೆ, ರಾಜಶೇಖರ ಕೋಳಾರೆ, ರವಿ ಶಂಕರಶೆಟ್ಟಿ, ಉಮೇಶ ಮೂಲಿಮನಿ, ವಿನೋದ ರಾಠೋಡ್, ಮಾದಪ್ಪ ಗುಮಸಾಪುರೆ, ಧನರಾಜ ಖೇಮಶೆಟ್ಟಿ, ಶಾಲಿವಾನ ಕೋಳಾರೆ, ದೇವಿದಾಸ ರೆಡ್ಡಿ, ಸಿದ್ದಯ್ಯಾ ಸ್ವಾಮಿ, ಅನೀಲ, ಶಿವಶಂಕರ ಫುಲ್ಲೆ, ಸಂತೋಷ ಶಂಭು, ಸುಭಾಷರಾವ ಪಾಟೀಲ, ಚೇತನ ಸೋರಳ್ಳಿ, ಶಿವಕುಮಾರ ಸ್ವಾಮಿ, ಅಮರ ಕಪಲಾಪುರ, ಚೇತನ ಸೋರಳ್ಳಿ, ಪ್ರವೀಣ ಪಟೋದಿ ಮತ್ತಿತರರು ಉಪಸ್ಥಿತರಿದ್ದರು.
———————
ಭಕ್ತರೊಂದಿಗೆ ಸಮಾಲೋಚನೆ…
ಶ್ರಾವಣದ ಕೊನೆಯ ಸೋಮವಾರ ಹಿನ್ನೆಲೆಯಲ್ಲಿ ಶ್ರೀ ಸಿದ್ದೇಶ್ವರ ದೇವರಿಗೆ ಶಾಸಕ ಬೆಲ್ದಾಳೆ ಅವರು ಜನಕಲ್ಯಾಣಕ್ಕೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಬಳಿಕ ಭಕ್ತರೊಂದಿಗೆ ಬೆರೆತು ಮಾತನಾಡಿ ವ್ಯವಸ್ಥೆ ಬಗ್ಗೆ ಮಾಹಿತಿ ಕಲೆ ಹಾಕಿದರು. ಗರ್ಭ ಗುಡಿಯೊಳಗೆ ಧಗೆ ಜಾಸ್ತಿಯಿದೆ. ಸೂಕ್ತ ಗಾಳಿ ವ್ಯವಸ್ಥೆ ಇಲ್ಲ. ಮಳೆ ಬಿದ್ದರೆ, ಬಿಸಿಲ ತಾಪವಿದ್ದರೆ ಸರತಿ ಸಾಲಿನಲ್ಲಿ ನಿಲ್ಲಲು ಕಷ್ಟವಾಗುತ್ತಿದೆ ಎಂದು ಗೋಳು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕರು, ತಕ್ಷಣ ಗರ್ಭಗುಡಿಯೊಳಗೆ ಇನ್ನೊಂದು ಎಸಿ ಅಳವಡಿಸಲು ಆಡಳಿತಾಧಿಕಾರಿ ಅನಂತರಾವ ಕುಲಕರ್ಣಿ ಅವರಿಗೆ ಸೂಚಿಸಿದರು. ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ಸಾಲಿನಲ್ಲಿ ಬರುವ ಭಕ್ತರಿಗಾಗಿ ನೆರಳಿನ ಮೇಲ್ಛಾವಣಿ ಮಾಡಿಸಲು ನಿರ್ದೇಶನ ನೀಡಿದರು.
———————–
ನಿಸರ್ಗದ ಮಡಿಲಲ್ಲಿರುವ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನವು ಈ ಭಾಗದ ಪ್ರಮುಖ ಧಾರ್ಮಿಕ, ಪ್ರವಾಸಿ ತಾಣವಾಗಿದೆ. ಅರಣ್ಯ ಇಲಾಖೆ ಇಲ್ಲಿ ಇಕೋ ಟೂರಿಸಮ್ ಕಾಮಗಾರಿ ಕೈಗೆತ್ತಿಕೊಂಡಿದ್ದು ಉತ್ತಮ ಬೆಳವಣಿಗೆಯಾಗಿದೆ. ದೇವಸ್ಥಾನ ಅಭಿವೃದ್ಧಿ ಜೊತೆಗೆ ಇಲ್ಲಿಗೆ ಬರುವ ಭಕ್ತರಿಗೆ ಇನ್ನಷ್ಟು ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು.
ಡಾ.ಶೈಲೇಂದ್ರ ಕೆ. ಬೆಲ್ದಾಳೆ
ಬೀದರ್ ದಕ್ಷಿಣ ಶಾಸಕ
—————
