ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿಕೆ
ಸಂಗೊಳ್ಳಿ ರಾಯಣ್ಣ ದೇಶ ಪ್ರೇಮ ಮಾದರಿ
ಸಂಗೊಳ್ಳಿ ರಾಯಣ್ಣ ದೇಶ ಪ್ರೇಮ ಮಾದರಿ
ಬೀದರ್: ಸಂಗೊಳ್ಳಿ ರಾಯಣ್ಣ ಅವರ ದೇಶ ಪ್ರೇಮ ಎಲ್ಲರಿಗೂ ಮಾದರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ವತಿಯಿಂದ ನಗರದ ಶ್ರೀ ಸಾಯಿ ಆದರ್ಶ ಶಾಲೆ ಆವರಣದಲ್ಲಿ ಗೊಂಡ ಹಾಸ್ಟೆಲ್‍ನಲ್ಲಿ ಈಚೆಗೆ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಅವರ ಶೌರ್ಯ, ಸಾಹಸ ಯುವಕರಿಗೆ ಪ್ರೇರಣೆಯಾಗಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.
ವಿಜಯಪುರದ ಶಿಲ್ಪಾ ಕುಂದುರಗೊಂಡ ಉಪನ್ಯಾಸ ನೀಡಿದರು. ಸಂಗೀತ, ಕಲಾ ತಂಡಗಳ ಪ್ರದರ್ಶನ ಸಭಿಕರ ಗಮನ ಸೆಳೆದವು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಜಕುಮಾರ ಲದ್ದೆ, ಡಾ. ಮಲ್ಲಿಕಾರ್ಜುನ ಬಿ.ಬಿ. ಅವರನ್ನು ಸನ್ಮಾನಿಸಲಾಯಿತು.
ಔದತ್ತಪುರದ ಶಿವಯೋಗಿ ಮಚ್ಚೇಂದ್ರನಾಥ ಮಹಾರಾಜ ಸಾನಿಧ್ಯ ವಹಿಸಿದ್ದರು. ಮೈಲಾರ ಮಲ್ಲಣ್ಣ ದೇವಸ್ಥಾನದ ಪ್ರಧಾನ ಅರ್ಚಕ ಬಸಪ್ಪ ಹಿರಿವಗ್ಗೆ, ಉಚ್ಚಾದ ಬಾಲ ತಪಸ್ವಿ ಗೋಪಾಲ್ ಮುತ್ಯಾ ಸಮ್ಮುಖ ವಹಿಸಿದ್ದರು. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾ ಅಧ್ಯಕ್ಷ ಲೋಕೇಶ ಎಂ. ಮರ್ಜಾಪುರ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಮುಖಂಡರಾದ ಬಾಬುರಾವ್ ಮಲ್ಕಾಪುರೆ, ಪೀರಪ್ಪ ಯರನಳ್ಳಿ, ಬಸವರಾಜ ಮಾಳಗೆ, ಸಂಘಟನೆಯ ಗೌವಾಧ್ಯಕ್ಷ ಶಿವರಾಜ ಮಲ್ಕಾಪುರ, ರಾಜ ಟಗರು ಆಣದೂರ, ಕುಮಾರ ನಿಜಾಂಪುರ, ಮಲ್ಲಿಕಾರ್ಜುನ ಚಿಮಕೋಡ್, ಮಾರುತಿ ಚಿಮಕೋಡ್, ಮೋಹನ್ ಚಿಮಕೋಡ್ ಮತ್ತಿತರರು ಉಪಸ್ಥಿತರಿದ್ದರು.