Friday, January 16, 2026
HomePopularಬೀದರ್ ದಕ್ಷಿಣ ಕ್ಷೇತ್ರದ ನಿರ್ಣಾ ಗ್ರಾಮದಲ್ಲಿ  18 ಕೋಟಿ ರೂ. ವೆಚ್ಚದ ವಸತಿ ಶಾಲೆ ಕಟ್ಟಡ...

ಬೀದರ್ ದಕ್ಷಿಣ ಕ್ಷೇತ್ರದ ನಿರ್ಣಾ ಗ್ರಾಮದಲ್ಲಿ  18 ಕೋಟಿ ರೂ. ವೆಚ್ಚದ ವಸತಿ ಶಾಲೆ ಕಟ್ಟಡ ಗುದ್ದಲಿ ಪೂಜೆ

ಬೀದರ್ ದಕ್ಷಿಣ ಕ್ಷೇತ್ರದ ನಿರ್ಣಾ ಗ್ರಾಮದಲ್ಲಿ  ೧೮ ಕೋಟಿ ರೂ. ವೆಚ್ಚದ ವಸತಿ ಶಾಲೆ ಕಟ್ಟಡ ಗುದ್ದಲಿ ಪೂಜೆ

ನಮ್ಮ ಬೀದರ್ ದಕ್ಷಿಣ ಕ್ಷೇತ್ರದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಬದ್ಧ: ಡಾ. ಶೈಲೇಂದ್ರ ಬೆಲ್ದಾಳೆ

ಬೀದರ್ : ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿ ಸರ್ಕಾರದ ವಿವಿಧ ಇಲಾಖೆಗಳಿಂದ ಅನುದಾನ ತಂದು  ಜನರಿಗಾಗಿ ದುಡಿದು ಕ್ಷೇತ್ರ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ನಿರ್ಣಾ ಗ್ರಾಮದ ಹೊರವಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೧೮ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಡಾ. ಬಿ.ಆರ್. ಅಂಬೇಡ್ಕರ್ ರವರ ಬಾಲಕಿಯರ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಅವರು  ಮಾತನಾಡಿದರು.
ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿಗೆ ಹತ್ತಾರು ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಿ ಶಿಕ್ಷಣ, ಆರೋಗ್ಯ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ಪ್ರಮುಖವಾಗಿ ಕುಡಿಯುವ ನೀರು, ರಸ್ತೆ ಚರಂಡಿ ಸ್ವಚ್ಚತೆ, ಉತ್ತಮ ಪರಿಸರ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡಬೇಕು.  ಪ್ರಮುಖವಾಗಿ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದ ಗ್ರಾಮಗಳಿಗೆ ಗ್ರಾಮಸ್ಥರ ಸಾಕಷ್ಟು ವರ್ಷಗಳ ಬೇಡಿಕೆಯಾಗಿದ್ದ   ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ   ಪ್ರಗತಿಗೆ ಮತ್ತಷ್ಟು ನೆರವು ನೀಡಲಾಗುವುದು ಎಂದು ಹೇಳಿದರು.
ಕ್ಷೇತ್ರದ ಬಡಜನರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ  ಪ್ರತಿಯೊಂದು ಯೋಜನೆ ಜನರ ಮನೆ ಬಾಗಿಲಿಗೆ ತಲುಪಿಸುವುದು ನನ್ನ ಜವಾಬ್ದಾರಿ ಈ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ  ಮೂಲಸೌಕರ್ಯಗಳಿಗೆ ಒತ್ತು ನೀಡಿರುವುದು ಪಾರದರ್ಶಕತೆ ಮತ್ತು ಕೆಳಹತಂದ ಜನರಿಗೂ ಅನುಕೂಲಗಳನ್ನು ತ್ವರಿತವಾಗಿ ತಲುಪಿಸಲಾಗುವುದು. ಅಧಿಕಾರಿಗಳು, ಗುತ್ತಿಗೆದಾರರು ಕಾಮಗಾರಿ ಉತ್ತಮವಾಗಿ  ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ಮಂಜುನಾಥ್, ಗ್ರಾಪಂ ಉಪಾಧ್ಯಕ್ಷ ಸಂಜುಕುಮಾರ, ಪಿಡಿಒ ಬಸವರಾಜ, ಮುಖಂಡರಾದ  ಸುರೇಶ ಮಾಶೆಟ್ಟಿ, ಮಾಣಿಕಪ್ಪ ಖಾಶೆಂಪುರ, ಚಂದ್ರಯ್ಯ ಸ್ವಾಮಿ, ಶ್ರಿನಿವಾಸ ಪೊದ್ದಾರ, ಘಾಳೇಪ್ಪ ಚಟ್ಟನಳ್ಳಿ, ರವಿ ಸ್ವಾಮಿ, ಶಿವರಾಜ, ಜಗನ್ನಾಥ ಮಜಗೆ, ರಾಜು ಪಸಾರ, ಚನ್ನಬಸಪ್ಪ ಸೊಪ್ಪಣ್ಣ, ವೆಂಕಟರೆಡ್ಡಿ, ನರಸ್ಸಾ ರೆಡ್ಡಿ, ಕೃಷ್ಣ ರೆಡ್ಡಿ, ಶರಣು ಪಾಟೀಲ, ಸುನೀತಾ ಮಂಗಲಗಿ, ಸತೀಶ್ ತೆಳಮನಿ, ಮಹೇಶ, ಗೋಪಾಲ, ಶಂಕರ ಉದಗೀರೆ, ಈರಯ್ಯ ಸ್ವಾಮಿ, ದಿಲೀಪ್ ಪಸಾರ, ಭದ್ರಪ್ಪ ಭದ್ರಪ್ಪನೋರ, ಸಂಜು ಬಿಜಾಪುರ, ಅರುಣಕುಮಾರ ಬಾವಗಿ, ಬಸವ ನಿರ್ಣಾ, ರಮೇಶ ಧೋಳ, ವೀರಶೆಟ್ಟಿ ನಾಗವಾರ, ಮಂಜುನಾಥ್, ಈಶ್ವರ, ವಿಜಯಕುಮಾರ, ಶಾಮರಾವ ಮತ್ತಿತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3