ಝಿ ಟಿ.ವಿ ಸರಿಗಮಪ -21ರ ವಿಜೇತೆ ಕು.ಶಿವಾನಿಗೆ ಸನ್ಮಾನ
ಜು. 29 ರಂದು ಶಿವಾನಿಗೆ ಅಭಿನಂದನಾ ಸಮಾರಂಭ: ಶಿವಕುಮಾರ ಸ್ವಾಮಿ
ಬೀದರ್: ಇತ್ತಿಚೀಗೆ ಝಿ ಕನ್ನಡ ಟಿ.ವಿ ವಾಹಿನಿಯ ಸರಿಗಮಪ-೨೧ರ ವಿಜೇತರಾದ ಕು.ಶಿವಾನಿ ತಂದೆ ಶಿವದಾಸ ಸ್ವಾಮಿ ಅವರ ಅಭಿನಂದನಾ ಸಮಾರಂಭ ಈ ತಿಂಗಳ ೨೯ರಂದು ನಗರದ ಲಾಡಗೇರಿ ಹಿರೇಮಠ ಸಂಸ್ಥಾನದ ಅವರಣದಲ್ಲಿ ಅಂದು ಸಂಜೆ ೭ ಗಂಟೆಗೆ ಜರುಗಲಿದೆ ಎಂದು ಅಭಿನಂದನಾ ಸಮಾರಂಭದ ನೇತೃತ್ವ ವಹಿಸಿದ ಪತ್ರಕರ್ತ ಶಿವಕುಮಾರ ಸ್ವಾಮಿ ತಿಳಿಸಿದರು.
ಸೋಮವಾರ ರಾತ್ರಿ ನಗರದ ರಾಂಪುರೆ ಬಡಾವಣೆಯಲ್ಲಿರುವ ಶಿವಾನಿ ಅವರ ನಿವಾಸಕ್ಕೆ ತೆರಳಿದ ಬೇಡ ಜಂಗಮ ಸಮಾಜ ಬಾಂಧವರ ನಿಯೋಗ ಕು.ಶಿವಾನಿಗೆ ಸನ್ಮಾನಿಸಿ ಅಭಿನಂದನಾ ಸಮಾರಂಭಕ್ಕೆ ಅವ್ಹಾನ ನೀಡಿ ಮಾತನಾಡಿದರು.
ಶಿವಾನಿ ಸ್ವಾಮಿ ತನ್ನ ಅದ್ಭುತ ಸಂಗೀತ ಪ್ರದರ್ಶನಗೈದು ಇಡೀ ಬೇಡ ಜಂಗಮ ಸಮಾಜದ ಕೀರ್ತಿ ಹೆಚ್ಚಿಸಿದ್ದಾರೆ. ಆಕೆಯ ಈ ಅದ್ಭುತ ಬೆಳವಣಿಗೆ ಇಡೀ ಸಮಾಜಕ್ಕೆ ಖುಷಿ ತಂದಿದ್ದು, ಈಕೆ ಇನ್ನು ಎತ್ತರೆತ್ತರಕ್ಕೆ ಬೆಳೆಯಲಿ, ಆಕೆಯ ಉನ್ನತ ಅಭಿವೃದ್ಧಿಗೆ ಇಡೀ ¸ಮುದಾಯ ಆಕೆಯ ಬೆನ್ನಿಗಿದೆ ಎಂದರು.
ಶ್ರೀ ರೇಣುಕ ಮಹೇಶ್ವರ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪುರ ಮಾತನಾಡಿ, ಶಿವಾನಿ ಸ್ವಾಮಿ ಇಲ್ಲಿಯ ವರೆಗೆ ಹಲವಾರು ಪ್ರಶಸ್ತಿ ತನ್ನದಾಗಿಸಿಕೊಂಡು ಕುಟುಂಬಕ್ಕೆ, ಇಡೀ ಬೇಡ ಜಂಗಮ ಸಮುದಾಯಕ್ಕೆ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾಳೆ. ಇಂಥ ಪ್ರತಿಭೆಗೆ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಹಾಗಾಗಿ ಈ ತಿಂಗಳ ೨೯ರಂದು ಅಭಿನಂದನಾ ಸಮಾರಂಭಕ್ಕೆ ಮುಂದಾಗಿದ್ದೇವೆ ಎಂದರು.

ಪತ್ರಕರ್ತ ಮಹಾರುದ್ರ ಡಾಕುಳಗಿ ಮಾತನಾಡಿ, ಶಿವಾನಿ ಸ್ವಾಮಿ ತನ್ನ ಬಾಲ್ಯದಿಂದಲೂ ಎತ್ತರೆತ್ತರಕ್ಕೆ ಬೆಳೆಯಲು ಅವರ ತಂದೆ, ತಾಯಿಗಳ ಅಗಾಧ ಪರಿಶ್ರಮ, ಒಳ್ಳೆಯ ಸಂಸ್ಕಾರ, ಸಂಗೀತ ಅಭ್ಯಾಸ ನೀಡಿರುವುದೇ ಮುಖ್ಯ ಕಾರಣ. ಇತ್ತಿಚೀನ ಅಭುತಪೂರ್ವ ಬೆಳವಣಿಗೆಯಿಂದ ಬೇಡಜಂಗಮ ಸಮಾಜ ಹರ್ಷಗರ್ಭಿತವಾಗಿದೆ ಎಂದರು.
ಸಮಾಜದ ಮುಖಂಡರಾದ ವಿಶ್ವನಾಥ ಸ್ವಾಮಿ, ಕಾರ್ತಿಕ ಮಠಪತಿ, ಶಿವಾನಿಯ ಪಾಲಕರಾದ ಶಿವದಾಸ ಸ್ವಾಮಿ, ಕವಿತಾ ಸ್ವಾಮಿ ಸೇರಿದಂತೆ ಅವರ ಇತರೆ ಕುಟುಂಬಸ್ಥರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇಂದು ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆ:
ಇಂದು(25-06-25) ಬುಧವಾರ ಸಾಯಂಕಾಲ ೬ ಗಂಟೆಗೆ ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಕು.ಶಿವಾನಿ ಸ್ವಾಮಿಯ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆ ಜರುಗಲಿದೆ.
ಲಾಡಗೇರಿ ಹಿರೇಮಠ ಸಂಸ್ಥಾನದ ಪೂಜ್ಯ ಷ.ಬ್ರ ಗಂಗಾಧರ ಶಿವಾಚಾರ್ಯರ ನೇತೃತ್ವದಲ್ಲಿ ಈ ಮಹತ್ವದ ಸಭೆ ಜರುಗಲಿದ್ದು, ಸಮಸ್ತ ಬೇಡ ಜಂಗಮ ಬಾಂಧವರು, ಲಾಡಗೇರಿ ಹಿರೇಮಠ ಸಂಸ್ಥಾನದ ಭಕ್ತವೃಂದದವರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ, ಸೂಚನೆ ನೀಡಿ ಸಹಕರಿಸಬೇಕೆಂದು ಶಿವಕುಮಾರ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.