Sunday, July 13, 2025
HomePopularಕನ್ನಡ ಶಾಲೆ ಉಳಿವಿಗೆ ಸರ್ಕಾರದ ಮೇಲೆ ಒತ್ತಡ

ಕನ್ನಡ ಶಾಲೆ ಉಳಿವಿಗೆ ಸರ್ಕಾರದ ಮೇಲೆ ಒತ್ತಡ

ಗಡಿನಾಡು ಕನ್ನಡ ಜಾಗೃತಿ ಸಮಾವೇಶ: ಕೆ.ಆರ್. ಕುಮಾರ್ ಹೇಳಿಕೆ
ಕನ್ನಡ ಶಾಲೆ ಉಳಿವಿಗೆ ಸರ್ಕಾರದ ಮೇಲೆ ಒತ್ತಡ
ಬೀದರ್: ರಾಜ್ಯದಲ್ಲಿ ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಕನ್ನಡ ಸೇನೆ ಕರ್ನಾಟಕ ಸಂಘಟನೆಯ ರಾಜ್ಯ ಅಧ್ಯಕ್ಷ ಕೆ.ಆರ್. ಕುಮಾರ್ ಹೇಳಿದರು.
ಕನ್ನಡ ಸೇನೆ ಕರ್ನಾಟಕದ ಜಿಲ್ಲಾ ಘಟಕದ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಈಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಗಡಿನಾಡು ಕನ್ನಡ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಭಾಗದ ಕನ್ನಡ ಶಾಲೆಗಳ ಸಮಸ್ಯೆಗಳ ಪರಿಹಾರಕ್ಕೆ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಸಂಘಟನೆ ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.
ಸಂಘಟನೆ ರಾಜ್ಯ ಉಪಾಧ್ಯಕ್ಷ ಡಾ. ರವಿ ಸ್ವಾಮಿ ನಿರ್ಣಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ, ಸೊಂತದ ಶರಣ ಶಂಕರಲಿಂಗ ಮಹಾರಾಜ, ಮಳಚಾಪುರದ ಶಂಕರಾನಂದ ಸ್ವಾಮಿಜಿ ಅವರಿಗೆ ಕಾಯಕ ಯೋಗಿ, ಸುರೇಶ ಚನಶೆಟ್ಟಿ, ವಿರೂಪಾಕ್ಷ ಗಾದಗಿ, ಡಾ. ಮಾರುತಿ ಅಲ್ಲಿಪುರ ಅವರಿಗೆ ವೀರ ಕನ್ನಡಿಗ, ರೇಖಾ ಅಪ್ಪಾರಾವ್ ಸೌದಿ, ಶಿವಾನಿ ಸ್ವಾಮಿ ಅವರಿಗೆ ಕಲಾ ರತ್ನ, ಅಂಜುಮ ತಬಸುಮ್, ಮಹಮ್ಮದ್ ಜಾಫರ್ ಸಾದಿಕ್, ಗುರುನಾಥ ಗಡ್ಡೆ, ನಿರಹಂಕಾರ ಬಂಡಿ, ದಿಲೀಪ್ ಬಗದಲ್‍ಕರ್, ಮಹಮ್ಮದ್ ಮುಜಾಫರ್, ರಾಜಕುಮಾರ ಬೆಳ್ಳೂರೆ, ಮಲ್ಲಿಕಾರ್ಜುನ ಮಾಲಿಪಾಟೀಲ, ಶಿವರಾಜ ಬಿರಾದಾರ, ರೇವಣಸಿದ್ದಪ್ಪ ಜಲಾದೆ, ಬೇಬಿ ಶಿವಾನಂದ ಹಾಗೂ ಬಸವರಾಜ ಮಯೂರ ಅವರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ವಿಜಯಕುಮಾರ ಆನಂದೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಜ್ಞಾನದೀಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಜೀವಕುಮಾರ ಕಿರಣ, ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಅಧ್ಯಕ್ಷ ಪ್ರದೀಪ್ ನಾಟಿಕರ್ ಉಪಸ್ಥಿತರಿದ್ದರು.
ನವಲಿಂಗ ಪಾಟೀಲ ನಿರೂಪಿಸಿದರು. ಸಂಘಟನೆ ಜಿಲ್ಲಾ ಅಧ್ಯಕ್ಷ ಸುಭಾಷ್ ಕೆನಾಡೆ ಸ್ವಾಗತಿಸಿದರು. ಬೀದರ್ ತಾಲ್ಲೂಕು ಅಧ್ಯಕ್ಷ ರಾಜಶೇಖರ ಮಂಗಲಪೇಟ್ ವಂದಿಸಿದರು.
——————–
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3