ಮೇ 11 ರಂದು ವಿದ್ಯುತ್ ವ್ಯತ್ಯಯ
ಬೀದರ್ : ಜೇಸ್ಕಾಂ ಬೀದರ ವಿಭಾಗದಲ್ಲಿ ಬರುವ 11ಕೆವಿ ದರ್ಗಾಪೂರ ಫೀಡರ ಮೇಲೆ ಬರುವ ದುಲಹನದವಾಜ, ಮನಿಯಾರ ತಾಲೀಮ್, ಡಿಸೆಂಟ್ ಫಂಕ್ಷನ ಹಾಲ ಸುತ್ತಮುತ್ತಲಿನ ಪ್ರದೇಶ, ಗೊಲಖಾನ್ ಶಾಹಿನ್ ಶಾಲೆ, ಮಹ್ಮದ ಗವಾನ ಚೌಕ, ಮಹ್ಮದ ಗವಾನ ಮರ‍್ಸ್ ಉಸ್ಮಾನಗಂಜ, ಭೀಮನಗರ, ದರ್ಗಾಪೂರ, ರೌಳೆ ಗಲ್ಲಿ, ಶಂಶಾಹ ಕಾಲೋನಿ ಬಾಬಾ ಫಂಕ್ಷನ ಹಾಲ್, ಎ.ಸಿ. ಮತ್ತು ಡಿ.ಸಿ. ಮನೆಗಳು ಮತ್ತು ಬೀದರ ಕೋಟೆ ಒಳಗಡೆ ಇರುವ ಪ್ರದೇಶಗಳಲ್ಲಿ 11ಕೆವಿ ನಿಸರ್ಗ ಫೀಡರ್ ಮೇಲೆ ಬರುವ ಸಾಯಿ ನಗರ, ನಿಸರ್ಗ ಲೇಔಟ್, ಕಡಿಲ್ ಮಹಾಲ್, ಕೆ.ಇ.ಬಿ.ಕಾಲೋನಿ, ಹಕ್ಕ್ ಕಾಲೋನಿ, ಹಳೆ ಮೈಲೂರು, ಸಿದ್ದರಾಮಯ್ಯಾ ಬಡಾವಣೆ, ಶೇರಿಕಾರ ಲೇಔಟ್ ಸುತ್ತ-ಮುತ್ತಲಿನ ಪ್ರದೇಶ 11ಕೆವಿ ಫೈಜಪೂರ್, ಫೀಡರ ಮೇಲೆ ಬರುವ ನಂದಿ ಪೆಟ್ರೋಲ್ ಬಂಕ್, ಖಾಜಿ ಕಲೋನಿ, ಜೆರುಸಲಂ ಕಾಲೋನಿ, ಹಳದಗೇರಿ, ಎ.ಪಿ.ಬಗಂಲೆ, ಲಾಡಗೇರಿ, ಹೂಗೇರಿ, ಎಫ್.ಕೆ.ಪೆಟ್ರೋಲ್ ಬಂಕ, ಹೈದ್ರಾಬಾದ ರೋಡ್, ಅಬ್ದುಲ್ ದರ್ಗಾ ಸುತ್ತಮುತ್ತಲಿನ ಪ್ರದೇಶ ಈ ಮೇಲಿನ ಫೀಡರಗಳ ಮೇಲೆ ಕಾಮಗಾರಿ ಹಾಗೂ ತುರ್ತು ನಿರ್ವಹಣೆ ಕೆಲಸವಿರುವ ಕಾರಣ ದಿನಾಂಕ: 11-05-2025 ರಂದು ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 2 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಬೀದರ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ