ಯಾದಗಿರಿ: ಕೋಲಿ ಸಮಾಜ ಕಟ್ಟಿ ಬೆಳೆಸಿದ ಕೀರ್ತಿ ವಿಠ್ಠಲ್ ಹೇರೂರು ಅವರಿಗೆ ಸಲ್ಲುತ್ತದೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ ಮುದ್ನಾಳ್ ಹೇಳಿದರು
ನಗರದ ಜಿಲ್ಲಾ ಟೋಕರಿ ಕೋಲಿ ಸಮಾಜದ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿ ಹಾಗೂ ವಿಠ್ಠಲ್ ಹೇರೂರು ಅವರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ, ಕೇಕ್ ಬದಲಾಗಿ ರೈತ ಬೆಳೆದ ಕಲ್ಲಂಗಡಿ ಹಣ್ಣು ಕಟ್ ಮಾಡಿ ಅವರ 72ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯ ಬಂದ ಮೇಲೆ ರಾಜ್ಯದಲ್ಲಿ ಕೋಲಿ ಸಮಾಜವನ್ನು ಜಾಗೃತಿ ಗೊಳಿಸದೆ ದುರ್ಬಳಕೆ ಮಾಡಿಕೊಂಡ ರಾಜಕಾರಣಿಗಳು ಒಂದು ಕಡೆಯಾದರೆ, ಮೊಟ್ಟ ಮೊದಲಿಗೆ ಜಾಗೃತಿ ಮೂಡಿಸಿ ಸಮಾಜವನ್ನು ಕಟ್ಟಿದ ಶ್ರೇಯಸ್ಸು ಮಾಜಿ ಸಚೇತಕ ದಿ.ವಿಠ್ಠಲ್ ಹೇರೂರು ಅವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬರು ಮುಂಬರುವ ಚುನಾವಣೆಯಲ್ಲಿ ಸಮಾಜದ ಪರ ಕೆಲಸ ಮಾಡುವ ವ್ಯಕ್ತಿಗೆ ಮತ ಚಲಾಯಿಸಬೇಕು. ಇಲ್ಲಿಯವರೆಗೆ ನಮ್ಮ ಸಮಾಜದ ಪರವಾಗಿ ಯಾರು ಧ್ವನಿ ಎತ್ತದೆ ಸಾಮಾಜಿಕ ನ್ಯಾಯ ಕೊಡಿಸದೆ ಸಮಾಜದ ಓಟು ಪಡೆದುಕೊಂಡು ಅಧಿಕಾರ ಅನುಭವಿಸಿದರು. ಆದರೆ, ಸಾಮಾಜಿಕ ನ್ಯಾಯ ಕೊಡಿಸಲಿಲ್ಲ ಎಂದರು.
ಬಾಕ್ಸ್
ಮೊಟ್ಟಮೊದಲ ಬಾರಿಗೆ ವಿಠ್ಠಲ್ ಹೇರೂರು ಅವರು ಚೌಡಯ್ಯನವರ ಪೀಠ ಸ್ಥಾಪಿಸಿ ಸಮಾಜವನ್ನು ಸಂಘಟಿಸಿದ್ದಾರೆ. ಸಮಾಜ ಒಗ್ಗೂಡಿಸುವ ಕಾರ್ಯದಿಂದಾಗಿ ಸಮಾಜ ಸಂಘಟಿತವಾಗಿ ಬೆಳೆದು ನಿಂತು ಮುಖ್ಯ ವಾಹಿನಿಗೆ ಬರುತ್ತದೆ ಎಂದು ಹೇಳಿದರು.
ವಿಠ್ಠಲ್ ಹೇರೂರ ಅವರ ಬಳಿಕ ಸಮಾಜದ ಏಳಿಗೆಗಾಗಿ ಹಗಲಿರುಳೆನ್ನದೆ ಓಡಾಡಿ ಸಮಾಜವನ್ನ ಜಾಗೃತಗೊಳಿಸುತ್ತಿರುವ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮುದ್ನಾಳ್ ಅವರ ಕಾರ್ಯ ಶ್ಲಾಘನೀಯವಾದದ್ದು. ಸಮಾಜದ ಪರವಾಗಿ ಹೋರಾಡುವ ಉಮೇಶ್ ಮುದ್ನಾಳ್ ಅವರ ಅಭಿಮಾನದ ಗೀತೆಯನ್ನ ಬಿಡುಗಡೆ ಮಾಡಿದ್ದು ನನಗೆ ವೈಯಕ್ತಿಕವಾಗಿ ಬಹಳ ಖುಷಿ ತಂದಿದೆ.
ರಫೀಕ್ ಪಟೇಲ್ ಎಸ್ ಹೊಸಳ್ಳಿ
ಇದೇ ಸಂದರ್ಭದಲ್ಲಿ ಬಸವರಾಜ್ ಇಟಗಿ ಆಂಜನೇಯ ಬೆಳಗೇರ ಶರಣು ಸಾಬಯ್ಯ ಸಲೀಂ ಅಪ್ಸರ್ ಗಡ್ಡಿಮನಿ ಪ್ರಭು ಕೊಡಲ ನಾಗಪ್ಪ ತಡಿಬಿಡಿ ವಿಶ್ವನಾಥ್ ಭಾಗಣ್ಣ ಯಲ್ಲಪ್ಪ ಭಾಗಣ್ಣ ತೀರಕಪ್ಪ ಭೀಮರಾಯ ಜಗದೀಶ್ ಆಂಜನೇಯ ಭೀಮರಾಯ ಪೂಜಾರಿ ರವಿ ಬಬಲಾದಿ ಮಹದೇವಪ್ಪ ಬನದೇಶ್ವರ ತಿಪ್ಪಣ್ಣ ಶೇಕ್ರಪ್ಪ ಪಿಡ್ಡಪ್ಪ ಭಾಗಣ್ಣ ಮಹೇಶ್ ರಾಜಣ್ಣ ಶರಣು ಅಂಗಡಿ ಈಶಪ್ಪ ಕಾರಣಿಗಿ ವಿಜಯ್ ಕುಮಾರ್ ಶರಣಪ್ಪ ಜೋತ ವೆಂಕಟರೆಡ್ಡಿ ಜಮಾಲ್ ಬೀಳರ್ ಮೌನೇಶ್ ಮಲ್ಲೇಶ್ ಅಶೋಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.