ಬೀದರ್: ನಗರದಲ್ಲಿ ಈಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟದ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಇಲ್ಲಿಯ ಜಿಲ್ಲಾ ಕಾರಾಗೃಹದ ಮುಖ್ಯ ವೀಕ್ಷಕಿ ಮಮಿತಾಬಾಯಿ ಸಾಮ್ರಾಟ್ ಉತ್ತಮ ಸಾಧನೆ ತೋರಿದ್ದಾರೆ.
ವೈಯಕ್ತಿಕ ವಿಭಾಗದ 200 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ 4*400 ಮೀಟರ್ ರಿಲೇ (ಪ್ರಥಮ), ವಾಲಿಬಾಲ್ (ಪ್ರಥಮ) ಹಾಗೂ ಕಬಡ್ಡಿ (ದ್ವಿತೀಯ) ತಂಡಗಳ ಸದಸ್ಯರೂ ಆಗಿದ್ದಾರೆ.
ಮವಿತಾಬಾಯಿ ಅವರ ಸಾಧನೆಗೆ ಅನೇಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.
———————–