Friday, May 23, 2025
Homeಜಿಲ್ಲೆಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ವಿತರಣೆ ಆರಂಭ

ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ವಿತರಣೆ ಆರಂಭ

ಬೀದರ್ : ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು ಡಿಪ್ಲೋಮಾ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಡಿಪ್ಲೋಮಾ ಪ್ರವೇಶ ಅರ್ಜಿಗಳನ್ನು ಸರ್ಕಾರಿ ಪಾಲಿಟೆಕ್ನಿಕ್, ಮೈಲೂರು ರಸ್ತೆ, ಬೀದರ ಇಲ್ಲಿಂದ ಕಚೇರಿ ಸಮಯದಲ್ಲಿ ಪಡೆಯಬಹುದೆಂದು ಪ್ರಾಚಾರ್ಯರಾದ ವಿಜಯಕುಮಾರ್ ಎಸ್. ಜಾಧವ ಅವರು ತಿಳಿಸಿದ್ದಾರೆ.

ಭರ್ತಿ ಮಾಡಿದ ಅರ್ಜಿಗಳನ್ನು ಎಸ್.ಎಸ್.ಎಲ್.ಸಿ.ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ನಂತರ ಸಂಬಂಧಪಟ್ಟ ದಾಖಲೆಗಳೊಂದಿಗೆ ಸ್ವೀಕರಿಸಲಾಗುತ್ತದೆ. ಆದ್ದರಿಂದ ಪ್ರವೇಶ ಬಯಸುವ ವಿದ್ಯಾರ್ಥಿಗಳು ಸಂಸ್ಥೆಯಿಂದ ಅರ್ಜಿ ಪಡೆದುಕೊಂಡ ನಂತರ ಅವಶ್ಯಕ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಸೂಚಿಸಲಾಗಿದೆ.

ಅವಶ್ಯಕ ದಾಖಲೆಗಳು : ಶಾಲೆಯ ಮುಖ್ಯಸ್ಥರು ಧೃಢೀಕರಿಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆ ಉತ್ತೀರ್ಣಗೊಂಡ ಅಂಕಪಟ್ಟಿ, ಮೂಲ ವರ್ಗಾವಣೆ ಪತ್ರ, 1 ರಿಂದ 10ನೇ ತರಗತಿವರೆಗಿನ ವ್ಯಾಸಂಗ ಪ್ರಮಾಣಪತ್ರ, 6 ಪಾಸ್ ಪೋರ್ಟ ಭಾವಚಿತ್ರಗಳು, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕನ್ನಡ/ಗ್ರಾಮೀಣ/ಕಲ್ಯಾಣ-ಕರ್ನಾಟಕ ಪ್ರಮಾಣ ಪತ್ರಗಳು (ಅನ್ವಯಿಸಿದಲ್ಲಿ ಮಾತ್ರ), ವಿದ್ಯಾರ್ಥಿಯ ಆಧಾರ ಕಾರ್ಡ ಪ್ರತಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳತಕ್ಕದ್ದು. ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡು ಡಿಪ್ಲೋಮಾ ಪ್ರವೇಶಕ್ಕಾಗಿ ಪ್ರಕಟಣೆ ಹೊರಡಿಸಿದ ನಂತರ ಅರ್ಜಿಗಳನ್ನು ಸ್ವೀಕರಿಸಲಾಗುವುದೆಂದು ತಿಳಿಸಿದ್ದಾರೆ.

ಸರ್ಕಾರಿ ಪಾಲಿಟೆಕ್ನಿಕ್ ಬೀದರ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ (60 ಸೀಟುಗಳು), ಆಟೊಮೊಬೈಲ್ ಇಂಜಿನಿಯರಿಂಗ್ (60), ಸಿವಿಲ್ ಇಂಜಿನಿಯರಿಂಗ್ (60), ಎಲೆಕ್ಟಿಕಲ್ ಅಂಡ್ ಎಲೆಕ್ಟಾನಿಕ್ಸ್ ಇಂಜಿನಿಯರಿಂಗ್ (60), ಎಲೆಕ್ಟಾçನಿಕ್ಸ್ ಅಂಡ್ ಕಮುನಿಕೇಶನ್ ಇಂಜಿನಿಯರಿAಗ್ (60), ಕಂಪ್ಯೂಟರ್ ಸೈನ್ಸ್ (30) ಮತ್ತು ಕಮರ್ಷಿಯಲ್ ಪ್ರ‍್ಯಾಕ್ಟೀಸ್ (ಕನ್ನಡ-30, ಇಂಗ್ಲೀಷ್-30) ಸೀಟುಗಳು ಪ್ರವೇಶಕ್ಕಾಗಿ ಲಭ್ಯವಿವೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3