Saturday, May 24, 2025
Homeಬೀದರ್ಮಹಿಳೆ ಆರ್ಥಿಕವಾಗಿ ಬೌದ್ಧಿಕವಾಗಿ ಸಾಮಾಜಿಕವಾಗಿ ಬಲಗೊಳ್ಳಬೇಕು

ಮಹಿಳೆ ಆರ್ಥಿಕವಾಗಿ ಬೌದ್ಧಿಕವಾಗಿ ಸಾಮಾಜಿಕವಾಗಿ ಬಲಗೊಳ್ಳಬೇಕು

ಬೀದರ್ : ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿರುವ ಬೀದರ್ ವಿಶ್ವವಿದ್ಯಾಲಯದ ಕುಲಸಚಿವರಾದ (ಆಡಳಿತ) ಶ್ರೀಮತಿ ಸುರೇಖಾ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಹಿಳೆಯರು ಸಾಮಾಜಿಕವಾಗಿ ಆರ್ಥಿಕವಾಗಿ ಬೌದ್ಧಿಕವಾಗಿ ಬಲಗೊಳ್ಳಬೇಕು ಅಂದಾಗ ಮಾತ್ರ ಮಹಿಳಾ ಸಬಲೀಕರಣಕ್ಕೆ ಪರಿಪೂರ್ಣವಾದ ಅರ್ಥ ಬರುತ್ತದೆ .ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪಡೆದಿರುವ ಶ್ರೀಮತಿ ಲಕ್ಷ್ಮಿ ಮೇತ್ರೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಹೆಣ್ಣು ಮನಸು ಮಾಡಿದರೆ ಎಂತಹ ಬಡತನದಲ್ಲಿ ಕಷ್ಟ ಕಾರ್ಪಣ್ಯದಲ್ಲಿಯೂ ಸಾಧನೆ ಮಾಡಬಲ್ಲಳು. ಅದಕ್ಕೆ ನಿರಂತರ ಪರಿಶ್ರಮ ದೃಢ ನಿರ್ಧಾರ ಇರಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯ ಶ್ರೀ ಪ್ರಭಾ ಅವರು ಮಾತನಾಡುತ್ತಾ ಹೆಣ್ಣು ಜಗದ ಕಣ್ಣು ಹಾಗೂ ಗಂಡಿನಷ್ಟೇ ಸಮಾನಳು ಗಂಡಿನಂತೆ ಸಂರಕ್ಷಣೆಯನ್ನು ಕೂಡ ಮಾಡಿಕೊಳ್ಳುವಳು ಎಂದು ಮಾರ್ಮಿಕವಾದ ಮಾತುಗಳನ್ನಾಡಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಶೀಲಾ ಸುರವಸೆ ಅವರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಸಂಯೋಜನೆಯನ್ನು ಮಾಡಿದರು.

ಡಾ ಸುಮನ ಶಿಂದೆ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು ಡಾ. ಮಹಾದೇವಿ ಹೆಬ್ಬಾಳೆ ಸ್ವಾಗತ ಭಾಷಣ ಹಾಗೂ ಅತಿಥಿ ಪರಿಚಯವನ್ನು ಮಾಡಿಕೊಟ್ಟರು. ಎಂ.ಎ ಕನ್ನಡ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ಕು.ಪ್ರಿಯಾಂಕಾ ಪ್ರಾರ್ಥನಾ ಗೀತೆಯನ್ನು ಹಾಡಿದರು. ತೃತೀಯ ಸೆಮಿಸ್ಟರ್ ವಿದ್ಯಾರ್ಥಿನಿ ಕು . ವಾಣಿಶ್ರೀ ಸ್ವಾಗತ ಗೀತೆ ಹಾಡಿದರು.

ಕಾಲೇಜಿನ ಮಹಿಳಾ ಸಿಬ್ಬಂದಿಗಳಾಗಿರುವ ಶ್ರೀಮತಿ ಲಕ್ಷ್ಮಿ ರಾಥೋಡ ಮತ್ತು ಶ್ರೀಮತಿ ಲಕ್ಷ್ಮಿ ಇವರುಗಳನ್ನು ಸನ್ಮಾನಿಸಲಾಯಿತು.ಕೆ ಸೆಟ್ ಮತ್ತು ನೆಟ್ ಪರೀಕ್ಷೆಗಳಲ್ಲಿ ಪಾಸ್ ಮಾಡಿರುವ ಪ್ರತಿಭಾನ್ವಿತ ಉಪನ್ಯಾಸಕಿ ಆಗಿರುವಂತ ಚೈತನ್ಯ ಹಾಗೂ ಸಾತಕೊತ್ತರ ಇತಿಹಾಸದ ವಿದ್ಯಾರ್ಥಿನಿಯನ್ನು ಗೌರವಿಸಲಾಯಿತು ಮಹಿಳಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ರಂಗೋಲಿ ಚರ್ಚೆ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ,ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಸಿಬ್ಬಂದಿ ಕಾರ್ಯದರ್ಶಿ ಡಾ.ರಾಜಕುಮಾರ ಅಲ್ಲೂರೆ ಸಿಬ್ಬಂದಿ ಶ್ರೀ ಶಂಕರ ಗಣಗೊಂಡ ಡಾ.ಸುಚಿತಾನಂದ ಮಲ್ಕಾಪುರ್ ಡಾ ರಿಜ್ವಾನಾ ಗಡ್ಕರಿ ಡಾ.ಭಾರತಿ ಶಿವಕುಮಾರ ಚಿಲ್ಲರ್ಗಿ ಡಾ.ಬಾಬುರಾವ್ ಚಿಮ್ಕೋಡ್ ಶ್ರೀಮತಿ ರಶ್ಮಿ ಡಾ.ರೂತಾ ಮುಂತಾದ ಪ್ರಾಧ್ಯಾಪಕರು ಉಪಸ್ಥಿತರಿದ್ದರು ಕೊನೆಯಲ್ಲಿ ಡಾ. ಮಹೇಶ್ವರಿ ಉದಗಿರೆ ವಂದಿಸಿದರು.

—————–

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3