ಬೀದರ್: ಯುಗಾದಿ ಪ್ರಯುಕ್ತ ನಗರದ ದೇವಿ ಕಾಲೊನಿಯ ಕಾಳಿಕಾದೇವಿ ಮಂದಿರದಲ್ಲಿ ಏಪ್ರಿಲ್ 5 ರಂದು ಜಾತ್ರಾ ಮಹೋತ್ಸವ ನಡೆಯಲಿದೆ.
ಜಾತ್ರೆ ಮುನ್ನಾದಿನ ಬೆಳಿಗ್ಗೆ 9.30ಕ್ಕೆ ಕಾಳಿಕಾದೇವಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಹೋಮ, ಹವನ ಕಾರ್ಯಕ್ರಮಗಳು ಜರುಗಲಿವೆ.
ಶನಿವಾರ ಮಧ್ಯಾಹ್ನ 2ಕ್ಕೆ ಯಾದಗಿರಿ ಜಿಲ್ಲೆಯ ಆನೆಗುಂದಿ ಸರಸ್ವತಿ ಪೀಠ ವಿಶ್ವಕರ್ಮ ಏಕದಂಡಗಿ ಮಠದ ಶ್ರೀನಿವಾಸ್ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಧರ್ಮ ಸಭೆ ನಡೆಯಲಿದೆ.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಸದಸ್ಯ ಚಂದ್ರಶೇಖರ ಪಾಟೀಲ ಗಾದಗಿ, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಸೂರ್ಯಕಾಂತ ನಾಗಮಾರಪಳ್ಳಿ, ಸಂತೋಷಿ ಅರುಣಕುಮಾರ, ವಿಜಯಕುಮಾರ, ರಾಜಾರಾಮ ಚಿಟ್ಟಾ, ಶಶಿಧರ ಹೊಸಳ್ಳಿ, ವಿರೂಪಾಕ್ಷ ಗಾದಗಿ, ಮಹೇಶ ಪಂಚಾಳ, ಚಂದ್ರಕಲಾ ಕೆ.ವಿಶ್ವಕರ್ಮ, ಬಸವರಾಜ ಕೋರಿ, ವೆಂಕಟರೆಡ್ಡಿ, ಶಿವಾನಂದ ಚೌಳಿಕರ್, ಡಾ. ಸೋಮಶೇಖರ ಭಾಲ್ಕೆ, ಜ್ಞಾನೋಬಾ ಶೇಂದ್ರೆ, ದಯಾನಂದ ಸ್ವಾಮಿ, ಈರಣ್ಣ ವಿಶ್ವಕರ್ಮ, ಅಶೋಕ ವಿಶ್ವಕರ್ಮ, ರಾಜಕುಮಾರ ವಿಶ್ವಕರ್ಮ, ಧನರಾಜ ಪಂಚಾಳ, ಶಾಮರಾವ್ ವಿಶ್ವಕರ್ಮ, ಮಾರುತಿ ವಿಶ್ವಕರ್ಮ, ಬಸವರಾಜ ವಿಶ್ವಕರ್ಮ, ಬಾಬುರಾವ್ ವಿಶ್ವಕರ್ಮ, ಬಸವರಾಜ ವಿಶ್ವಕರ್ಮ, ಡಾ. ಸೋಮನಾಥ ಶೀಲವಂತ, ದಿನಕರ ವಿಶ್ವಕರ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಎನ್. ಪಂಚಾಳ ವಿಶೇಷ ಉಪನ್ಯಾಸ ನೀಡುವರು. ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಶ್ವಕರ್ಮ ಶಿವಾನಂದ ಎಸ್. ಪ್ರಾಸ್ತಾವಿಕವಾಗಿ ಮಾತನಾಡುವರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು.
ಜಾತ್ರಾ ಮಹೋತ್ಸವ ಹಾಗೂ ಧರ್ಮ ಸಭೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕಾಳಿಕಾದೇವಿ ಮಂದಿರದ ಅಧ್ಯಕ್ಷ ಕಮಲಾಕರ ವಿಶ್ವಕರ್ಮ ಮನವಿ ಮಾಡಿದ್ದಾರೆ.