Saturday, May 24, 2025
Homeಬೀದರ್ದೇವರ ದಾಸಿಮಯ್ಯನವರ ವಚನಗಳನ್ನು ಇಂದಿಗೂ ಪ್ರಸ್ತುತವಾಗಿವೆ-ಸಚಿವ ಈಶ್ವರ ಬಿ.ಖಂಡ್ರೆ

ದೇವರ ದಾಸಿಮಯ್ಯನವರ ವಚನಗಳನ್ನು ಇಂದಿಗೂ ಪ್ರಸ್ತುತವಾಗಿವೆ-ಸಚಿವ ಈಶ್ವರ ಬಿ.ಖಂಡ್ರೆ

ಬೀದರ್ : ದೇವರ ದಾಸಿಮಯ್ಯನವರ ವಚನಗಳು 12ನೇ ಶತಮಾನದಲ್ಲಿ ಹೇಳಿದರು ಕೂಡ ಇಂದಿಗೂ ಪ್ರಸ್ತುತವಾಗಿವೆ ಎಂದು ಅರಣ್ಯ, ಜೀವಿಶಾಸ್ತ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಬೀದರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆದ ಶ್ರೀ ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧ್ಯ ವಚನಕಾರ ದೇವರ ದಾಸಿಮಯ್ಯ ನವರು ಸಮಾಜದ ಸುಧಾರಣೆಗೆ ಅವರ ಕೊಡುಗೆ ಅಪಾರವಾಗಿದೆ. ತಮ್ಮ ವಚನಗಳ ಮೂಲಕ ಸಮಾನತೆ, ಮೌಢ್ಯಗಳ ಖಂಡನೆ ಮಾಡಿದ್ದಾರೆ. ಮಹಿಳೆಯರಿಗೆ ಸ್ವಾತಂತ್ರ‍್ಯ, ಸಮಾನತೆ ಒದಗಿಸುವುದು ಮತ್ತು ಸಮಾಜವನ್ನು ಒಂದುಗೂಡಿಸುವ ಕೆಲಸಗಳು ದೇವರ ದಾಸಿಮಯ್ಯ ನವರ ವಚನಗಳಲ್ಲಿ ಕಾಣಬಹುದಾಗಿದೆಂದರು.
ನೇಕಾರ ಮತ್ತು ಜಾಡರ ಸಮುದಾಯದವರು ಕಾರ್ಯ ನಿಷ್ಠಾವಂತರಾಗಿದ್ದಾರೆ, ನಾಗರಿಕತೆ ಅತ್ಯುತ್ತಮ ಬೆಳವಣಿಗೆ ಇವರ ಕೊಡುಗೆ ಅಪಾರವಾಗಿದೆ. ನಮ್ಮ ಸರ್ಕಾರ ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಎಂಬಂತೆ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಎಲ್ಲರ ಅಭಿವೃದ್ಧಿಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ ಹಾಗೂ ನೇಕಾರ ಸಮುದಾಯದ ಎಲ್ಲಾ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತೆವೆ ಮತ್ತು ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ನಿವೇಶನ ನೀಡುವುದಾಗಿ ತಿಳಿಸಿದರು.


ಲಿಂಗಾಯತ ಮಹಾಮಠದ ಸ್ವಾಮಿಜಿಗಳಾದ ಪೂಜ್ಯ ಶ್ರೀ ಪ್ರಭುದೇವ ಮಹಾಸ್ವಾಮಿಜಿ ಅವರು ತಮ್ಮ ಅತಿಥಿ ಉಪನ್ಯಾಸದಲ್ಲಿ ಮಾತನಾಡಿ, ದೇವರ ದಾಸಿಮಯ್ಯ ನವರು 1130 ರಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ಹೆಸರು 6 ವಚನಕಾರರ 12 ವಚನಗಳಲ್ಲಿ ಕಾಣಬಹುದು. ಇವರ 176 ವಚನಗಳು ದೊರತ್ತಿವೆ. ಇವರು ರಾಮನಾಥ ಎಂಬ ಅಂಕಿತನಾಮದಿದ ವಚನಗಳನ್ನು ರಚಿಸಿದ್ದಾರೆ. ಸಮಾಜದ ಸುಧಾರಣೆಗೆ ಮತ್ತು ಸಮಾಜದ ಒಳಿತಿಗಾಗಿ ಇವರ ವಚನಗಳು ಮುಖ್ಯವಾಗಿವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಶ್ರೀ ದೇವರ ದಾಸಿಮಯ್ಯ ನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ರಥ ಮೆರವಣಿಗೆಗೆ ಚಾಲನೆ ನೀಡಿದರು.


ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶಿಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ಸಿದ್ರಾಮ ಸಿಂಧೆ ಮತ್ತು ಸಮಾಜದ ಮುಖಂಡರಾದ ಸೋಮಶೇಖರ ಅಮಲಾಪೂರೆ, ರಾಮಕೃಷ್ಣ ಸಾಳೆ, ನಾಗಪ್ಪ ಜಮಗಿ, ಮಹಾದೇವ ಚೌಡೆಕರ, ಶರಣಪ್ಪ ಹಾವಗೊಂಡ, ಪ್ರಶಾಂತ್ ಸಿಂದ್ರೆ, ಧನರಾಜ ಹಂಗರಗಿ ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು.


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3