ಭಾಲ್ಕಿ: ನಾವು ಮಾಡುವ ಸೇವೆಯಲ್ಲಿ ಸಂತೃಪ್ತಿ ಕಾಣಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸತತ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ವರ್ಗಾವಣೆಯಾಗಿ ಹೋಗುತ್ತಿರುವ ಸಿಬ್ಬಂದಿ ಶಾಂತಕುಮಾರ ರವರ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಶಾಂತಕುಮಾರ ರವರು ಹೆಸರಿಗೆ ತಕ್ಕಂತೆ ಶಾಂತವಾದ ವ್ಯಕ್ತಿಯಾಗಿದ್ದಾರೆ. ಇವರು ಸತತವಾಗಿ ಸುಮಾರು 25 ವರ್ಷಗಳ ಕಾಲ ಭಾಲ್ಕಿಯ ಕ್ಷೇತ್ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದರಿಂದ ಇವರಿಗೆ ಅಪಾರ ಗೆಳೆಯರ ಬಳಗ ಹುಟ್ಟಿಕೊಂಡಿದೆ. ಇಂದು ಏರ್ಪಡಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಸಾವಿರಾರು ಶಿಕ್ಷಕರು ಭಾಗವಹಿಸಿರುವುದೇ ಸಾಕ್ಷಿಯಾಗಿದೆ. ಹೀಗಾಗಿ ನಾವು ಮಾಡುವ ಕೆಲಸದಲ್ಲಿ ಶಾಂತಕುಮಾರ ರವರಂತೆ ಸಂತೃಪ್ತಿ ಜೀವನ ನಡೆಸಬೇಕು ಎಂದು ಹೇಳಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅದ್ಯಕ್ಷ ದತ್ತಾತ್ರಿ ಕಾಟಕರ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಜೆಪ್ಪ ಪಾಟೀಲ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜ ತೇಗಂಪೂರೆ ಶಾಂತಕುಮಾರ ರವರ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕ ಶಿವಕುಮಾರ ಫುಲಾರಿ, ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣಕುಮಾರ ಭಾಟಸಾಂಗವಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದರಾವ ಬಿರಾದಾರ, ಇಸಿಓ ಸಹದೇವ.ಜಿ, ವೈಜಿನಾಥ ಮಲ್ಲಿಗೆ, ಸಂದೀಪ ಉಮಾಜಿ, ಬಾಲಾಜಿ ಬಿರಾದಾರ, ಸಂತೋಷಕುಮಾರ ವಾಡೆ, ಚನ್ನಪ್ಪ, ಮಲ್ಲಿಕಾರ್ಜುನ ಪಾಟೀಲ, ದಿನೇಶ ಥಮಕೆ, ಶಿವಕುಮಾರ ಘಂಟೆ ಉಪಸ್ಥಿತರಿದ್ದರು. ಕಿರಣಕುಮಾರ ಭಾಟಸಾಂಗವಿ ಸ್ವಾಗತಿಸಿದರು. ಸಂತೋಷಕುಮಾರ ವಾಡೆ ನಿರೂಪಿಸಿದರು. ಸಹದೇವ ಗೌಡಗಾವೆ ವಂದಿಸಿದರು.
—————