ಭಾಲ್ಕಿ: ಆದ್ಯ ವಚನಕಾರ ದೇವರ ದಾಸಿಮಯ್ಯನವರದ್ದು ನಿರ್ಲಿಪ್ತ ಜೀವನವಾಗಿತ್ತು ಎಂದು ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ತಹಸೀಲ ಕಚೇರಿಯಲ್ಲಿ ತಾಲೂಕು ಆಡಳಿತದವತಿಯಿಂದ ಆಯೋಜಿಸಿದ್ದ ದೇವರ ದಾಸಿಮಯ್ಯನವರ ಜಯಂತಿ ಮಹೋತ್ಸವದ ಸಾನಧ್ಯ ವಹಿಸಿ ಅವರು ಮಾತನಾಡಿದರು. ದಾಸಿಮಯ್ಯನವನರ ವಚನಗಳು ಚಿಕ್ಕ, ಚಿಕ್ಕ ಗುಳಿಗೆಗಳಿದ್ದಂತೆ, ಅವರ ಮಾತುಗಳಿಂದ ನಮ್ಮ ಮನಸ್ಸಿನ ರೋಗ ತಕ್ಷಣವೇ ಮಾಯವಾಗುವುದು. ಕಾಯಕದ ಮಹತ್ವ ಅವರಿಂದ ತಿಳಿಯಬೇಕು. ಅವರು ಅಪಾರ ಜಂಗಮ ಭಕ್ತರಾಗಿದ್ದರು. ಉದ್ದ ಮತ್ತು ಅಡ್ಡ ಎಳೆಗಳು ಪರಿಪೂರ್ಣವಾಗಿದ್ದಾಗಲೆ ಬಟ್ಟೆ ಪೂರ್ಣವಾಗುವುದು. ಹಾಗೆ ಜೀವನದಲ್ಲಿ ಕಷ್ಟ, ಸುಖ ಗಳಿದ್ದರೆ ಜೀವನ ಪರಿಪೂರ್ಣವಾಗುದು. ಶುಸುಮ್ನ ಋತು, ವಸಂತ ಋತು ಎರಡೂ ಇದ್ದಾಗಲೇ ಪೃಕೃತಿ ಸಮತೋಲನದಲ್ಲಿರುವುದು ಎಂದು ಹೇಳಿದರು.

ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ವೀರಣ್ಣ ಕುಂಬಾರ ವಿಶೇಷ ಉಪನ್ಯಾಸ ಮಂಡಿಸಿದರು. ಸಂತೋಷ ಬಿಜಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ ಪಲ್ಲವಿ ಬೆಳಕೀರೆ, ಬಾಬುರಾವ ಖೆಡೆ, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಸಿಂಧನಕೆರೆ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಗುಂಡಪ್ಪ ಸಂಗಮಕರ, ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಪ್ರಮುಖರಾದ ರೇಣವಸಿದ್ದ ಜಾಡರ, ದೀಪಕ ಥಮಕೆ, ಐಜಿಕ್ ಬಂಗಾರೆ ಉಪಸ್ಥಿತರಿದ್ದರು. ಸಂತೋಷ ಸ್ವಾಗತಿಸಿದರು. ದೀಪಕ ನಿರೂಪಿಸಿದರು. ನಾಗಭೂಷಣ ವಂದಿಸಿದರು.
—————