ಮಾಜಿ ಸಚಿವ ರಾಜಶೇಖರ ಪಾಟೀಲ ಅವರಿಗೆ ಜನ್ಮದಿನದ ಪ್ರಯುಕ್ತ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್ ಹುಮನಾಬಾದ್‍ನಲ್ಲಿ ಮಂಗಳವಾರ ಶಾಲು ಹೊದಿಸಿ ಸತ್ಕರಿಸಿದರು. ಬಿ.ಎಸ್.ಎಸ್.ಕೆ. ಮಾಜಿ ಅಧ್ಯಕ್ಷ ಸಂಗಮೇಶ ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಪ್ರಮುಖರಾದ ಅಜಮತ್ ಪಟೇಲ್, ವೀರೇಂದ್ರ ಕುಶನೂರ ಇದ್ದರು.