ಬೀದರ್ಃ ಡಾ. ಶಿವಕುಮಾರ ಮಹಾ ಸ್ವಾಮಿಗಳು ಬೆಳೆದ ಕೈಗಳಿಂದ ಹಸಿದ ಹೊಟ್ಟೆಗೆ ಉಣಬಡಿಸುವ ಸೇತುವೆಯಾಗಿ ಸದಾ ದಾಸೋಹ ಶಕ್ತಿಯಿಂದ ಪ್ರಜ್ಚಲಿಸಿದರು. ಪೂಜ್ಯರ ಜೀವನ ಸಂದೇಶಗಳನ್ನು ನಾವು ಅನುಸಿರಿಸಿ ಸದ್ಗತಿಯೇಡೆಗೆ ಸತ್ಯ ಜೀವನಕ್ಕೆ ಅಡಿ ಇಡಬೇಕಾಗಿದೆ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸುನೀಲ ಭಾವಿಕಟ್ಟಿ ಹೇಳಿದರು.
ಅವರು ಮಂಗಳವಾರ ನಗರದ ಶಿವಪೂರ್ ಕಾಲೋನಿಯಲ್ಲಿ ಚಂದ್ರಶೇಖರ್ ಆಜಾದ್ ಯುವ ಸಂಘದಿಂದ ಏರ್ಪಡಿಸಿದ ತುಮಕೂರಿನ ಡಾ. ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಪೂಜ್ಯರ ಜೀವನ ತತ್ವಗಳನ್ನು ತಮ್ಮ ನೀಜ ಜೀವನದಲ್ಲಿ ಅಳಡಿಸಿಕೊಂಡರೇ ಜೀವನ ಸಾರ್ಥಕವಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವಿಜಯಕುಮಾರ ಭಂಡೆ, ಬಸವರಾಜ ಬಿರಾದಾರ್ ಮಾತನಾಡಿದರು. ರಾಜಕುಮಾರ ಶಿವಯೋಗಿ, ಶಶಿಕಾಂತ ಭಾವಿಕಟ್ಟಿ, ಚಂದ್ರಕಾಂತ ಮೂಲಗೆ, ಮಾಣಿಕ ಮೂಲಗೆ, ಸಾಯಿ ಮೂಲಗೆ, ಹರ್ಷವರ್ಧನ್, ಲಿಂಗಾನಂದ, ಸುರೇಶ ಏಕಲಾರಕರ್, ಸಾಯಿಕುಮಾರ ಬಿರಾದರ್, ಗುರುಪುತ್ರ ಸೋಲಪುರ್, ಸಂಗಶೇಟ್ಟಿ, ಶ್ರೀನಿವಾಸ್, ರೋಹನ್, ವಿವೇಕಾನಂದ, ಈರಣ್ಣಾ, ಸೇರಿದಂತೆ ಇತರರು ಇದ್ದರು.
—————-