ಬೀದರ್: ಮಹಿಳೆಯರು ಸಾಂವಿಧಾನಿಕವಾಗಿ ದೊರೆತ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಸಲಹೆ ಮಾಡಿದರು.
ಇಲ್ಲಿಯ ಪ್ರತಾಪನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸುನೀತಾ ವಿಲಿಯಮ್ಸ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಥವರ ಸಾಧನೆ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.
ಪ್ರಸ್ತುತ ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಉಳಿದಿಲ್ಲ. ಮಹಿಳೆಯರನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಮಾತನಾಡಿ, ಪ್ರತಿ ಯಶಸ್ವಿ ಪುರುಷನ ಸಾಧನೆಯಲ್ಲಿ ಮಹಿಳೆಯ ಪ್ರೇರಣೆಯ ಪಾತ್ರವಿದೆ ಎಂದು ಹೇಳಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಮಾತನಾಡಿ, ಪ್ರತಿ ಯಶಸ್ವಿ ಪುರುಷನ ಸಾಧನೆಯಲ್ಲಿ ಮಹಿಳೆಯ ಪ್ರೇರಣೆಯ ಪಾತ್ರವಿದೆ ಎಂದು ಹೇಳಿದರು.
ಪಾಲಕರು ಮಕ್ಕಳಲ್ಲಿ ಹೆಣ್ಣು-ಗಂಡು ಎಂಬ ಭೇದ ಭಾವ ಮಾಡಬಾರದು. ಇಬ್ಬರನ್ನೂ ಸರಿ ಸಮನಾಗಿ ಕಾಣಬೇಕು ಎಂದು ತಿಳಿಸಿದರು.
ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ, ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಾ. ವೈಶಾಲಿ ದೇವಪ್ಪ ಮಾತನಾಡಿದರು. ಶೈಲಜಾ ಹುಡಗೆ ವಿಶೇಷ ಉಪನ್ಯಾಸ ನೀಡಿದರು.
ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ, ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಾ. ವೈಶಾಲಿ ದೇವಪ್ಪ ಮಾತನಾಡಿದರು. ಶೈಲಜಾ ಹುಡಗೆ ವಿಶೇಷ ಉಪನ್ಯಾಸ ನೀಡಿದರು.

ಸಂಘದ 2025ನೇ ಸಾಲಿನ ದಿನದರ್ಶಿಕೆ ಹಾಗೂ ಪಾಕೇಟ್ ಡೈರಿ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಆರ್.ಎಸ್. ಬಿರಾದಾರ ಹೆಲ್ತ್‍ಕೇರ್ ಸರ್ವಿಸೆಸ್‍ನ ಸವಿತಾ ಆರ್. ಬಿರಾದಾರ ಅವರಿಗೆ ಕಾಯಕ ನಿಷ್ಠೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಿಳಾ ಸಾಧಕಿಯರನ್ನು ಸತ್ಕರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಹಿಳಾ ಸರ್ಕಾರಿ ನೌಕರರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಸೂರ್ಯಕಾಂತ ಬಿರಾದಾರ, ಕಾರ್ಯಾಧ್ಯಕ್ಷ ಶಿವರಾಜ ಕಪಲಾಪುರೆ, ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಖಜಾಂಚಿ ದೇವಪ್ಪ ಎಂ. ಚಾಂಬೋಳೆ, ಗೌತಮ ಚಿಂತಲಗೇರಾ, ಜೈಶ್ರೀ ಪ್ರಭಾ, ಸಾರಿಕಾ ಗಂಗಾ, ಶೈಲಜಾ ಹುಡಗೆ, ರೂಪಾ ಎಸ್. ಕಾಟಗೌಡರು, ಜಾನಮ್ಮ, ಪರಮೇಶ್ವರಿ ಫುಲೇಕರ್, ಸುನೀಲಕುಮಾರ ಕಸ್ತೂರೆ, ರಾಜಶೇಖರ ಉಪ್ಪಿನ್, ಜಿಲ್ಲಾ, ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಕಾರ್ಯಕಾರಿಣಿ ಸಮಿತಿ ಸದಸ್ಯರು, ನಾಮನಿರ್ದೇಶಿತ ನಿರ್ದೇಶಕರು ಇದ್ದರು.
ನೌಬಾದ್ ಸಿಆರ್‍ಪಿ ಶ್ರೀದೇವಿ ನಿರೂಪಿಸಿದರು. ಕಸ್ತೂರಿ ಪಟಪಳ್ಳಿ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು.
——————-