ಅಕ್ಕಮಹಾದೇವಿ ಕಾಲೇಜಿನಲ್ಲಿ ಎನ್.ಎಸ್.ಎಸ್. ಶಿಬಿರ ಸಮಾರೋಪ
ಬೀದರ್: ಯುವ ಜನರು ದೇಶ ಸೇವೆಗೆ ಮುಂದಾಗಬೇಕು ಎಂದು ಅಕ್ಕ ಮಹಾದೇವಿ ಮಹಿಳಾ ಕಾಲೇಜು ಪ್ರಾಚಾರ್ಯೆ ಡಾ. ರಂಜನಾ ಪಾಟೀಲ ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇಲ್ಲಿಯ ಅಕ್ಕ ಮಹಾದೇವಿ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಪ್ರಗತಿಗೆ ವೈಯಕ್ತಿಕ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಶ್ರಮದಾನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೊಡುಗೆ ಬಹು ದೊಡ್ಡದಾಗಿದೆ ಎಂದು ಹೇಳಿದರು.
ಕಾಲೇಜಿನ ಐಕ್ಯೂಎಸ್‍ಸಿ ಅಧ್ಯಕ್ಷ ಡಾ. ಪ್ರವೀಣಕುಮಾರ ಮಾತನಾಡಿ, ಎನ್.ಎಸ್.ಎಸ್. ಸೇವಾ ಮನೋಭಾವ ಬೆಳೆಸುತ್ತದೆ ಎಂದು ತಿಳಿಸಿದರು.
ಡಾ. ಗಂಗಾಂಬಿಕೆ ಪಾಟೀಲ ಮಾತನಾಡಿ, ಪರಿಸರ ಸಂರಕ್ಷಣೆ ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಪ್ರೊ. ಶರಣಪ್ಪ ದುಬಲಗುಂಡಿ ಮಾತನಾಡಿ, ಗ್ರಾಮಾಭಿವೃದ್ಧಿ ಚಟುವಟಿಕೆಗಳಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ಮುಸ್ತಾನ್, ಅಂಜಲಿ, ರಾಜೇಶ್ವರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಡಾ. ಮೀನಾ ಗಾಯಕವಾಡ್ ಶಿಬಿರದ ವರದಿ ವಾಚಿಸಿದರು.
ಎನ್.ಎಸ್.ಎಸ್. ‘ಬ’ ಘಟಕದ ಅಧಿಕಾರಿ ಡಾ. ಶ್ವೇತಾ ಶೇರಿಕಾರ್ ಉಪಸ್ಥಿತರಿದ್ದರು. ಶಿವಾನಿ ವಂದಿಸಿದರು.
———————