ಬೀದರ್ : ದಿ. ಕಾಜಿ ಅರ್ಷದ್ ಅಲಿಯವರ ಸ್ವಾಭಿಮಾನ ಹಾಗೂ ಸಾತ್ವಿಕ ಗುಣಗಳು ಇಂದಿನ ಯುವ ಪತ್ರಕರ್ತರಿಗೆ ಉಸಿರಾಗಲಿ ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕವು ಆಯೋಜಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷರೂ ಆಗಿದ್ದ ದಿ. ಕಾಜಿ ಅರ್ಷದ್ ಅಲಿಯವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪತ್ರಕರ್ತರಾದವರು ಅಧಿಕಾರಿಗಳೊಂದಿಗೆ ಸ್ನೇಹತ್ವ ಬೆಳೆಸಬೇಕೇ ವಿನಃ ಗುಲಾಮಗಿರಿ ಮಾಡಕೂಡದು. ನಮ್ಮ ವೃತ್ತಿಧರ್ಮ ಪ್ರಾಮಾಣಿಕತೆಯಿಂದ ಪಾಲಿಸಬೇಕು. ನಾವು ಇನ್ನೊಬ್ಬರಿಗೆ ಹೆದರಿಸುವ ಅಥವಾ ಬ್ಲಾö್ಯಕ್ ಮೇಲ್ ಮಾಡುವ ಪತ್ರಕರ್ತರಾಗದೆ ನಮ್ಮ ಬರವಣಿಗೆಗೆ ಜನ ಹೆದರಬೇಕು. ಸಂಬAಧ ಹಾಗೂ ನಿಯಮ ಬೇರೆ ಬೇರೆಯಾಗಿರಬೇಕು. ನಾವು ಮಾರ್ಗದರ್ಶಕರಾಗಬೇಕೆ ಹೊರತು ಅರ್ಧಂಬರ್ದ ತಿಳಿದುಕೊಂಡು ಸುದ್ದಿಮನೆಯ ಪ್ರತಿನಿಧಿಯಾಗಬಾರದು. ಒಟ್ಟಾರೆ ಅರ್ಷದ ಅಲಿಯವರಿಗೆ ನಿಜವಾದ ಶೃದ್ಧಾಂಜಲಿ ಸಲ್ಲಿಕೆಯಾಗಬೇಕಾದರೆ ಗರ್ವ, ಸಿಟ್ಟು, ಅಹಂಕಾರ ಇವುಗಳಿಂದ ವಿಮುಖರಾಗಿರಬೇಕೆಂದು ಕರೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಮಾತನಾಡಿ ಜ್ಞಾನದ ಹಾಗೂ ಧೈರ್ಯದ ಕೊರತೆಯಿಂದ ಇಂದು ಶ್ರೇಷ್ಠ ವರದಿಗಾರಿಕೆ ವಿಮುಖವಾಗುತ್ತಿದೆ. ಹೆಚ್ಚು ಅಧ್ಯಯನಶೀಲರಾಗಿ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳುವಂತೆ ತಿಳಿಸಿದರು.
ಹಿರಿಯ ಪತ್ರಕರ್ತ ಗಂಧರ್ವ ಸೇನಾ ಮಾತನಾಡಿ ಅರ್ಷದ ಅಲಿಯವರು ಒಂದು ವಿಶ್ವಕೋಶದಂತಿದ್ದರು. ಪರಿಪೂರ್ಣ ಅಧ್ಯಯನಗೈದು ಪ್ರಖರ ಸುದ್ದಿ ಬಿತ್ತರಿಸುವ ಅವರ ಕೌಶಲ್ಯ ಇಂದಿನ ಉದಯೋನ್ಮುಖ ಪತ್ರಕರ್ತರಿಗೆ ದಾರಿದೀಪವಾಗಲಿದೆ ಎಂದರು.
ಪತ್ರಕರ್ತ ಬಾಬು ವಾಲಿ ಮಾತನಾಡಿ ಪತ್ರಕರ್ತರು ಪದೇ ಪದೇ ಸೇರುತ್ತಿರಬೇಕು. ಇದರ ಮೂಲಕ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಂಘಟನೆ ಬಲಪಡಿಸಬೇಕೆಂದು ಕರೆ ಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಎಲ್ಲಾ ಹಿರಿಯ ಪತ್ರಕರ್ತರ ಶೃದ್ಧಾಂಜಲಿ ಕಾರ್ಯಕ್ರಮಗಳು ಆಚರಿಸಿ ಗೌರವ ಸಲ್ಲಿಸುತ್ತಿದೆ. ಹಿರಿಯ ಪತ್ರಕರ್ತರ ಮನೆಗೆ ಹೋಗಿ ಅವರಿಗೆ ಸನ್ಮಾನಿಸುವುದು, ಮಾರ್ಗದರ್ಶನ ಪಡೆಯುವುದು, ಪ್ರಶಸ್ತಿ ಪುರಸ್ಕೃತರನ್ನು ಗೌರವಿಸುವುದು, ನೊಂದ ಕುಟುಂಬಗಳಿಗೆ ನೆರವಾಗುವುದು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಪತ್ರಕರ್ತರ ಮಾಳಪ್ಪ ಅಡಸಾರೆ ಹಾಗೂ ಸಿದ್ರಾಮಯ್ಯ ಸ್ವಾಮಿ ಮಾತನಾಡಿದರು. ಅರ್ಷದ ಅಲಿಯವರ ಕುಟುಂಬಸ್ಥರಾದ ಠಿಣಜಿಡಿಞಣಈ ಕಾಜಿ ಅಲಿಯೋದ್ದಿನ್, ಐ.ಎಫ್.ಡಬ್ಲೂ.ಜೆ ಸದಸ್ಯ ಅಪ್ಪಾರಾವ ಸೌದಿ, ಪತ್ರಕರ್ತ ಶಶಿಕುಮಾರ ಪಾಟೀಲ, ವೇದಿಕೆಯಲ್ಲಿದ್ದರು.
ಇದಕ್ಕೂ ಮುನ್ನ ಅರ್ಷದ ಅಲಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ವಾರ್ತಾ ಇಲಾಖೆಯ ವಿಜಯಕೃಷ್ಣ ಸೋಲಪುರ, ಪತ್ರಕರ್ತರಾದ ದೀಪಕ ವಾಲಿ, ಚಂದ್ರಕಾಂತ ಪಾಟೀಲ, ಶ್ರೀನಿವಾಸ ಚೌಧರಿ, ಪೃಥ್ವಿರಾಜ್ ಎಸ್., ನಾಗಶೆಟ್ಟಿ ಧರಂಪುರ, ಅಬ್ದುಲ್ ಖದಿರ, ಶಶಿ ಶೆಂಬೆಳ್ಳಿ, ವಿಜಯಕುಮಾರ ಬೆಲ್ದೆ, ಶಶಿಕಾಂತ ಬಂಬುಳಗಿ, ರೇವಣಸಿದ್ದಪ್ಪ ಪಾಟೀಲ, ಗೋಪಿಚಂದ ತಾಂದಳೆ, ಸುನೀಲ ಭಾವಿಕಟ್ಟಿ, ಚಂದ್ರಕಾಂತ ಹಳ್ಳಿಖೇಡಕರ್, ಎಂ.ಪಿ.ಮುಧಾಳೆ, ಸಂತೋಷ ಚೆಟ್ಟಿ, ಮಹಾರುದ್ರ ಡಾಕುಳಗೆ ಸೇರಿದಂತೆ ಜಿಲ್ಲೆಯ ಇತರೆ ಪತ್ರಕರ್ತರು ಉಪಸ್ಥಿತರಿದ್ದರು. ಆರಂಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ನಿರೂಪಿಸಿದರು. ವಿದ್ಯುನ್ಮಾನ ಮಾಧ್ಯಮದ ಮಲ್ಲಿಕಾರ್ಜುನ ಮರಕಲೆ ವಂದಿಸಿದರು.
—————–