ಬೀದರ್: ತಾಲೂಕಿನ ಅಷ್ಟೂರ ಗ್ರಾಮದಲ್ಲಿ ಅಲ್ಲಮ ಪ್ರಭು ಜಾತ್ರಾ ಸಮಿತಿ ಹಾಗೂ ಎಸ್.ಬಿ. ಪಾಟೀಲ ದಂತ ಮಹಾವಿದ್ಯಾಲಯ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆ ಹಾಗೂ ಸಂಗಮ ವೆಲ್‌ಫೇರ್ ಎಜುಕೇಶನ್ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಉಚಿತ ದಂತ ತಪಾಸಣಾ ಶಿಬಿರ ಆಯೋಜಿಸಲಾಯಿತು.ರೀ ಶಿಬಿರದಲ್ಲಿ ಪರಮ ಪೂಜ್ಯರಾದ ಶ್ರೀ ಶಿವರಾಯ ಒಡೆಯರ್ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು. ಇದೊಂದು ಬಹಳ ಒಳ್ಳೆಯ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಸ್ವಾಮೀಜಿಯವರು ಹಾರೈಸಿದರು.
ಶಿಬಿರದ ಅಧ್ಯಕ್ಷರಾದ ಶಶಿಧರ ಪಾಟೀಲ ಹಾಗೂ ಎಚ್.ಓ.ಡಿ. ಡಾ. ಸಿದ್ದನಗೌಡ ಹಾಗೂ 10 ಜನ ದಂತ ವೈದ್ಯರು ಮತ್ತು ಡಾ. ರಮೇಶ ಓತಿ ಹಾಗೂ ಸಂಗಮ ವೆಲ್‌ಫೇರ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಓತಿ ಶರಣಪ್ಪಾ ಹಾಜರಿದ್ದರು.
ದಂತ ತಪಾಸಣೆಯಲ್ಲಿ 92 ಜನರು ದಂತ ತಪಾಸಣೆದೊಂದಿಗೆ ಔಷದೋಪಚಾರ ಮಾಡಲಾಯಿತು.
——————